ಆನೆ ಕದ್ದರೂ ಕಳ್ಳ, ಅಡಿಕೆ ಕದ್ರೂ ಕಳ್ಳಾನೇ, ಅದಕ್ಕೆ ಸಿದ್ದುಗೆ ಜನ ಸೈಟ್ ಕಳ್ಳ, ಸೈಟ್ ಕಳ್ಳ ಅಂತಾರೆ: ಛಲವಾದಿ

By Girish Goudar  |  First Published Oct 16, 2024, 5:11 PM IST

ರಾಜ್ಯದ ಜನತೆ ಕಾಂಗ್ರೆಸ್ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಗ್ಯಾರಂಂಟಿ ಹೊರತುಪಡಿಸಿ ಬೇರೇನು ಕಾರ್ಯ ಮಾಡಿಲ್ಲ. ಅಭಿವೃದ್ಧಿ ಇಲ್ಲ, ಗ್ಯಾರಂಟಿ ಸಂಪೂರ್ಣವಾಗಿ ಕೊಡಲು ಆಗಿಲ್ಲ, ಬೊಕ್ಕಸ ಖಾಲಿಯಾಗಿದೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ಲೂಟಿಯಲ್ಲಿ ತೊಡಗಿದೆ: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ 
 


ಶಿವಮೊಗ್ಗ(ಅ.16):  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ನಡೆಯುತ್ತಿದೆ. ನಿರಾಯಾಸವಾಗಿ ಗೆಲ್ಲುವ ಅವಕಾಶ ಇದೆ. ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆ ಆಗಿದೆ. ಯುವ ನಾಯಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು  ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ. 

ಇಂದು(ಬುಧವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಅಧಿಕಾರದಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿದೆ. ರಾಜ್ಯದ ಜನತೆ ಕಾಂಗ್ರೆಸ್ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಗ್ಯಾರಂಂಟಿ ಹೊರತುಪಡಿಸಿ ಬೇರೇನು ಕಾರ್ಯ ಮಾಡಿಲ್ಲ. ಅಭಿವೃದ್ಧಿ ಇಲ್ಲ, ಗ್ಯಾರಂಟಿ ಸಂಪೂರ್ಣವಾಗಿ ಕೊಡಲು ಆಗಿಲ್ಲ, ಬೊಕ್ಕಸ ಖಾಲಿಯಾಗಿದೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ಲೂಟಿಯಲ್ಲಿ ತೊಡಗಿದೆ. ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ಕೆಳಗಿಳಿಸುವ ಮನಸ್ಥಿತಿಗೆ ಜನತೆ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.  

Tap to resize

Latest Videos

undefined

ಬಿಜೆಪಿಗರು ಬಟ್ಟೆ ಹರಿದುಕೊಂಡ್ರೂ ನಾನು ಹೆದರಲ್ಲ: ಪ್ರಿಯಾಂಕ್ ಕಿಡಿ

ಬಾಂಬ್ ಬ್ಲಾಸ್ಟ್ ಮಾಡಿದರೆ ಅವರು ನಮ್ಮ ಬ್ರದರ್ಸ್. ಕದ್ದ ಮಾಲು ವಾಪಸ್ ತಂದರೆ ಅವರು ಅಪರಾಧಿಗಳಲ್ಲ. ಪಾಕಿಸ್ತಾನಕ್ಕೆ ಜಿಂದಾಬಾದ್ ಹಾಕಿದರೆ ಅವರು ದೇಶಭಕ್ತರು. ಜಗ್ಗಲ್ಲ ಬಗ್ಗಲ್ಲ ಎಂದು ಭಾಷಣ ಮಾಡಿದ್ದೇ ಮಾಡಿದ್ದು ಎಂದು ಸಿಎಂ ರಾತ್ರೋ ರಾತ್ರಿ ಸೈಟ್ ವಾಪಸ್ ಮಾಡಿದ್ದು ಯಾಕೆ?. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 5 ಎಕರೆ ಜಮೀನು ಪಡೆದಿದ್ದರು. ಬಿಜೆಪಿಯವರು ಬಟ್ಟೆ ಹರ್ಕೊಂಡ್ರು ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದರು. ನಾವ್ಯಾಕೆ ಬಟ್ಟೆ ಹರ್ಕೊಬೇಕು ನೀವೇ ಹರ್ಕೊಳ್ಳಿ, ಇಲ್ಲ ಕೆರ್ಕೊಳಿ ಎಂದು ಕಿಡಿ ಕಾರಿದ್ದಾರೆ.  

