Assembly Election 2023ಚುನಾವಣೆಗೆ ಮುನ್ನವೇ ಸುರಪುರದಲ್ಲಿ ಹೊಡಿ ಬಡಿ ಕಡಿ ರಾಜಕೀಯ!

By Suvarna News  |  First Published Apr 30, 2022, 1:26 PM IST
  • ಎಲೆಕ್ಷನ್ ಗೆಲ್ಬೇಕಂದ್ರೆ ಹೊಡಿಯಿರಿ, ಕಡಿಯಿರಿ: ರಾಜಾ ವೆಂಕಟಪ್ಪ ನಾಯಕ
  • ಫಸ್ಟ್ ನಮ್ಮ ಜೀವ ಹೋದ್ಮೆಲೆ ಕಾರ್ಯಕರ್ತರ ಜೀವ ಹೋಗಬೇಕು: ರಾಜೂಗೌಡ
  • ಶಾಸಕ ರಾಜುಗೌಡ ಹಾಗೂ ಮಾಜಿ ಶಾಸಕ ರಾಜಾವೆಂಕಟಪ್ಪ ನಡುವೆ ಟಾಕ್ ಫೈಟ್...!

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಎ.30): ವಿಧಾನಸಭೆ ಚುನಾವಣೆ ( assembly election) ಇನ್ನು ಒಂದು ವರ್ಷ ಇರುವ ಮುನ್ನವೇ ಯಾದಗಿರಿಯಲ್ಲಿ (Yadagiri) ರಾಜಕೀಯ ನಾಯಕರ ಕದನ ರಂಗೇರಿದೆ. ಇತ್ತ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ (surapura assembly constituency)  ಹೇಗಾದರು ಮಾಡಿ ಮುಂದಿನ‌ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸುರಪುರ ಬಿಜೆಪಿ ಶಾಸಕ ರಾಜುಗೌಡ (raju gowda) ಅವರು ಶತಃಪ್ರಯತ್ನ ಮಾಡುತ್ತಿದ್ದಾರೆ.  ಅದೆ ರೀತಿ ಇತ್ತ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ (raja venkatappa nayaka ) ಗೂ ಕೂಡ ಪ್ರತಿಷ್ಠೆಯಾಗಿದೆ. ಈಗ ಹಾಲಿ, ಮಾಜಿ ಶಾಸಕರ ನಡುವಿನ ಟಾಕ್ ಪೈಟ್ ಹೊಡಿಬಡಿ ಹಂತಕ್ಕೆ ತಲುಪಿದೆ.

Tap to resize

Latest Videos

undefined

ನಾವು ಎಲೆಕ್ಷನ್ ಗೆಲ್ಬೇಕಂದ್ರೆ ಹೊಡಿ, ಕಡೀರಿ ಎಂದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ: ಸುರಪುರ ಕ್ಷೇತ್ರದಾದ್ಯಂತ ಈಗಾಗಲೇ ರಾಜಕೀಯ ಕಾವು ಜೋರಾಗಿಯೇ ನಡಿತಾ ಇದೆ. ಹಾಲಿ ಶಾಸಕ ರಾಜೂಗೌಡ ಮತ್ತು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಇಬ್ಬರು ಪಕ್ಷ ಸಂಘಟನೆಗಾಗಿ ಹಳ್ಳಿ ಹಳ್ಳಿಗೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ನಾವು ಎಲೆಕ್ಷನ್ ಗೆಲ್ಲಬೇಕಂದ್ರೆ ಹೊಡಿಬೇಕು ಹೊಡಿಸಿಕೊಳ್ಳಬೇಕು, ಕಡಿಬೇಕು ಕಡಿಸಿಕೊಳ್ಳಬೇಕು. ಜೀವವಾದ್ರು ಚಿಂತೆಯಿಲ್ಲ ಹೊಡಿ, ಕಡಿರಿ ಎಂದು ಕಾರ್ಯಕರ್ತರಿಗೆ ಪ್ರಚೋಧನಕಾರಿ ಮಾತನಾಡಿದ್ದರು. 

