ಕರ್ನಾಟಕ ರಾಜ್ಯಸಭೆ ಚುನಾವಣೆಗೆ ದಿನಾಂಕ ಘೋಷಣೆ

By Suvarna NewsFirst Published May 12, 2022, 3:04 PM IST
Highlights

* ರಾಜ್ಯ ಸಭೆ ಚುನಾವಣೆ ಘೋಷಣೆ.. 
* ರಾಜ್ಯದ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆ
* ಜೂನ್  10 ರಂದು ಚುನಾವಣೆ

ಬೆಂಗಳೂರು, (ಮೇ.12): ಕರ್ನಾಟಕದ ವಿಧಾನಪರಿಷತ್ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಇದೀಗ ರಾಜ್ಯಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. 

ರಾಜ್ಯದ 4 ಸ್ಥಾನಗಳಿಗೆ ಜೂನ್  10 ರಂದು ಚುನಾವಣೆ ನಡೆಯಲಿದ್ದು,  ಅಂದೇ (ಜೂನ್ 10) ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ನಿರ್ಮಲಾ ಸೀತಾರಾಮನ್, ಕೆ.ಸಿ. ರಾಮಮೂರ್ತಿ,  ಜೈರಾಂ ರಮೇಶ್ ನಿವೃತ್ತಿ ಹಾಗೂ ಈಗಾಗಲೇ ಆಸ್ಕರ್ ಫರ್ನಾಂಡೀಸ್ ನಿಧನದಿಂದ ತೆರವಾಗಿರುವ ಒಂದು ಸ್ಥಾನ ಸೇರಿದಂತೆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಮೇ 31 ಕೊನೆಯ ದಿನವಾಗಿದೆ.

ಕರ್ನಾಟಕದ 7 ವಿಧಾನಪರಿಷತ್‌ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆ 

ಕರ್ನಾಟಕದಿಂದ ರಾಜ್ಯಸಭೆ ಆಯ್ಕೆಯಾಗಿದ್ದ ಕೆಸಿ ರಾಮಮೂರ್ತಿ, ಜೈರಾಂ ರಮೇಶ್, ಆಸ್ಕರ್ ಫರ್ನಾಂಡಿಸ್, ನಿರ್ಮಲಾ ಸೀತಾರಾಮನ್ ಅವರ ಅವಧಿ ಇದೇ ಜೂನ್ 30ರಂದು ಮುಗಿಯಲಿದೆ. ಈ ಸ್ಥಾನಗಳಿಗೆ ದಿನಾಂಕ 10-06-2022ರಂದು ಚುನಾವಣೆ ನಿಗದಿಗೊಳಿಸಲಾಗಿದೆ.

ಮೇ 24ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದೆ. ಮೇ 31ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜೂ. 01ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

 ಜೂನ್ 03ರಂದು ನಾಮಪತ್ರಗಳನ್ನು ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ.ಜೂನ್ 10 ರಂದು ಮತದಾನ ಬೆಳಿಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ನಡೆಯಲಿದ್ದು, ಅಂದೇ  ಸಂಜೆ 5 ಗಂಟೆಗೆ ಮತಏಣಿಕೆ ನಡೆಯಲಿದೆ.

ವಿಧಾನಪರಿಷತ್‌ಗೂ ಚುನಾವಣೆ ಘೋಷಣೆ
ಇನ್ನೂ ಕರ್ನಾಟಕದ  2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳ ಸ್ಥಾನಗಳಿ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಚುನಾವಣೆ ನಡೆಯಲಿದೆ. ವಾಯುವ್ಯ ಪದವೀಧರ ಕ್ಷೇತ್ರದ ನಿರಾಣಿ ಹನುಮಂತಪ್ಪ ರುದ್ರಪ್ಪ, ದಕ್ಷಿಣ ಪದವೀಧರ ಕ್ಷೇತ್ರದ ಕೆ.ಟಿ ಶ್ರೀಕಂಠೇಗೌಡ ಅವರ ಅವಧಿ ಜುಲೈ 4ಕ್ಕೆ ಮುಗಿಯಲಿದೆ. ಈ ಸ್ಥಾನಗಳಿಗೆ  ಇದೇ ಜೂನ್ 13ರಂದು  ಚುನಾವಣೆ ನಡೆಯಲಿದೆ.

ಮೇ. 26 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ. 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಇನ್ನು ಮೇ. 30 ರಂದು ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ.  ದಿನಾಂಕವಾಗಿದೆ. ದಿನಾಂಕ ಜೂನ್, 13ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ  ಮತದಾನ ನಡೆಯಲಿದ್ದು, ಜೂ.15 ಫಲಿತಾಂಶ ಪ್ರಕಟವಾಗಲಿದೆ.

click me!