ಸಚಿವರು ಒಂದಲ್ಲ ಒಂದು ರೀತಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಿಬಿಐ ಡಿಕೆಶಿ ಆಕ್ರಮ ಆಸ್ತಿ ಪ್ರಕರಣದ ತನಿಖೆ ಮಾಡಿದರೆ ಆ ಪ್ರಕರಣವನ್ನು ವಾಪಸ್ ಪಡೆಯುತ್ತಾರೆ. ಮಾರಕಾಸ್ತ್ರಗಳಿಂದ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿದವರು ದೇಶಭಕ್ತರೆಂದು ಅವರ ಕೇಸ್ ವಾಪಸ್ ಪಡೆದಿದ್ದಾರೆ. ಸಿದ್ದರಾಮಯ್ಯ ಜಾತಿವಾದಿ, ಕುತಂತ್ರಕ್ಕೆ ಮೊದಲ ಹೆಸರೇ ಸಿದ್ದರಾಮಯ್ಯ. ಸುಳ್ಳು ಹೇಳಿ ಯೂ ಟರ್ನ್ ಹೊಡೆಯುವಲ್ಲಿ ಸಿದ್ದರಾಮಯ್ಯ ನಿಸ್ಸಿಮರು. ಅವರ ಮುಖ ನೋಡಿದ ತಕ್ಷಣ ಜನತೆ ಸೈಟ್ ಇಲ್ಲ ಬಂದ ಎಂದು ಹೇಳುತ್ತಾರೆ. ಭವಿಷ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಈಗಲೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಬೇಲ್ ತೆಗೆದುಕೊಂಡು ಬಂದಿದ್ದಾರೆ ನಂತರ ಇವರಿಗೆ ಜೈಲೇ ಗತಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. 

ಹುಬ್ಬಳ್ಳಿಯ ಕ್ರಿಮಿನಲ್ ಕೇಸ್ ವಾಪಾಸು ತೆಗೆದುಕೊಂಡ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಮಜಾಗೊಳಿಸಬೇಕು. ರಾಜ್ಯದ ಗವರ್ನರ್ ದೇಶದ ಪ್ರಧಾನ ಮೋದಿ ಗೃಹ ಸಚಿವ ಅಮಿತ್ ಶಾರಿಗೆ ವಜಾಗೊಳಿಸಲು ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ. 

