ದೇಶವೇ ಮೊದಲು, ಸಬ್ಕಾ ಸಾಥ್ ಸಬ್ಕಾ ವಿಕಾಸ, ಬಡವರಿಗೆ ಬಲ ತುಂಬುವುದು, ಭಯೋತ್ಪಾದನೆ, ಭ್ರಷ್ಟಾಚಾರದ ಬಗ್ಗೆ ಜಿರೋ ಟಾಲರೆನ್ಸ್ ನಮ್ಮ ನೀತಿಗಳಾಗಿವೆ. ಜಗತ್ತು ಗೌರವಿಸುವ ನೇತೃತ್ವ, ನಮ್ಮ ನೇತೃತ್ವ. ನಮ್ಮ ಪ್ರಧಾನಿ ಮೋದಿಯವರಿಗೆ ಜಗತ್ತಿನ 11 ರಾಷ್ಟ್ರಗಳು ತಮ್ಮ ದೇಶಗಳ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿವೆ. ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಹೋದರೂ ಭಾರತಕ್ಕೆ ವಿಶ್ವಮನ್ನಣೆ ತಂದುಕೊಟ್ಟ ನೇತೃತ್ವದ ನಮ್ಮದು: ಸಿ.ಟಿ.ರವಿ
ವಿಜಯಪುರ(ಏ.16): ಸತತ ಹನ್ನೊಂದು ಚುನಾವಣೆಗಳಲ್ಲಿ ಜಯಗಳಿಸಿ ದಾಖಲೆಗೆ ಕಾರಣರಾದ ರಮೇಶ ಜಿಗಜಿಣಗಿ ಅವರ ಸರಳ ಸ್ವಭಾವ, ಜನೋಪಯೋಗಿ ಕೆಲಸ, ಪಕ್ಷದ ಕೆಲಸದ ಕಟಿಬದ್ದತೆ, ಅಪಾರ ಕಾರ್ಯಕರ್ತರ ಬೆಂಬಲ ಆಧರಿಸಿ ಈ ಬಾರಿ ವಿಜಯಪುರ ಜನತೆ ಜಿಗಜಿಣಗಿ ಅವರನ್ನು ಆಶಿರ್ವದಿಸುತ್ತಾರೆಂಬ ವಿಶ್ವಾಸವಿದೆ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಕೆಗಾಗಿ ವಿಜಯಪುರಕ್ಕೆ ಆಗಮಿಸಿದ್ದ ಅವರು ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಿ.ಟಿ. ರವಿ ಅವರು, ದೇಶದಲ್ಲೆಡೆ ಮೋದಿ ಅಲೆ ಬೀಸುತ್ತಿರುವ ಸಂದರ್ಭದಲ್ಲಿ ವಿಜಯಪುರಕ್ಕೆ ಜಿಗಜಿಣಗಿ, ದೇಶಕ್ಕೆ ಮೋದಿ ಎಂಬ ಘೋಷವಾಕ್ಯದೊಂದಿಗೆ ಜನರ ಬಳಿ ಮತಯಾಚನೆ ಮಾಡುತ್ತಿದ್ದೇವೆ ಎಂದರು.
undefined
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ: ಸಚಿವ ಎಂ.ಬಿ.ಪಾಟೀಲ್
ಜಿಲ್ಲಾ ಚುನಾವಣಾ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ..!
