ರಾಮನಗರದ 4 ಕ್ಷೇತ್ರಗಳಲ್ಲೂ ಬಿಜೆಪಿಯದ್ದೇ ಗೆಲುವು: ಸಚಿವ ಅಶ್ವತ್ಥ ನಾರಾ​ಯಣ

By Kannadaprabha News  |  First Published Apr 14, 2023, 8:22 PM IST

ಈ ಬಾರಿ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಜನ ಆಶೀರ್ವಾದ ಮಾಡು​ತ್ತಾ​ರೆಂಬ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ ನಾರಾಯಣ ಹೇಳಿದರು. 


ಮಾಗಡಿ (ಏ.14): ಈ ಬಾರಿ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಜನ ಆಶೀರ್ವಾದ ಮಾಡು​ತ್ತಾ​ರೆಂಬ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ ನಾರಾಯಣ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಸಾದ್‌ಗೌಡರ ಪರವಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಾಮನಗರ ಜಿಲ್ಲೆ ಅಭಿವೃದ್ಧಿಗೆ ಸಾಕಷ್ಟುಅನುದಾನ ನೀಡಿದೆ. ಅಭಿ​ವೃ​ದ್ಧಿ​ಯನ್ನು ನೋಡಿ ಬಿಜೆಪಿ ಅಭ್ಯ​ರ್ಥಿ​ಗ​ಳನ್ನು ಬೆಂಬ​ಲಿ​ಸು​ತ್ತಾ​ರೆಂಬ ವಿಶ್ವಾ​ಸ​ವಿದೆ ಎಂದ​ರು.

ಮಾಗಡಿ ತಾಲೂಕಿಗೆ ನೀರಾವರಿ ಯೋಜನೆ ಸೇರಿದಂತೆ ಎಲ್ಲಾ ರಂಗದಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟುಒತ್ತನ್ನು ಕೊಡಲಾಗಿದೆ. ಕೆಂಪೇಗೌಡರ ನಾಡಿನಲ್ಲಿ ಹಿಂದೆಂದೂ ಕಾಣದಂತ ಅಭಿವೃದ್ಧಿಯನ್ನು ಮಾಡಿ ತೋರಿಸಿದೆ. ಈ ಬಾರಿ ಬಿಜೆಪಿ ಪಕ್ಷದ ಪರವಾಗಿ ಮತದಾರರು ಹೊಲವನ್ನು ತೋರಿದ್ದು ಪ್ರಸಾದ್‌ ಗೌಡ ಸೇರಿದಂತೆ ಜಿಲ್ಲೆಯ ನಾಲ್ಕು ಶಾಸಕರು ಆಯ್ಕೆಯಾಗಿ ಮತ್ತೆ ರಾಮನಗರವನ್ನು ಮಾದರಿ ಜಿಲ್ಲೆಯಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಗಡಿ ಬಿಜೆಪಿ ಅಭ್ಯರ್ಥಿ ಪ್ರಸಾದ್‌ ಗೌಡ ಮಾತನಾಡಿ, ನಾನು ಸಚಿವ ಡಾ.ಅಶ್ವತ್ಥ ನಾರಾ​ಯಣರವರಿಗೆ ಆಭಾರಿಯಾಗಿರುತ್ತೇನೆ. 

Tap to resize

Latest Videos

ವಿರೋಧಿಗಳು ಬಲಿಷ್ಠರಾಗಿರುವ ಕಡೆ ಪ್ರಬಲ ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್‌

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌, ಸಚಿವ ಎಸ್‌.ಟಿ.ಸೋಮಶೇಖರ್‌ ಅವರ ಬೆಂಬಲದಿಂದ ನನಗೆ ಬಿಜೆಪಿ ಪಕ್ಷದ ಟಿಕೆಚ್‌ ಸಿಕ್ಕಿದೆ ಎಂದರು. ಬಿಜೆಪಿ ಸರ್ಕಾರದಲ್ಲಿ ಡಾ.ಅಶ್ವತ್ಥ ನಾರಾ​ಯಣರವರು ಮಾಗಡಿ ತಾಲೂಕಿಗೆ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಈ ಮೂಲಕ ಜನಗಳು ಕೂಡ ಬಿಜೆಪಿ ಪಕ್ಷದ ಮೇಲೆ ಸಾಕಷ್ಟುವಿಶ್ವಾಸ ವ್ಯಕ್ತಪಡಿಸಿದ್ದು , ಕ್ಷೇತ್ರದ ಜನತೆ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಅಭಿವೃದ್ಧಿ ವಿಚಾರ ಮುಂದಿ​ಟ್ಟು​ಕೊಂಡು ಮತ ಕೇಳುತ್ತೇನೆ. ಪಕ್ಷದಲ್ಲಿ ಕೆಲವರು ಮುನಿಸಿಕೊಂಡಿದ್ದು ಅವರನ್ನು ಒಗ್ಗೂಡಿಸಿ ಚುನಾವಣೆ ಮಾಡು​ವು​ದಾಗಿ ತಿಳಿಸಿದರು.

