'PSI ಅಕ್ರಮ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಎಲ್ಲರೂ ಪಾತ್ರಧಾರರೇ'

By Suvarna News  |  First Published Apr 30, 2022, 3:09 PM IST

* PSI ಅಕ್ರಮ ಪ್ರಕರಣವನ್ನು ಗಂಭೀರವಾಗಿ ತಗೆದುಕೊಳ್ಳಬೇಕು
* ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಎಲ್ಲರೂ ಪಾತ್ರಧಾರರೇ
* ಒರಿಜಿನಲ್​​ ಬಿಜೆಪಿಯವರಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
 


ವಿಜಯಪುರ, (ಏ.30):  ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರನ್ನ ಬಂಧಿಸಿ ವಿಚಾರಣೆ ನಡೆಸಿದೆ.

ಇನ್ನು ಇದಕ್ಕೆ ವಿಯಪುರದಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮ ಸರ್ಕಾರ ಇದೆ ಅಂತಾ ಸಮರ್ಥನೆ ಮಾಡಿಕೊಳ್ಳಲ್ಲ, ಕಳ್ಳರನ್ನು ನಂಬಿದ್ದಕ್ಕೆ ಇವತ್ತು ಇಂಥಾ ಪರಿಸ್ಥಿತಿ ಬಂದಿದೆ. ಡಿಸಿ-ಎಸ್ಪಿಗಳ ನೇಮಕಕ್ಕೆ ಮೊದಲು ಹಣ ತೆಗೆದುಕೊಳ್ತಿರಲಿಲ್ಲ,ಈಗ ಡಿಸಿ-ಎಸ್ಪಿ ಹುದ್ದೆಗಳನ್ನ ನಿಲಾವ್ (ಹರಾಜು) ಗೆ ಇಟ್ಟಿದ್ದಾರೆ ಎಂದರು.

Tap to resize

Latest Videos

ಎಲ್ಲರೂ ಕಳ್ಳರಿದ್ದಾರೆ. ಒರಿಜಿನಲ್​​ ಬಿಜೆಪಿಯವರಿಲ್ಲ, PSI ಅಕ್ರಮ ಪ್ರಕರಣವನ್ನು ಗಂಭೀರವಾಗಿ ತಗೆದುಕೊಳ್ಳಬೇಕು. ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಎಲ್ಲರೂ ಪಾತ್ರಧಾರರೇ, ಅರ್ಹರಿಗೆ 10 ಬಾರಿ ಪರೀಕ್ಷೆ ನಡೆಸಿದರೂ ಬೇಸರ ಆಗಲ್ಲ. ಬ್ಲೂ ಟೂತ್​​ ಬಳಸಿ ಪಾಸಾದವರಿಗೆ ಶಿಕ್ಷೆ ಆಗಲೇಬೇಕು ಎಂದು ಯತ್ನಾಳ್​ ಆಗ್ರಹಿಸಿದರು.