ಪ್ರಧಾನಿ ಮೋದಿಯವರು ಎರಡು ದಿನಗಳ ಹಿಂದೆ ಕೇಂದ್ರಿಯ ಕಾರ್ಯಾಲಯದಲ್ಲಿ ಭವಿಷ್ಯದ ಭಾರತ ಗಮನದಲ್ಲಿಟ್ಟುಕೊಂಡು ವಿಕಸಿತ ಭಾರತದ ಸಂಕಲ್ಪ ಪತ್ರ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ನಮ್ಮ ಪ್ರಣಾಳಿಕೆಯಲ್ಲಿ ವಿಶೇಷವಾಗಿ ಮೋದಿ ಗ್ಯಾರಂಟಿ ಇದೆ. ಪ್ರಾಣ ಹೋದ್ರೂ ಕೊಟ್ಟ ಮಾತು ಮೀರಬಾರದೆಂಬುದು, ಸುರಕ್ಷಿತ ಭಾರತ, ಸುಶಿಕ್ಷಿತ ಭಾರತ, ಸಮೃದ್ಧ ಭಾರತ, ಆತ್ಮನಿರ್ಭರ ಭಾರತ, ಮೋದಿ ಗ್ಯಾರಂಟಿಗಳಾಗಿವೆ, ಭಾರತ ವಿಶ್ವಗುರು ಆಗಬೇಕು ಎಂಬುದು ನಮ್ಮ ಗುರಿ. ಈ ರಿಪೋರ್ಟ್ ಕಾರ್ಡ್ ನಲ್ಲಿ ಹತ್ತು ವರ್ಷಗಳಲ್ಲಿ ನಾವು ಮಾಡಿರುವ ರಿಫಾರ್ಮ್, ಪರ್ಫಾರ್ಮ್ ಮತ್ತು ಟ್ರಾನ್ಸ್ಫಾರ್ಮ್ ಈ ತ್ರಿಸೂತ್ರದಲ್ಲಿ ನಾವು ಜನರ ಮುಂದೆ ಹೋಗಿ ಅವರ ಆಶಿರ್ವಾದ ಪಡೆಯುತ್ತೇವೆ ಎಂದರು.
ವಿಶ್ವದಲ್ಲಿ ಭಾರತವನ್ನ 5ನೇ ಆರ್ಥಿಕ ಶಕ್ತಿ ಮಾಡಿದ್ದು ಮೋದಿ
2014 ರ ಮುಂಚೆ ಪತ್ರಿಕೆಗಳಲ್ಲಿ ಕೇವಲ ಹಗರಣಗಳದೇ ಸುದ್ದಿಗಳಿರುತ್ತಿದ್ದವು. ಈಗ ಹಗರಣಗಳ ಬದಲು ಯೋಜನೆಗಳ ಸದ್ದು ಮಾಡುತ್ತಿದ್ದು, ಸಕಾರಾತ್ಮಕವಾಗಿ ಬದಲಾವಣೆಗಳಾಗಿವೆ. ಆರ್ಥಿಕ ದುಸ್ಥಿಗೆ ತಲುಪಿದ್ದ ಭಾರತ ಇಂದು ವಿಶ್ವದಲ್ಲೇ ಐದನೇ ಜಾಗತಿಕ ಆರ್ಥಿಕ ಶಕ್ತಿಯಾಗಿ ಬದಲಾಗಿದೆ. ಇದಕ್ಕೆ ಕಾರಣ ನಮ್ಮ ನೀತಿ, ನೇತೃತ್ವ ಹಾಗೂ ನಿಯತ್ತು ಈ ಬದಲಾವಣೆಗೆ ಕಾರಣ ಎಂದು ತಿಳಿಸಿದ್ದಾರೆ.
ದೇಶವೇ ಮೊದಲು, ಸಬ್ಕಾ ಸಾಥ್ ಸಬ್ಕಾ ವಿಕಾಸ, ಬಡವರಿಗೆ ಬಲ ತುಂಬುವುದು, ಭಯೋತ್ಪಾದನೆ, ಭ್ರಷ್ಟಾಚಾರದ ಬಗ್ಗೆ ಜಿರೋ ಟಾಲರೆನ್ಸ್ ನಮ್ಮ ನೀತಿಗಳಾಗಿವೆ. ಜಗತ್ತು ಗೌರವಿಸುವ ನೇತೃತ್ವ, ನಮ್ಮ ನೇತೃತ್ವ. ನಮ್ಮ ಪ್ರಧಾನಿ ಮೋದಿಯವರಿಗೆ ಜಗತ್ತಿನ 11 ರಾಷ್ಟ್ರಗಳು ತಮ್ಮ ದೇಶಗಳ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿವೆ. ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಹೋದರೂ ಭಾರತಕ್ಕೆ ವಿಶ್ವಮನ್ನಣೆ ತಂದುಕೊಟ್ಟ ನೇತೃತ್ವದ ನಮ್ಮದು ಎಂದು ಹೇಳಿದ್ದಾರೆ.