ಅಪ್ಪು ಫೋಟೋದ ಮುಂದೆ ಮದುವೆಯಾದ Chikkamagaluru ಜೋಡಿ

ರಾಜಾ ವೆಂಕಟಪ್ಪ ನಾಯಕನಿಗೆ ಶಾಸಕ ರಾಜೂಗೌಡ ಟಕ್ಕರ್: ಹೊಡೆಯಿರಿ, ಕಡಿಯಿರಿ ಎಂದಿದ್ದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕನಿಗೆ ಹಾಲಿ ಶಾಸಕ ರಾಜೂಗೌಡ ಸಖತ್ ಟಕ್ಕರ್ ನೀಡಿದ್ದಾರೆ. ದುಷ್ಟರು ಕಾರ್ಯಕರ್ತರನ್ನು ತೊಡವಿದರೆ, ನಾವಂತು ಸುಮ್ಮನೇ ಕೂರಲ್ಲ, ಕಾರ್ಯಕರ್ತರ ಜೀವ ಹೋಗುವುದಕ್ಕೆ ನಾವು ಬೀಡಲ್ಲ. ಫಸ್ಟ್ ನಮ್ಮ ಜೀವ ಹೋದ್ಮೆಲೆ ಕಾರ್ಯಕರ್ತರ ಜೀವ ಹೋಗಬೇಕು, ನಾವು ಕೂಡ ಹೊಡೆದಾಟಕ್ಕೆ ರೆಡಿ ಇದೀವಿ. ಕಾರ್ಯಕರ್ತರಿಗಾಗಿ ಜೀವ ಪಟಕಿಟ್ಟಿದ್ದೇವೆ, ಇಲ್ಲದಿದ್ರೆ ಸುರಪುರದಲ್ಲಿ ಎಂಎಲ್ಎ ಆಗಲು ಬೀಡುತ್ತಿರಲಿಲ್ಲ, ಕಾರ್ಯಕರ್ತರ ರಕ್ಷಣೆ ಮಾಡಲು ಆಗದಿದ್ರೆ ಸುರಪುರ ಕ್ಷೇತ್ರದ ಎಂಎಲ್ಎ ಆಗುತ್ತಿರಲಿಲ್ಲ. ನಾವು 2004 ರಲ್ಲಿ ಎಂಎಲ್ಎ ಆದ ನಂತರ ತಾಲೂಕಿನಲ್ಲಿ ರೌಡಿಶಂ ಕಿತ್ತು ಹಾಕುವ ಕೆಲಸ ಮಾಡಿದ್ದೇನೆ, ಈಗ ಹೊಡೆದು ಬಡಿಸಿಕೊಳ್ಳುವುದು ಇಲ್ಲ, ಇನ್ನೆದಿದ್ರು ಏವ್ವಾ, ತಾಯಿ ಎಂದು ಕೈ ಮುಗಿದರೆ ಓಟ್ ಹಾಕುತ್ತಾರೆ ಎಂದು ರಾಜಾ ವೆಂಕಟಪ್ಪ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಸುರಪುರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆ ಹೆಚ್ಚು: ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆ ಹೆಚ್ಚಾಗಿದೆ. ಬಿಜೆಪಿಯಿಂದ ರಾಜೂಗೌಡ, ಕಾಂಗ್ರೇಸ್ ನಿಂದ ರಾಜಾ ವೆಂಕಟಪ್ಪ ನಾಯಕ ಅಭ್ಯರ್ಥಿಗಳಾಗುವ ಸಾಧ್ಯತೆಗಳಿವೆ. ಆದ್ರೆ ಇಲ್ಲೇನಿದ್ರು ಹಾಲಿ ಶಾಸಕ ರಾಜೂಗೌಡ ಮತ್ತು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನಡುವೆ ಕದನ ಜೋರಾಗಿಯೇ ನಡೆಯುತ್ತಿದೆ. ಕಳೆದ 2 ದಶಕಗಳಿಂದಲೂ ರಾಜಾ ವೆಂಕಟಪ್ಪ ನಾಯಕನಿಗೆ ಶಾಸಕ ರಾಜೂಗೌಡನೇ ಪ್ರಮುಖ ಎದುರಾಳಿ. ಇಬ್ಬರೂ ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ರು ಇವರಿಬ್ಬರು ನಡುವಿನ ಕಾಳಗ ಬಲು ರೋಚಕವಾಗಿರುತ್ತದೆ ಹಾಗಾಗಿ ಸುರಪುರ ಕ್ಷೇತ್ರ ವ್ಯಕ್ತಿ ಪ್ರತಿಷ್ಠೆಯಾಗಿದೆ. 

INDIAN ARMY RECRUITMENT 2022: 4 ವರ್ಷಗಳ B.SC  ನರ್ಸಿಂಗ್ ಕೋರ್ಸ್ 2022 ಗಾಗಿ ಅಧಿಸೂಚನೆ

ಸುರಪುರ ಡಿಪರೆಂಟ್ ವಿಧಾನಸಭಾ ಕ್ಷೇತ್ರ: ಸುರಪುರ ವಿಧಾನಸಭೆ ಕೇತ್ರ ಎಸ್.ಟಿ ಮೀಸಲು ಕ್ಷೇತ್ರವಾಗಿದೆ. ಈ ಕ್ಷೆಡತ್ರದಲ್ಲಿ ಕಾರ್ಯಕರ್ತರು ತಮ್ಮ ನಾಯಕರನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಮಾತೆ ಇಲ್ಲ, ಇಲ್ಲಿ ರಾಜೂಗೌಡ ಮತ್ತು ರಾಜಾ ವೆಂಕಟಪ್ಪ ನಾಯಕರಿಗೆ ತಮ್ಮದೆಯಾದ ಸಾಂಪ್ರದಾಯಿಕ ಮತಗಳಿವೆ, ಆ ಮತಗಳು ಯಾವುದೇ ಕಾರಣಕ್ಕೂ ಇವರಿಬ್ಬರನ್ನು ಬಿಟ್ಟು ಹೋಗುವುದು ವಿರಳ. 2023 ರ ಚುನಾವಣೆಯಲ್ಲಿ ಶಾಸಕ ರಾಜುಗೌಡ ಬಿಜೆಪಿ ಪಕ್ಷದಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಅವರು ಸ್ಪರ್ಧೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ ಚುನಾವಣೆ ಮುನ್ನವೇ ಇಬ್ಬರ ನಡುವೆ ಟಾಕ್ ಫೈಟ್ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕಾಗಿದೆ.

click me!