Karnataka Politics| 'ಬಿಜೆಪಿಯವರೇ ದಲಿತರ ಪರವಾಗಿಲ್ಲ'

Kannadaprabha News   | Asianet News
Published : Nov 12, 2021, 01:50 PM ISTUpdated : Nov 12, 2021, 02:00 PM IST
Karnataka Politics| 'ಬಿಜೆಪಿಯವರೇ ದಲಿತರ ಪರವಾಗಿಲ್ಲ'

ಸಾರಾಂಶ

*  ಸಿದ್ದರಾಮಯ್ಯ ವಿರುದ್ಧ ಆರೋಪ ಸುಳ್ಳು: ಮನ್ನಿಕೇರಿ *  ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ *  ರಾಜ್ಯದಲ್ಲಿ ದಲಿತ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ  

ಜಮಖಂಡಿ(ನ.12): ಸಚಿವ ಗೋವಿಂದ ಕಾರಜೋಳ(Govind Karjol) ಅವರು ದಲಿತರ ಪರ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಇದರಿಂದಲೇ ಬಿಜೆಪಿ ದಲಿತರ ಪರವಾಗಿಲ್ಲ ಎಂಬುದು ತಿಳಿಯುತ್ತದೆ. ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯನವರ(Siddaramaiah) ವಿರುದ್ಧ ದಲಿತ ವಿರೋಧ ಪಟ್ಟಕಟ್ಟಿ ಬಿಜೆಪಿ ಪ್ರತಿಭಟನೆ ನಡೆಸಿದ್ದನ್ನು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಎಸ್ಸಿ -ಎಸ್ಟಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ ತೀವ್ರ ಖಂಡಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನೇಕ ಪ್ರದೇಶದಲ್ಲಿ ದಲಿತ(Dalit) ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ(Harrashment) ನಡೆದರೂ ಸಚಿವ ಕಾರಜೋಳ ಎಳ್ಳಷ್ಟು ಚಿಂತನೆ ಮಾಡಿಲ್ಲ ಎಂದು ಅರೋಪಿಸಿದರು.

ಮಾಜಿ ಸಿಎಂ ದಿ.ದೇವರಾಜ ಅರಸು ಅವರ ನಂತರ ಸಿದ್ದರಾಮಯ್ಯನವರೊಬ್ಬರೇ ದಲಿತರ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಅವರ ಸರ್ಕಾರವಿದ್ದ ವೇಳೆ ದಲಿತರ ಅಭಿವೃದ್ಧಿಗೆ ತಮ್ಮ ಬಜೆಟ್‌ದಲ್ಲಿ 24 ಸಾವಿರ ಕೋಟಿ ಅನುದಾನ(Grants) ಬಿಡುಗಡೆ ಮಾಡಿದ್ದರೆ, ಬಿಜೆಪಿ ಸರ್ಕಾರ(BJP Government) ಕೇವಲ 3390 ಕೋಟಿ ನೀಡಿದೆ. ಈ ಹಿನ್ನಲೆಯಲ್ಲಿ ಯಾರು ದಲಿತರ ಪರವಾಗಿದ್ದಾರೆಂಬುದು ತಿಳಿಯುತ್ತದೆ ಎಂದಿದ್ದಾರೆ.

ದಲಿತ ಸಿಎಂ ಆದ್ರೆ ನನಗೆ ಖುಷಿ ಎಂಬ ಸಿದ್ದರಾಮಯ್ಯ, ಬಿಜೆಪಿ ಟಾಂಗ್..!

ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಮಾಡಿದ ಆರೋಪ ಅಕ್ಷರಶಃ ಸುಳ್ಳಾಗಿದೆ. ಬಿಜೆಪಿ ಖಾಸಗೀಕರಣಗೊಳಿಸಲು(Privatization) ಹೊರಟಿದ್ದು, ಇದರಿಂದ ಲಕ್ಷಾಂತರ ಯುವಕರು(Youths) ಉದ್ಯೋಗವಿಲ್ಲದೆ(Jobs) ಖಾಲಿ ಕುಳಿತ್ತಿದ್ದಾರೆ. ರಾಜ್ಯದಲ್ಲಿ(Karnataka) ಕಾನೂನು ವ್ಯವಸ್ಥೆ ಹದಗೆಟ್ಟಿದ್ದು, ಎಸ್ಸಿ-ಎಸ್ಟಿ(SC-ST) ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳಾಗುತ್ತಿದ್ದರೂ ಬಿಜೆಪಿಯ ಯಾವೊಬ್ಬ ದಲಿತ ರಾಜಕಾರಣಿ(politician) ಧ್ವನಿ ಎತ್ತುತ್ತಿಲ್ಲ. ರಾಜ್ಯದಲ್ಲಿ ಬಿಟ್‌ಕಾಯಿನ್‌(Bitcoin) ಪ್ರಕರಣದಲ್ಲಿ ಕೆಲವು ರಾಜಕಾರಣಿಗಳು ಪಾಲ್ಗೊಂಡಿದ್ದನ್ನು ಹೆಚ್ಚಿನ ತನಿಖೆ(Investigation) ನಡೆಸಲು ರಾಜ್ಯ ಸರ್ಕಾರ(Government of Karnataka) ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ದಲಿತ ಸಂಘಟನೆಯ(Dalit organization) ಬೆಳಗಾವಿ(Belagavi) ವಿಭಾಗೀಯ ಸಂಚಾಲಕ ಶಾಮರಾವ ಘಾಟಗೆ ಮಾತನಾಡಿ, ಸಿದ್ದರಾಮಯ್ಯನವರು ಅಹಿಂದ(Ahinda) ವರ್ಗದ ಪರವಾಗಿದ್ದು, ಅವರೂ ಎಲ್ಲೂ ದಲಿತರ ವಿರುದ್ಧ ಮಾತನಾಡಿಲ್ಲ. ಬಿಜೆಪಿಯವರೇ ಇದನ್ನು ಸೃಷ್ಟಿಸಿ, ಸುಳ್ಳು ಸುದ್ದಿಯನ್ನಾಗಿ ಹುಟ್ಟಿಸಿದ್ದು, ಖಂಡನೀಯ. ಸಿದ್ದರಾಮಯ್ಯ ಕಳಂಕರಹಿತ ಕಾಂಗ್ರೆಸ್‌ ನಾಯಕರಾಗಿದ್ದಾರೆ ಎಂದರು.