ಮೋದಿಯವರು ಜಾಗತಿಕ ನಾಯಕರ ರ್ಯಾಕಿಂಗ್ ಶ್ರೇಣಿಯಲ್ಲಿ ಸತತ ನಾಲ್ಕನೇ ಬಾರಿಗೆ ನಂಬರ್ ಒನ್ ಸ್ಥಾನದಲ್ಲಿದ್ದು ಅಘೋಷಿತ ವಿಶ್ವನಾಯಕರಾಗಿ ಹೊರ ಹೊಮ್ಮಿದ್ದಾರೆ. ವಿಶ್ವದ ಅಗ್ರಮಾನ್ಯ ನಾಯಕರು ಅವರನ್ನು ಸಾರ್ವಜನಿಕ ಸಭೆಗಳಲ್ಲಿ ಅವರ ನಾಯಕತ್ವ ಮೆಚ್ಚಿರುವುದು, ಅವರ ವಿಶ್ವನಾಯಕತ್ವಕ್ಕೆ ಸಾಕ್ಷಿಯಾಗಿದೆ. ಅವರ ಒಂದೊಂದು ಮಾತಿಗೆ ಇಡಿ ಜಗತ್ತು ಮನ್ನಣೆ ಕೊಡುತ್ತಿದೆ. ದೇಶದ ಕಟ್ಟಕಡೆಯ ಮನುಷ್ಯನಿಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ವಿವಿಧ ಯೋಜನೆಗಳ ಮೂಲಕ ಸುಮಾರು 34 ಲಕ್ಷ ಕೋಟಿ ಅನುದಾನವನ್ನು ಯಶಸ್ವಿಯಾಗಿ ತಲುಪಿಸಿರುವುದು ನಮ್ಮ ನಿಯತ್ತು. ನಮ್ಮ ನೀತಿ, ನೇತೃತ್ವ ಹಾಗೂ ನಿಯತ್ತನ್ನು ಇಡಿ ದೇಶ ಮೆಚ್ಚಿಕೊಂಡು ನಮ್ಮ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಎರೆಹುಳು ಎಂದ ಸಿ.ಟಿ. ರವಿ..!
ನಮ್ಮ ಪ್ರಣಾಳಿಕೆಯಲ್ಲಿ ಪ್ರಧಾನಿಯವರು ಬಡವರು, ಮಹಿಳೆಯರು, ರೈತರು ಮತ್ತು ಯುವಕರು ಈ ನಾಲ್ಕು ಜಾತಿಗಳಿಗೆ ವಿಶೇಷ ಆದ್ಯತೆ ಕೊಟ್ಟಿದ್ದು ದೇಶವನ್ನು ಅಭಿವೃದ್ಧಿ ಪಥದತ್ತ ತಲುಪಿಸುವುದು ನಮ್ಮ ಗುರಿಯಾಗಿದೆ. ಬಿಜೆಪಿ ಗ್ಯಾರಂಟಿ ಜನರ ಬದುಕನ್ನು ಬದಲಾಯಿಸುವುದು. ನಮ್ಮ ಗ್ಯಾರಂಟಿ ಯೋಜನೆಗಳಿಂದ ದೇಶದ 25 ಕೋಟಿ ಜನ ಅತಿ ಬಡತನದಿಂದ ಮುಕ್ತರಾಗಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಆದರೆ ಕಾಂಗ್ರೆಸ್ ಗ್ಯಾರಂಟಿ ಓಟ್ ಬ್ಯಾಂಕ್ ಸೃಷ್ಟಿಸಿ ಆಮೇಲೆ ಹರಕೆಯ ಕುರಿಯನ್ನಾಗಿ ಪರಿವರ್ತನೆ ಮಾಡುವುದು. ಮೋದಿಯ ಗ್ಯಾರಂಟಿ ಬಡವರ ಬದಕನ್ನು ಬದಲಾಯಿಸುವುದಾಗಿದೆ. ಕಾಂಗ್ರೆಸ್ ಗ್ಯಾರಂಟಿ ಗಾಳಕ್ಕೆ ಎರೆಹುಳು ಸಿಗಿಸುವುದು. ಅವರ ಉದ್ದೇಶ ಮತ ಗಳಿಕೆ, ಆಮೇಲೆ ಭ್ರಷ್ಟಾಚಾರ, ಲೂಟಿ ಮಾಡುವುದಾಗಿದೆ ಎಂದು ಕಿಡಿಕಾರಿದ್ದಾರೆ.
ಭಾರತ ವಿಶ್ವ ಗುರು ಮಾಡುವುದು ಬಿಜೆಪಿ ಗ್ಯಾರಂಟಿ..!
