ಪ್ರಾಮಾಣಿಕರು ಪಾಸ್ ಆಗ್ತಾರೆ, ಕಾಪಿ ಮಾಡಿದವರು ಬಾಯಿ ಬಡೆದುಕೊಳ್ಳುತ್ತಾರೆ: ಸಿ.ಟಿ.ರವಿ

By Suvarna News  |  First Published Apr 30, 2022, 7:16 PM IST

* ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ
* ನೇಮಕಾತಿ ರದ್ದು ಮಾಡಿ ಮರು ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನ
* ಪ್ರಾಮಾಣಿಕರು ಪಾಸ್ ಆಗ್ತಾರೆ, ಕಾಪಿ ಮಾಡಿದವರು ಬಾಯಿ ಬಡೆದುಕೊಳ್ಳುತ್ತಾರೆ ಎಂದ ಸಿಟಿ ರವಿ


ವರದಿ: ಗುರುರಾಜ್ ಹೂಗಾರ್
ಹುಬ್ಬಳ್ಳಿ:, (ಏ.30): ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇದರ ಮಧ್ಯೆ ಈಗಾಗಲೇ ಬರೆದ ಪರೀಕ್ಷೆಯನ್ನು ರದ್ದು ಮಾಡಿ ಮರು ಪರೀಕ್ಷೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಘೋಷಿಸಿದ್ದಾರೆ. ಆದ್ರೆ, ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ.

ಇನ್ನು ಈ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದು(ಶನಿವಾರ) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿದ್ದು, ಅಕ್ರಮ ನಡೆದಿರೋದು ಮೇಲ್ನೋಟಕ್ಕೆ ಗೊತ್ತಾದ ಮೇಲೆ ತನಿಖೆಗೆ ಆದೇಶ ನೀಡಲಾಗಿದೆ. ಅಲ್ಲದೇ ತನಿಖೆ ನಡೆದು ಕೋರ್ಟ್ ಆದೇಶ ಬರುವವರೆಗೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರು ಪರೀಕ್ಷೆಗೆ ಆದೇಶ ನೀಡಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಪಾಸ್ ಆಗ್ತಾರೆ. ಕಾಫಿ ಮಾಡಿದವರು ಫೇಲ್ ಆಗ್ತಾರೆ ಎಂದರು.

Tap to resize

Latest Videos

ಯಾವ ನೈತಿಕತೆ ಆಧಾರದಲ್ಲಿ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿ ಮುಂದುವರಿದಿದ್ದಾರೆ?

ಅಕ್ರಮ ನಡೆದಿದೆ ಎಂದು ಗೊತ್ತಾದ ಮೇಲೆ ಹಾಗೂ ತನಿಖೆಗೆ ವಹಿಸದ, ಹಾಗೆಯೇ ನೇಮಕ ಮಾಡಿಕೊಂಡರೇ ತಪ್ಪಿತಸ್ಥರು ಯಾರು ಪ್ರಮಾಣಿಕರು ಯಾರು ಅಂತ ಹೇಗೆ ಗೊತ್ತಾಗುತ್ತದೆ‌.? ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದರು.

ಪ್ರಾಮಾಣಿಕವಾಗಿ ನೇಮಕಾತಿ ನಡೆಯಬೇಕು ಯಾವುದೇ ಸಂಶಯಕ್ಕೂ ದಾರಿಯಾಗಬಾರದು ಎಂಬುವಂತ ಸದುದ್ದೇಶದಿಂದ ಸರ್ಕಾರ ನಿರ್ಧಾರವನ್ನು ಕೈಗೊಂಡಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಭಯಪಡುವ ಅಗತ್ಯವಿಲ್ಲ. ಕಾಪಿ ಮಾಡಿ ಬರೆದವರು ಬಾಯಿ ಬಡೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ತನಿಖೆ ಪೂರ್ಣಗೊಂಡು ಮತ್ತೆ ನೇಮಕ ಆಗುವಷ್ಟರಲ್ಲಿ ಅವರೆಲ್ಲರೂ ರಿಟೈರ್ಡ್ ಹಂತಕ್ಕೆ ಬಂದಿರುತ್ತಾರೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಮರು ಪರೀಕ್ಷೆ ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಶಾಸಕರಾದ ಅಮೃತ ದೇಸಾಯಿಯವರು ಬಹಳಷ್ಟು ದಿನಗಳಿಂದ ನಮ್ಮ ಕ್ಷೇತ್ರಕ್ಕೆ ಬರಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ಇಲ್ಲಿಯೇ ಇರುವುದರಿಂದ ಈಗ ಆಗಮಿಸಿದ್ದೇನೆ. ಎಲ್ಲರೂ ಸೇರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆ ಎಂದು ಧಾರವಾಡ ಜಿಲ್ಲಾ ಪ್ರವಾಸದ ಕುರಿತು ಮಾಹಿತಿ ನೀಡಿದರು.

