ಜೆಡಿಎಸ್‌ ಸೇರಿದ ಬಿಜೆಪಿಯ ಪ್ರಭಾವಿ ಯುವ ಮುಖಂಡ

Published : Dec 20, 2022, 11:00 PM IST
ಜೆಡಿಎಸ್‌ ಸೇರಿದ ಬಿಜೆಪಿಯ ಪ್ರಭಾವಿ ಯುವ ಮುಖಂಡ

ಸಾರಾಂಶ

ಜೆಡಿಎಸ್‌ ಧ್ವಜ ನೀಡುವ ಮೂಲಕ ಚನ್ನಮ್ಮಲ್ಲಪ್ಪ ಹಜ್ಜರಗಿ ಸೇರಿದಂತೆ ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಜೆಡಿಎಸ್‌ಗೆ ಬರಮಾಡಿಕೊಂಡ ಶಾಸಕ ಬಂಡೆಪ್ಪ ಖಾಶೆಂಪೂರ 

ಬೀದರ್‌(ಡಿ.20):  ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಪ್ರಭಾವಿ ಯುವಮುಖಂಡರಾಗಿ ಗುರುತಿಸಿಕೊಂಡಿದ್ದ ಬಾವಗಿಯ ಚನ್ನಮಲ್ಲಪ್ಪ ಹಜ್ಜರಗಿ ಅವರು ತಮ್ಮ ಬಳಗದೊಂದಿಗೆ ಕ್ಷೇತ್ರದ ಶಾಸಕರಾದ ಬಂಡೆಪ್ಪ ಖಾಶೆಂಪೂರ ಅವರ ಸಮ್ಮುಖದಲ್ಲಿ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಖಾಶೆಂಪೂರ ತಮ್ಮ ನಿವಾಸದ ಆವರಣದಲ್ಲಿ ಭಾನುವಾರ ಜೆಡಿಎಸ್‌ ಧ್ವಜ ನೀಡುವ ಮೂಲಕ ಚನ್ನಮ್ಮಲ್ಲಪ್ಪ ಹಜ್ಜರಗಿ ಸೇರಿದಂತೆ ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಜೆಡಿಎಸ್‌ಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಹೇಶ ಚಿಂತಾಮಣಿ, ಅನಿಲ್‌ ಪಾಟೀಲ್‌, ಗಣಪತಿ ಶಂಭು, ಶಿವಾನಂದ ಕುಂಬಾರ, ಮಂದಕನಳ್ಳಿಯ ನೂತನ ಕಾರ್ಯಕರ್ತರಾದ ಗುತ್ತೆಪ್ಪ, ಅನಿಲ ಕುಮಾರ್‌, ರಘುನಾಥ, ಕಾಂತಪ್ಪ, ಶ್ರೀನಿವಾಸ, ಜಗನಾಥ, ಬಾಬು, ಮಹೇಂದ್ರ, ಭಗವಂತ, ನಾಗಪ್ಪ ಸೇರಿದಂತೆ ಅನೇಕರಿದ್ದರು.

ಧಮ್‌ ಇದ್ರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ: ಖಂಡ್ರೆಗೆ ಖೂಬಾ ಸವಾಲ್‌

ಕೋಳಾರ ಕೆ, ಖಾಶೆಂಪುರ್‌ ಸಿ, ಮುತ್ತಂಗಿ ಯುವಕರು ಜೆಡಿಎಸ್‌ ಸೇರ್ಪಡೆ:

ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್‌ ಪಿ ಗ್ರಾಮದ ಹೊರವಲಯದಲ್ಲಿರುವ ಶಾಸಕ ಬಂಡೆಪ್ಪ ಖಾಶೆಂಪುರ್‌ ಅವರ ನಿವಾಸದ ಆವರಣದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್‌ ಅವರ ಸಮ್ಮುಖದಲ್ಲಿ ಕೋಳಾರ ಕೆ, ಖಾಶೆಂಪುರ್‌ ಸಿ ಮತ್ತು ಮುತ್ತಂಗಿ ಗ್ರಾಮಗಳ ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಪ್ರಮುಖರಾದ ಅಭಿಲಾಷ ಸಿಂಧೆ ನಾಗುರಾ, ಸಂಜುಕುಮಾರ್‌ ಕೋಟೆ, ಮುತ್ತಂಗಿಯ ರಾಜಕುಮಾರ ಬಾವಿದೊಡ್ಡಿ, ಪುಂಡಲಿಕ ಜೋಗನ ಮುತ್ತಂಗಿ, ಬಕ್ಕಪ್ಪಾ ಬಾವಿದೊಡ್ಡಿ, ನವೀನ ಕುಮಾರ್‌ ಬಾವಿದೊಡ್ಡಿ, ಲಕ್ಷ್ಮಣರಾವ್‌ ಮುತ್ತಂಗಿ, ಜಗನಾಥ್‌ ಜೋಗನ ಮುತ್ತಂಗಿ, ಪ್ರಭು ಜೋಗನ ಮುತ್ತಂಗಿ, ಏಸಪ್ಪ ಜೋಗನ ಮುತ್ತಂಗಿ, ನಾಗಪ್ಪ ಮುತ್ತಂಗಿ, ಡೇವಿಡ್‌ ಮುತ್ತಂಗಿ, ಖಾಶೆಂಪುರ್‌ ಸಿ ಗ್ರಾಮದ ನರಸಪ್ಪ, ಸುರೇಶ, ಕಾಮಣ್ಣ, ನರಸಿಂಗ್‌, ಕೋಳಾರ ಕೆ ಗ್ರಾಮದ ಸಚಿನ್‌ ದಿಗ್ಗಿ, ಆಕಾಶ್‌ ಕೋಟೆ, ಶಿವಕುಮಾರ್‌ ಕುಂಬಾರ, ಕುಮಾರ್‌ ಸೋಲಪೂರ್‌, ಅಮರ್‌, ಜಾನ್‌ ಸೇನ್‌, ವಿಲ್ಸನ್‌, ಅವಿನಾಶ್‌, ದೀಪಕ್‌, ಕೃಣಸಾಗರ್‌, ಶಿವಪ್ರಕಾಶ್‌, ಬಸವಕಿರಣ್‌, ಸಂತೋ? ಕುಮಾರ್‌, ನಾಗೇಶ ಗುಂಟೆ, ನಾಗೇಶ ಕುಂಬಾರ ಸೇರಿದಂತೆ ಅನೇಕರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