ರಾಜ್ಯದಲ್ಲಿರುವುದು ವಂಚಕರ ಸರ್ಕಾರ. ಮುಡಾದಲ್ಲಿ ಮಾತು ಹಣ ಲೂಟಿ ಮಾಡಿಲ್ಲ. ಎಸ್ ಇ ಪಿ ಟಿ ಹಣ ಲೂಟಿ ಮಾಡಿದ್ದಾರೆ. ವಾಲ್ಮೀಕಿ ಆವರಣದಲ್ಲಿ 187 ಕೋಟಿ ಲೂಟಿ ಮಾಡಿದ್ದೀರಾ ಎಂದರೆ 87 ಕೋಟಿ ಎನ್ನುತ್ತಾರೆ ಸಿದ್ದರಾಮಯ್ಯ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರು ಕಳ್ಳ. ಅದಕ್ಕೆ ಜನ ಸೈಟ್ ಕಳ್ಳ, ಸೈಟ್ ಕಳ್ಳ ಎನ್ನುತ್ತಾರೆ. ತೆಲಂಗಾಣ ಚುನಾವಣೆಗೆ 500  ಕೋಟಿ ಹಣ ವಸೂಲಿ ಮಾಡಿ ಕೊಡಲಾಗಿದೆ. ಕೆ ಆರ್ ಐ ಡಿ ಎಲ್ ನಿಂದ ಪ್ರಿಯಾಂಕ ಖರ್ಗೆ ಹಾಗೂ ಅಜಯ್ ಸಿಂಗ್ ಹಣ ಲೂಟಿ ಮಾಡಿ ತೆಲಂಗಾಣ ಚುನಾವಣೆಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ಹಗರಣಗಳನ್ನು ಡೈವರ್ಟ್ ಮಾಡಲು ಜಾತಿ ಜನಗಣತಿ ವರದಿ ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿ ಅಧಿಕಾರಾವಧಿಯಲ್ಲಿ ಜಾತಿ ಗಣತಿ ಪ್ರಸ್ತಾಪ ಮಾಡಲು ಕೋರ್ಟ್ ತಡೆಯಿತ್ತು, ಈಗ ನಿಮಗೆ ಅಧಿಕಾರ ಇದೆ ಮಾಡಿ. ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರದಂತೆ ದೊಡ್ಡ ಹೋರಾಟ ಇದೆ ಎಂದು ಹೇಳಿದ್ದಾರೆ. 

ಮೂರು ಉಪಚುನಾವಣೆಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ. ಈ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದಿದ್ದಾರೆ. 

ಜೈಲಿನಿಂದಲೇ ಆಡಳಿತ ನಡೆಸಿದವರು ಸಿಎಂಗೆ ಪ್ರೇರಣೆ: ಸಿದ್ದರಾಮಯ್ಯಗೆ ಕೇಜ್ರಿವಾಲ್‌ ಮಾದರಿ, ಛಲವಾದಿ

ಹುಬ್ಬಳ್ಳಿ ಕೇಸ್ ವಾಪಸ್ ಪಡೆದ ಉದ್ದೇಶವೇ ಮುಸ್ಲಿಮರ ಓಲೈಕೆಯಾಗಿದೆ. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರೇ ಹೆಚ್ಚು ಕಾಂಗ್ರೆಸ್‌ ಎಷ್ಟು ಸ್ಥಾನ ನೀಡಿದ್ದಾರೆ. ಕೇವಲ ಏಳು ಮಾತ್ರ. ಅಲ್ಲೂ ಕೂಡ ಕಾಂಗ್ರೆಸ್ಸನ್ನು ಹೊರಗಿಡುವ ಅಧಿಕಾರ ಪ್ರಾರಂಭವಾಗಿದೆ. ಕಾಂಗ್ರೆಸ್ ನಲ್ಲಿ ಹಿಂದೆ ಭ್ರಷ್ಟಾಚಾರ ಇತ್ತು, ಅದೀಗ ಹೆಮ್ಮರವಾಗಿ ಬೆಳೆದಿದೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. 

ಈಶ್ವರಪ್ಪ ಬಿಜೆಪಿಗೆ ಬರುವ ವಿಚಾರ ನನಗೆ ಗೊತ್ತಿಲ್ಲ. ನಾನೇನು ಅವರನ್ನು ಬಿಜೆಪಿಗೆ ಬರುವಂತೆ ಕರೆದಿಲ್ಲ. ವಿಜಯೇಂದ್ರರಿಗೆ  ಸಾಧ್ಯ ಇದೆ ಎಂಬುವ ಕಾರಣಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಯತ್ನಾಳ್‌ಗೆ ಫ್ರೀಡಂ ಇದೆ ಏನ್ ಬೇಕಾದ್ರೂ ಮಾತಾಡ್ತಾರೆ ಎಂದಷ್ಟೇ ಹೇಳಿದ್ದಾರೆ. 

click me!