ರಾಜ್ಯದಲ್ಲಿ ದಲಿತ ಮಹಿಳೆಯರಿಗೆ(Woman) ರಕ್ಷಣೆ ಇಲ್ಲದಂತಾಗಿದೆ. ಅಂಬೇಡ್ಕರ(BR Ambedkar) ಅವರ ತತ್ವ-ಸಿದ್ಧಾಂತ -ಆದರ್ಶಗಳನ್ನು ಒಪ್ಪಿಕೊಳ್ಳುವವರೆಲ್ಲ ದಲಿತರೆ ಎಂದು ಪ್ರಶ್ನೆಗೆ ಉತ್ತರಿಸಿದರು. ಬಿಜೆಪಿಯು ದಲಿತರನ್ನು ಎಂದೂ ಹಿಂದೂತ್ವ(Hindutva) ಅಜೆಂಡಾದಲ್ಲಿ ಕಾಣುತ್ತಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ದಾನೇಶ ಘಾಟಗೆ, ಉದಯ ಕಡಕೋಳ, ಗಂಗರಾಜ ಪುಟ್ಟು ಪಾಣಿ, ಮುತ್ತಣ್ಣ ಮೇತ್ರಿ, ಪರಶುರಾಮ ವಾಳೆನ್ನವರ, ವಿಠ್ಠಲ ಹೊಸಮನಿ, ಶಶಿಧರ ಮೀಸಿ, ಮಹೇಶ ಪೂಜಾರಿ, ರಾಜು ಲೋಖಂಡೆ, ಬಸವರಾಜ ಘಾಟಗೆ, ಬಾಲರಾಜ ಚವ್ಹಾಣ ಅನೇಕರಿದ್ದರು.

Karnataka Politics: 'ದಲಿತರು ಸಿಎಂ ಆದ್ರೆ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ'

'ಬಿಜೆಪಿ ಬಗ್ಗೆ ದಲಿತರು ಎಚ್ಚರದಿಂದಿರಿ'

ವಿಜ​ಯ​ಪುರ(Vijayapura) ಜಿಲ್ಲೆ ಸಿಂದಗಿ(Sindagi) ಉಪಚುನಾವಣೆಯಲ್ಲಿ ಮಾದಿಗ ದಂಡೋರ ಸಮಾವೇಶದಲ್ಲಿ ಸಿದ್ದರಾಮಯ್ಯ(Siddaramaiah) ಅವರು ವಿರೋಧ ಪಕ್ಷದ ನಾಯಕರು ದಲಿತರ ಉದ್ದೇಶಿಸಿ ಭಾಷಣ ಮಾಡುವಾಗ ಅವರು ದಲಿತರು ಅನ್ನುವ ಪದವನ್ನೇ ಬಳಸಿಲ್ಲ. ದಲಿ​ತ ಕೆಲ ನಾಯಕರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಏಳಿಗೆ ಸಹಿಸದೆ ಬಿಜೆಪಿಯ ಮನುವಾದಿಗಳು ಅವರ ಹೇಳಿಕೆಯನ್ನು ತಿರುಚಿ ಸಿದ್ದರಾಮಯ್ಯ ಅವರ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ದಲಿತ ಸಮು​ದಾ​ಯ​ದ​ವರು ಜಾಗೃತಿಯಿಂದ ಇರಬೇಕೆಂದು ಕಾಂಗ್ರೆಸ್‌ ತಾಲೂಕು ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳು ಹೇಳಿದ್ದರು.

ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಬಂದಾಗಿನಿಂದಲೂ ಅನಂತಕುಮಾರ ಹೆಗಡೆ ನಾವು ಸಂವಿಧಾನ(Constitution) ಬದಲಾವಣೆ ಮಾಡುವದಕ್ಕಾಗಿ ಅಧಿಕಾರಕ್ಕಾಗಿಯೇ ಬಂದಿದ್ದು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ದಲಿತರಿಗೆ ಇದ್ದ ಮೀಸಲಾತಿ(Reservation) ತೆಗೆಯುತ್ತೇವೆ ಎಂದು ಬಹಿಂರಗವಾಗಿ ಹೇಳಿರುವುದು ಬಿಜೆಪಿಯ ದಲಿತ ವಿರೋಧಿ ನಡೆಯಾಗಿದೆ. ಈ ಹೇಳಿಕೆಯ ಬಗೆಗೆ ಬಿಜೆಪಿಯ ದಲಿತರು ಯಾವುದೇ ಚಕಾರ ಎತ್ತಲಾರದೆ ಜಾಣಕಿವುಡರಾಗಿರುತ್ತಾರೆ. ಇದು ಬಿಜೆಪಿ ದಲಿತಪರ ಕಾಳಜಿ ಇರದ್ದನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್