ರೋಡ್‌ ಶೋ: ಮಾಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಸಾದ್‌ ಗೌಡರವರು ಸಚಿವ ಡಾ.ಅ​ಶ್ವತ್ಥ ನಾರಾ​ಯಣ, ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ ನೇತೃತ್ವದಲ್ಲಿ ಪಟ್ಟಣದ ಕಲ್ಯಾಗೇಚ್‌ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆರೆದ ವಾಹನದ ಮೂಲಕ ಆರ್‌.ಆರ್‌.ರಸ್ತೆ ಮುಖಾಂತರ ತಾಲೂಕು ಕಚೇರಿವರೆಗೂ ರೋಡ್‌ ಶೋ ನಡೆ​ಸಿ​ದರು. ನೂರಾರು ಕಾರ್ಯಕರ್ತರು ರೋಡ್‌ ಶೋನಲ್ಲಿ ಭಾಗವಹಿಸಿ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್‌, ಮುಖಂಡ​ರಾದ ನಾರಾಯಣಸ್ವಾಮಿ, ವೀರಭದ್ರ, ಕೇಶವ ಮೂರ್ತಿ ಮತ್ತಿ​ತ​ರರು ಹಾಜ​ರಿ​ದ್ದರು.

ಮೋದಿ, ಶಾ ಟಕ್ಕರ್‌ ನಮ್ಮತ್ರ ನಡೆಯಲ್ಲ: ಸಂಸದ ಡಿ.ಕೆ.ಸುರೇಶ್‌

ಆರ್‌.ಅ​ಶೋಕ್‌ ಹರಕೆ ಕುರಿ ಅಲ್ಲ: ಸಚಿವ ಆರ್‌.ಅಶೋಕ್‌ ಹರಕೆ ಕುರಿ ಅಲ್ಲ. ಡಿ.ಕೆ.​ಶಿ​ವ​ಕು​ಮಾರ್‌ ಏನು ಬೇಕಾದರೂ ಹೇಳಿಕೊಳ್ಳಲಿ ಕನಕಪುರ ಜನರು ಅವ​ರಿಂದ ಬೇಸತ್ತು ಹೋಗಿದ್ದಾರೆ. ಡಿ.ಕೆ.ಶಿವಕುಮಾರ್‌ ಬೇಡ​ವೆಂದು ಹೇಳುತ್ತಿದ್ದಾರೆ. ಸಾಕಪ್ಪ ಸಾಕು ಡಿ.ಕೆ.ಶಿವಕುಮಾರ್‌ಸಾಕು, ಬೇಕಪ್ಪ ಬೇಕು ಬಿಜೆಪಿ ಬೇಕು ಎಂದು ಕನಕಪುರದ ಜನತೆ ಹೇಳುತ್ತಿದ್ದು ವಿರೋಧಿ ಅಲೆ ಇರುವುದರಿಂದ ನೂರಕ್ಕೆ ನೂರರಷ್ಟು ಅಶೋಕ್‌ ರವರು ಕನಕಪುರದಲ್ಲಿ ಗೆಲ್ಲುವ ವಿಶ್ವಾಸವಿದೆ. ಜನಾಧಾರಿತವಾಗಿ ಬಿಜೆಪಿ ಪಕ್ಷ ಕೆಲಸ ಮಾಡಿದ್ದು ನಾಲ್ಕು ಕ್ಷೇತ್ರವನ್ನು ಗೆಲ್ಲುವ ವಿಶ್ವಾಸ ನಮಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!