ಜೆಡಿಎಸ್-ಬಿಜೆಪಿ ಮೈತ್ರಿ ಸಕ್ಸಸ್: ಫಲ ನೀಡಿದ ಕುಮಾರಸ್ವಾಮಿ, ಬಿಎಸ್‌ವೈ ಭೇಟಿ..!

Published : Nov 17, 2020, 05:22 PM ISTUpdated : Nov 17, 2020, 07:03 PM IST
ಜೆಡಿಎಸ್-ಬಿಜೆಪಿ ಮೈತ್ರಿ ಸಕ್ಸಸ್: ಫಲ ನೀಡಿದ ಕುಮಾರಸ್ವಾಮಿ, ಬಿಎಸ್‌ವೈ ಭೇಟಿ..!

ಸಾರಾಂಶ

ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ಡಿಸಿಸಿ ಬ್ಯಾಂಕ್​ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಮುಗಿದಿದ್ದು, ಒಂದೂ ಸ್ಥಾನ ಗೆಲ್ಲದ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಮಂಡ್ಯ, (ನ.17):  ಭಾರೀ ಕುತೂಹಲ ಮೂಡಿಸಿದ್ದ ಜಿಲ್ಲಾ ಡಿಸಿಸಿ ಬ್ಯಾಂಕ್​  ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಸಿ.ಪಿ.ಉಮೇಶ್ ಅಧ್ಯಕ್ಷರಾಗಿ ಹಾಗೂ ಜೆಡಿಎಸ್‌ ಅಭ್ಯರ್ಥಿ ಅಶೋಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಹುಮತ ಹೊಂದಿದ್ದ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ತಂತ್ರ ಉಪಯೋಗಿಸಿದ್ದು, ಎರಡೂ ಪಕ್ಷಗಳ ಮತಗಳೊಂದಿಗೆ ಬಿಜೆಪಿ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. 

ಈ ಮೂಲಕ ನಿರ್ದೇಶಕರ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದ ಬಿಜೆಪಿ ಪಕ್ಷ ಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. 

ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಲು ಸಿಎಂ ಭೇಟಿಯಾಗಿದ್ದ ಕುಮಾರಸ್ವಾಮಿ..!

ಈ ಚುನಾವಣೆಯ ಮುಂದಾಳತ್ವ ವಹಿಸಿದ್ದ ನಿಖಿಲ್ ಕುಮಾರಸ್ವಾಮಿ,  ಬಿಜೆಪಿ ಸಹಾಯದೊಂದಿಗೆ ಸ್ಪಷ್ಟ ಬಹಮತ ಇದ್ದ ಕಾಂಗ್ರೆಸ್​ಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ನ 5 ರಂದು ಮಂಡ್ಯ DCCಬ್ಯಾಂಕ್​ನ 12 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರು ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣೆ ಮಾಡಿದ್ದರು.

ಮಂಡ್ಯದಲ್ಲಿ ಗೆದ್ದ ನಿಖಿಲ್ ಕುಮಾರಸ್ವಾಮಿ, ಸಿಎಂಗೆ ಥ್ಯಾಂಕ್ಸ್ ಎಂದ ಯುವ ನಾಯಕ

ಬಿಜೆಪಿ-ಜೆಡಿಎಸ್ ಪ್ಲಾನ್
12ಸದಸ್ಯ ಬಲ ಹೊಂದಿರುವ MDCC ಬ್ಯಾಂಕ್ 12ರ ಪೈಕಿ 8ಕಾಂಗ್ರೆಸ್, 4 ಜೆಡಿಎಸ್, ಓರ್ವ ನಾಮನಿರ್ದೇಶಿತ, ಜಿಲ್ಲಾ ರಿಜಿಸ್ಟ್ರಾರ್, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಅಧಿಕಾರಿಗೂ ಮತದಾನದ ಹಕ್ಕು ಇದ್ದು, ಈ ಮೂರು ಮತಗಳು ಬಿಜೆಪಿ ಸರ್ಕಾರದ ಪರವೇ ಆಗಿವೆ. ಹಾಗಾಗಿ ಕಾಂಗ್ರೆಸ್ ಬಹುಮತ ಇದ್ದರೂ ಅಧಿಕಾರದಿಂದ ವಂಚಿತವಾಗಿದೆ.

ಫಲ ಕೊಟ್ಟ ಹಾಲಿ-ಮಾಜಿ ಸಿಎಂ ಭೇಟಿ
ಹೌದು...ಕೆಲ ದಿನಗಳ ಹಿಂದೆ ಇದೇ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಯಡಿಯೂರಪ್ಪನವರನ್ನ ಭೇಟಿಯಾಗಿದ್ದರು. ಸ್ಪಷ್ಟಬಹುಮತ ಇದ್ದರೂ ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರ ಇಡಲು ಬಿಎಸ್‌ವೈ-ಎಚ್‌ಡಿಕೆ ಚರ್ಚಿಸಿದ್ದರು. ಅದರಂತೆ  ಜೆಡಿಎಸ್-ಬಿಜೆಪಿ ಪ್ಲಾನ್ ವರ್ಕೌಟ್ ಆಗಿದೆ.

ಕಾಂಗ್ರೆಸ್​ಗೆ ಅಧಿಕಾರ ಕೊಡಿಸುವ ನಿಟ್ಟಿನಲ್ಲಿ ಮಾಜಿ ಸಚಿವ ನರೇಂದ್ರಸ್ವಾಮಿ ಖುದ್ದು ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಜೆಡಿಎಸ್​ನಿಂದ ಮಾಜಿ ಸಚಿವ ಪುಟ್ಟರಾಜು ತಮ್ಮ‌ ಪಕ್ಷದ ಪರವಾಗಿ ಬೆಂಬಲಿಗರನ್ನು ಕಣಕ್ಕಿಳಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್​ನ 8 ನಿರ್ದೇಶಕರು ಹಾಗೂ ಜೆಡಿಎಸ್​ನ ನಾಲ್ವರು ನಿರ್ದೇಶಕರು ಜಯಗಳಿಸಿದರು. ಕಾಂಗ್ರೆಸ್ ಬೆಂಬಲಿತ 8 ನಿರ್ದೇಶಕರ ಮೂಲಕ ಕೈ ಪಾಳಯಕ್ಕೆ ಅಧಿಕಾರ ಸಿಗುವುದು ಸ್ಪಷ್ಟವಾಗಿತ್ತು. ಆದ್ರೆ, ಜೆಡಿಎಸ್​ ರೂಪಿಸಿರುವ ರಣತಂತದಿಂದ ಕಾಂಗ್ರೆಸ್ ಅಧಿಕಾರದಿಂದ ವಂಚಿತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: 19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು - ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ
63 ಪರ್ಸೆಂಟ್‌ ಭ್ರಷ್ಟಾಚಾರ ಬಿಜೆಪಿ ಕಾಲದ್ದು, ಅಶೋಕ್‌ಗೆ ಅರ್ಥವಾಗೇ ಇಲ್ಲ: ಸಿಎಂ