ಪಿಎಸ್‌ಐ ಅಕ್ರಮ ನೇಮಕಾತಿ: ಬಿಜೆಪಿ ಮುಖಂಡನಿಂದಲೇ ಪ್ರಧಾನಿ ಕಚೇರಿಗೆ ದೂರು

ಕಾಂಗ್ರೆಸ್ ಮುಖಂಡ ಅರೆಸ್ಟ್
545 ಪಿಎಸ್ ಐ ಹುದ್ದೆಗಳ  ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಐಡಿ ಪೊಲೀಸರು ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಂತೇಶ್  ಪಾಟೀಲ್ ನನ್ನು ಸಿಐಡಿ  ಬಂಧಿಸಿತ್ತು. ಅಲ್ಲದೇ ಮಹಂತೇಶ್  ಪಾಟೀಲ್ ಸಹೋದರ ಕಾಂಗ್ರೆಸ್ ಮುಖಂಡ ರುದ್ರಗೌಡ ಪಾಟೀಲ್ ನನ್ನು ಮಹಾರಾಷ್ಟ್ರದಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.  ಟವರ್ ಲೊಕೇಷನ್ ಆಧರಿಸಿ ಸೊಲ್ಲಾಪುರದಲ್ಲಿ ರುದ್ರೇಗೌಡರನ್ನ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ನಾಯಕಿ ದಿವ್ಯಾ ಅರೆಸ್ಟ್
ಯೆಸ್...ಈ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ 18 ದಿನಗಳ ಬಳಿಕ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ದಿವ್ಯ ಹಾಗರಗಿ ಅವರು ತಲೆಮರೆಸಿಕೊಂಡಿದ್ದರು. ಅವರ ಬಂಧನಕ್ಕೆ ಸಿಐಡಿ ಆರು ತಂಡಗಳನ್ನು ಸಹ ರಚಿಸಿತ್ತು. ಕೊನೆ ಅವರ ಗೆಳತಿಯನ್ನು ವಿಚಾರಣೆಗೊಳಪಡಿಸಿದ ಬಳಿಕ ದಿವ್ಯಾ ಹಾಗರಗಿಯ ಸುಳಿವು ಸಿಕಿತ್ತು. ಮಹಾರಾಷ್ಟ್ರದ ಉದ್ಯಮಿಯೊಬ್ಬರು ದಿವ್ಯಾಗೆ ಆಶ್ರಯ ನೀಡಿದ್ದರು. ಇದೀಗ ಸಿಐಡಿ ಅಧಿಕಾರಿಗಳು ದಿವ್ಯಾ ಜೊತೆ ಆಶ್ರಯ ನೀಡಿದವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪ್ರಧಾನಿ ಕಾರ್ಯಾಲಯಕ್ಕೆ ದೂರು
 ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಹಗರಣ(PSI Recruitment Scam) ಸಾಕಷ್ಟು ಸದ್ದು ಮಾಡ್ತಿದೆ. 18 ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಪ್ರಕರಣದ ಕಿಂಗ್‌ಪಿನ್‌ ದಿವ್ಯಾ ಹಾಗರಗಿ(Divya Hagaragi) ಕೊನೆಗೂ ಸಿಐಡಿ(CID) ಬಲೆಗೆ ಬಿದ್ದಿದ್ದಾಳೆ. ಬೆನ್ನಲ್ಲೇ ಸರ್ಕಾರ ಪಿಎಸ್‌ಐ ನೇಮಕಾತಿಯನ್ನೇ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶ ಹೊರಡಿಸಿದೆ. ಆದ್ರೀಗ ಬಿಜೆಪಿ ಸರ್ಕಾರದಲ್ಲೇ ನಡೆದ ಈ ಪಿಎಸ್‌ಐ ಹಗರಣದ ಬಗ್ಗೆ ವಿಜಯಪುರದ ಬಿಜೆಪಿ ಮುಖಂಡನೊಬ್ಬ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದ್ದಾರೆ.

ರಾಜ್ಯ ಸರ್ಕಾರ(Government of Karnataka) ಪಿಎಸ್‌ಐ ನೇಮಕಾತಿಯನ್ನೇ ರದ್ದುಗೊಳಿಸಿ ಆದೇಶವನ್ನೇನೋ ನೀಡಿದೆ. ಮರು ಪರೀಕ್ಷೆಗೂ ದಿನಾಂಕ ನಿಗದಿ ಪಡೆಸುವ ಮಾತನ್ನಾಡಿದೆ. ಆದ್ರೆ ಇತ್ತ ಬಿಜೆಪಿಯ ಯುವ ಮುಖಂಡನೊಬ್ಬ ಪ್ರಧಾನಿ ಕಚೇರಿಗೆ(Office of the Prime Minister) ದೂರು ನೀಡಿದ್ದಾನೆ. ಪಿಎಸ್‌ಐ ಅಕ್ರಮ ನೇಮಕಾತಿ ವಿರುದ್ಧ ಸಿಡಿದೆದ್ದಿರುವ ಶಾಸಕ ಯತ್ನಾಳ್‌(Basanagouda Patil Yatnal) ಆಪ್ತ, ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅನ್ನಿಗೇರಿ ಪಿಎಂ ಕಚೇರಿ ದೂರು ನೀಡಿದ್ದಾನೆ. ಇ-ಮೇಲ್‌(E-Mail) ಮೂಲಕ ದೂರು ಸಲ್ಲಿಕೆ ಮಾಡಿದ್ದು, ದೂರು ರಜಿಸ್ಟರ್‌ ಆಗಿರುವ ಬಗ್ಗೆ ಪ್ರಧಾನಿ ಕಚೇರಿಯಿಂದ ರಿಪ್ಲೈ ಕೂಡ ಬಂದಿದೆ.

click me!