ಕಾಂಗ್ರೆಸ್ ಮುಖಂಡ ಅರೆಸ್ಟ್
545 ಪಿಎಸ್ ಐ ಹುದ್ದೆಗಳ  ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಐಡಿ ಪೊಲೀಸರು ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಂತೇಶ್  ಪಾಟೀಲ್ ನನ್ನು ಸಿಐಡಿ  ಬಂಧಿಸಿತ್ತು. ಅಲ್ಲದೇ ಮಹಂತೇಶ್  ಪಾಟೀಲ್ ಸಹೋದರ ಕಾಂಗ್ರೆಸ್ ಮುಖಂಡ ರುದ್ರಗೌಡ ಪಾಟೀಲ್ ನನ್ನು ಮಹಾರಾಷ್ಟ್ರದಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.  ಟವರ್ ಲೊಕೇಷನ್ ಆಧರಿಸಿ ಸೊಲ್ಲಾಪುರದಲ್ಲಿ ರುದ್ರೇಗೌಡರನ್ನ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ನಾಯಕಿ ದಿವ್ಯಾ ಅರೆಸ್ಟ್
ಯೆಸ್...ಈ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ 18 ದಿನಗಳ ಬಳಿಕ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ದಿವ್ಯ ಹಾಗರಗಿ ಅವರು ತಲೆಮರೆಸಿಕೊಂಡಿದ್ದರು. ಅವರ ಬಂಧನಕ್ಕೆ ಸಿಐಡಿ ಆರು ತಂಡಗಳನ್ನು ಸಹ ರಚಿಸಿತ್ತು. ಕೊನೆ ಅವರ ಗೆಳತಿಯನ್ನು ವಿಚಾರಣೆಗೊಳಪಡಿಸಿದ ಬಳಿಕ ದಿವ್ಯಾ ಹಾಗರಗಿಯ ಸುಳಿವು ಸಿಕಿತ್ತು. ಮಹಾರಾಷ್ಟ್ರದ ಉದ್ಯಮಿಯೊಬ್ಬರು ದಿವ್ಯಾಗೆ ಆಶ್ರಯ ನೀಡಿದ್ದರು. ಇದೀಗ ಸಿಐಡಿ ಅಧಿಕಾರಿಗಳು ದಿವ್ಯಾ ಜೊತೆ ಆಶ್ರಯ ನೀಡಿದವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪ್ರಧಾನಿ ಕಾರ್ಯಾಲಯಕ್ಕೆ ದೂರು
 ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಹಗರಣ(PSI Recruitment Scam) ಸಾಕಷ್ಟು ಸದ್ದು ಮಾಡ್ತಿದೆ. 18 ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಪ್ರಕರಣದ ಕಿಂಗ್‌ಪಿನ್‌ ದಿವ್ಯಾ ಹಾಗರಗಿ(Divya Hagaragi) ಕೊನೆಗೂ ಸಿಐಡಿ(CID) ಬಲೆಗೆ ಬಿದ್ದಿದ್ದಾಳೆ. ಬೆನ್ನಲ್ಲೇ ಸರ್ಕಾರ ಪಿಎಸ್‌ಐ ನೇಮಕಾತಿಯನ್ನೇ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶ ಹೊರಡಿಸಿದೆ. ಆದ್ರೀಗ ಬಿಜೆಪಿ ಸರ್ಕಾರದಲ್ಲೇ ನಡೆದ ಈ ಪಿಎಸ್‌ಐ ಹಗರಣದ ಬಗ್ಗೆ ವಿಜಯಪುರದ ಬಿಜೆಪಿ ಮುಖಂಡನೊಬ್ಬ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದ್ದಾರೆ.

ರಾಜ್ಯ ಸರ್ಕಾರ(Government of Karnataka) ಪಿಎಸ್‌ಐ ನೇಮಕಾತಿಯನ್ನೇ ರದ್ದುಗೊಳಿಸಿ ಆದೇಶವನ್ನೇನೋ ನೀಡಿದೆ. ಮರು ಪರೀಕ್ಷೆಗೂ ದಿನಾಂಕ ನಿಗದಿ ಪಡೆಸುವ ಮಾತನ್ನಾಡಿದೆ. ಆದ್ರೆ ಇತ್ತ ಬಿಜೆಪಿಯ ಯುವ ಮುಖಂಡನೊಬ್ಬ ಪ್ರಧಾನಿ ಕಚೇರಿಗೆ(Office of the Prime Minister) ದೂರು ನೀಡಿದ್ದಾನೆ. ಪಿಎಸ್‌ಐ ಅಕ್ರಮ ನೇಮಕಾತಿ ವಿರುದ್ಧ ಸಿಡಿದೆದ್ದಿರುವ ಶಾಸಕ ಯತ್ನಾಳ್‌(Basanagouda Patil Yatnal) ಆಪ್ತ, ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅನ್ನಿಗೇರಿ ಪಿಎಂ ಕಚೇರಿ ದೂರು ನೀಡಿದ್ದಾನೆ. ಇ-ಮೇಲ್‌(E-Mail) ಮೂಲಕ ದೂರು ಸಲ್ಲಿಕೆ ಮಾಡಿದ್ದು, ದೂರು ರಜಿಸ್ಟರ್‌ ಆಗಿರುವ ಬಗ್ಗೆ ಪ್ರಧಾನಿ ಕಚೇರಿಯಿಂದ ರಿಪ್ಲೈ ಕೂಡ ಬಂದಿದೆ.

click me!