ಬೆಲೆಏರಿಕೆ, ಭ್ರಷ್ಟಾಚಾರ ವ್ಯಾಪಕಗೊಳಿಸಿದ್ದು, ಭ್ರಷ್ಟಾಚಾರಕ್ಕೆ ಹೊಸ ಹೊಸಮಾರ್ಗ ಹುಡುಕಿದ್ದು, ಅಸಂತುಷ್ಠರನ್ನು ಸಂತುಷ್ಟಗೊಳಿಸುವುದು ಕಾಂಗ್ರೆಸ್ ನ ಗ್ಯಾರಂಟಿಯಾಗಿದೆ. ಕ್ಯಾಬಿನೆಟ್ ನಲ್ಲಿ ಸಿಎಂ ಸೇರಿ 34 ಸಚಿವರಿರುತ್ತಾರೆ. ಆದರೆ ಸಿಎಂ ಕಾಂಗ್ರೆಸ್ ನ 56 ಜನರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಿದ್ದಾರೆ. ಸಿಎಂ ಅವರು ದಾಖಲೆ ಪ್ರಮಾಣದಲ್ಲಿ ಸಂಪುಟ ದರ್ಜೆ ಸ್ಥಾನಮಾನ ನೀಡಿ ಲೂಟಿ ಹೊಡೆಯಲು ಲೈಸೆನ್ಸ್ ಕೊಟ್ಟಿದ್ದಾರೆ. ದೂರದೃಷ್ಠಿ ಇಲ್ಲದ ಮೂಲ ಸೌಕರ್ಯಕ್ಕೆ ಆದ್ಯತೆ ಕೊಡುವುದು ಕಾಂಗ್ರೆಸ್ ನೀತಿಯಾದರೆ ಮೂಲಸೌಲಭ್ಯದ ಅಭಿವೃದ್ಧಿಯ ಮೂಲಕ ಜನರ ಬದುಕನ್ನು ಬದಲಾಯಿಸಿ, ಭಾರತವನ್ನು ಅಭಿವೃದ್ಧಿಗೊಳಿಸಿ ದೇಶವನ್ನು ವಿಶ್ವಗುರುವನ್ನಾಗಿ ಮಾಡುವುದು ಬಿಜೆಪಿಯ ಗ್ಯಾರಂಟಿಯಾಗಿದೆ ಎಂದರು.
ಗ್ಯಾರಂಟಿಗೆ ಕಾಂಗ್ರೆಸ್ ಪೆಟೆಂಟ್ ಮಾಡಿಸಿದ್ದಾರಾ?
ಕಾಂಗ್ರೆಸ್ ಗ್ಯಾರೆಂಟಿ ಪದ ಬಳಕೆ ವಿಚಾರವಾಗಿ ಸಿ.ಟಿ.ರವಿ ಮಾತನಾಡಿ, ಗ್ಯಾರೆಂಟಿ ಅವರೇನು ಪೆಟೆಂಟ್ ಮಾಡಿಸಿದ್ದಾ? ಅಥವಾ ಅವರೇ ಹುಟ್ಟುಹಾಕಿದ್ದಾ? ಹಾಗೇನಿಲ್ಲ. ಮೋದಿ ಗ್ಯಾರೆಂಟಿ ದೇಶದ ಭದ್ರತೆಗೆ ಇದೆ, ಕಾಂಗ್ರೆಸ್ ಗ್ಯಾರೆಂಟಿ ಲೂಟಿ ಹೊಡೆಯಲು ಆಗಿದೆ. ನಮ್ಮ ಯೋಜನೆಗಳು ಮೂಲ ಸೌಕರ್ಯಗಳ ಅಭಿವೃದ್ಧಿ ಕೆಲಸಕ್ಕೆ ಕುತ್ತು ತಂದಿಲ್ಲ. ಕಳೆದ ಹತ್ತು ತಿಂಗಳಲ್ಲಿ ಇವರು ಒಂದೂ ರೂಪಾಯಿ ಕೆಲಸ ಮಾಡಿಲ್ಲ. ಗುತ್ತಿಗೆದಾರರು ಬಿಲ್ ಆಗಿಲ್ಲ ಎಂದಿದ್ದಕ್ಕೆ ನಾನೇನು ನೋಟು ಪ್ರಿಂಟ್ ಮಾಡಲಾ ಎಂದು ಸಿಎಂ ಹೇಳಿದ್ದಾರೆ ಎಂದರು.
ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ: ಬಸನಗೌಡ ಪಾಟೀಲ ಯತ್ನಾಳ್
ಎಲೆಕ್ಟ್ರೋಲ್ ಬಾಂಡ್ ಹಗರಣ ಅಲ್ಲ, ಅದು ಅಕೌಂಟೆಬಿಲಿಟಿ ಚೆಕ್ ಮಾಡೋಕೆ ಇದೆ. ರಾಜಕೀಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಎಲೆಕ್ಟೋಲ್ ಬಾಂಡ್ ಅವಶ್ಯಕತೆ ಇದೆ. ಎಲ್ಲಾ ಪಾರ್ಟಿಗೂ ದೇಣಿಗೆ ಕೊಟ್ಟಿದಾರೆ. ಹೆದರಿಸಿ ಬೆದರಿಸಿ ತೆಗೆದುಕೊಳ್ಳುವುದು ಕಾಂಗ್ರೆಸ್ ಸಂಸ್ಕ್ರತಿ, ಅದು ನಮ್ಮದಲ್ಲ. ಲೋಕಸಭೆಯಲ್ಲಿ ಬಿಲ್ ಪಾಸ ಮಾಡಿ ಮಾಡಿರುವಂತದ್ದು. ರೂಲಿಂಗ್ ಪಾರ್ಟಿ ಇದ್ರೆ ಸ್ವಲ್ಪ ಜಾಸ್ತಿ ಕೊಡುತ್ತಾರೆ, ಅಪೋಸಿಟ್ ಇದ್ದವರಿಗೆ ಸ್ವಲ್ಪ ಕಡಿಮೆ ಕೊಡುತ್ತಾರೆ. ಬಿಲ್ ತಂದಿದ್ದಕ್ಕೆ ಯಾರಿಗೆ ಎಷ್ಟು ಕೊಟ್ಟರು ಎಂಬುದು ಗೊತ್ತಾಗ್ತಿದೆ.
ಕಾಂಗ್ರೆಸ್ ಪಾಕಿಸ್ತಾನದಲ್ಲಿ ನೆಲೆ ಹುಡುಕಬೇಕು:
ಬಿಜೆಪಿ ಬಂಡಾಯ ವಿಚಾರವಾಗಿ, ವಾಪಸ್ ತೆಗೆದುಕೊಳ್ಳಲು ಸಮಯವಿದೆ, ಬಹುತೇಕ ಅಸಮಾಧಾನ ಹೋಗಲಾಡಿಸಲಾಗಿದೆ. ವ್ಯಕ್ತಿಗಿಂತ ಪಕ್ಷಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ನಮ್ಮ ಉದ್ದೇಶ, ರಾಜ್ಯದ 28 ಸೀಟ್ ಗೆಲ್ಲಲು ನಮ್ಮ ಪ್ಲಾನ್ ಇದೆ. ರಾಹುಲ್ ಗಾಂಧಿ ಹೆಸರು ಹೇಳಿದರೆ ಬರುವಷ್ಟು ಸೀಟ್ ಬರಲ್ಲಾ ಎಂಬುದು ಅವರಿಗೆ ಗೊತ್ತಿದೆ. ರಾಹುಲ್ ಗಾಂಧಿ ಈ ಬಾರಿ ಅಧಿಕ ಮುಸ್ಲಿಂರಿರುವ ಕೇರಳ ಕಡೆ ಹೋಗಿದ್ದಾರೆ. ಕಾಂಗ್ರೆಸ್ ನೆಲೆ ಹುಡುಕಲು ಪಾಕಿಸ್ತಾನದಲ್ಲಿ ಹುಡುಕಬೇಕಾಗುತ್ತದೆ. ಭಾರತದಲ್ಲಿ ಹಿಂದೂ ಮೆಜಾರಿಟಿ ಇದೆ. ಅದಕ್ಕೆ ಅವರು ಗೆದ್ದಾಗೆಲ್ಲಾ ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಮೈನಾರಿಟಿ ಅವರು ಇಲ್ಲಾ. ರಾಹುಲ್ ಗಾಂಧಿ ಅವರು ಪಾಕಿಸ್ತಾನದಲ್ಲಿ ನೆಲೆ ಹುಡುಕಿಕೊಳ್ಳಬಹುದು ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಈ ವೇಳೆ ಕಲಬುರಗಿ ಸಂಸದ ಉಮೇಶ ಜಾಧವ, ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ, ಹಾಲಪ್ಪಆಚಾರ್, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ್ ಸಾಸನೂರ ಸೇರಿ ಹಲವು ಪ್ರಮುಖರಿದ್ದರು.