ವಿಶ್ವದ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಈವರೆಗೆ ಮಾನಸಿಕವಾಗಿ ಸಂಘ ಪರಿವಾರದವರು ಒಪ್ಪಿಕೊಳ್ಳುತ್ತಿಲ್ಲ. ಆದ್ದರಿಂದಲೇ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ, ಬದ್ದತೆ ಇಲ್ಲ.
ಚಿತ್ರದುರ್ಗ (ಜ.08): ದೇಶದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಸಂವಿಧಾನ ರಚನೆಗೊಂಡು 72 ವರ್ಷಗಳೇ ಆಗಿವೆ. ಆದರೆ, ಈವರೆಗೆ ವಿಶ್ವದ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಈವರೆಗೆ ಮಾನಸಿಕವಾಗಿ ಸಂಘ ಪರಿವಾರದವರು ಒಪ್ಪಿಕೊಳ್ಳುತ್ತಿಲ್ಲ. ಆದ್ದರಿಂದಲೇ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ, ಬದ್ದತೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಆಯೋಜಿಸಲಾಗಿದ್ದ ಎಸ್‌ಸಿ, ಎಸ್‌ಟಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, SC/ST ಜೊತೆಗೂಡಿ ಐತಿಹಾಸಿಕ ಸಮಾವೇಶ ಮಾಡಿರುವುದು ಪ್ರಶಂಸನೀಯ. ಶೋಷಿತ ವರ್ಗಗಳು ಒಗ್ಗೂಡಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಕಾಂಗ್ರೆಸ್ ಸಮಾಜದಲ್ಲಿ ಇರುವ ಎಲ್ಲಾ ಜನರಿಗೆ ನ್ಯಾಯ ಕೊಡುವ ಬದ್ದತೆ ಇರುವ ಪಕ್ಷವಾಗಿದೆ. ಕಾಂಗ್ರೆಸ್ ಸಾಮಾಜಿಕ ನ್ಯಾಯ, ಮೀಸಲಾತಿಯಲ್ಲಿ ನಂಬಿಕೆ ಬದ್ದತೆ ಇರುವ ಪಕ್ಷವಾಗಿದೆ. ಈವರೆಗೆ ಸಂವಿಧಾನವನ್ನು ಮಾನಸಿಕವಾಗಿ ಒಪ್ಪದೇ ಇರುವವರು ಯಾರಾದರೂ ಇದ್ದರೆ ಅದು ಸಂಘ ಪರಿವಾರದವರು. ಅವರಿಗೆ ಯಾವತ್ತೂ ಸಮ ಸಮಾಜದಲ್ಲಿ ನಂಬಿಕೆಯಿಲ್ಲ. ಈ ಮಾತನ್ನು ರಾಜಕಾರಣಕ್ಕೋಸ್ಕರ ಹೇಳ್ತಿಲ್ಲ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ, ಬದ್ದತೆ ಇಲ್ಲ. ಇದನ್ನು ಅನೇಕ ನಡವಳಿಕೆ, ಏಳಿಗೆ ಮೂಲಕ ನೋಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
Karnataka Assembly election: ಕಾಂಗ್ರೆಸ್‌ನಿಂದ ಪ್ರತ್ಯೇಕ ಮಹಿಳಾ ಪ್ರಣಾಳಿಕೆ ಸಿದ್ಧ: ಡಿ.ಕೆ. ಶಿವಕುಮಾರ್
ಅನಂತ್ ಕುಮಾರ್ ಹೆಗ್ಗಡೆಗೆ ನೊಟೀಸ್ ಕೊಡಲಿಲ್ಲ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಅಂನತ್ ಕುಮಾರ್ ಹೆಗಡೆ ಮಂತ್ರಿ ಆಗಿದ್ದರು. ಈ ವೇಳೆ ಅವರು ಸಂವಿಧಾನ ಬದಲಾವಣೆ ಮಾಡೋಕೆ ನಾವು ಬಂದಿರೋದು ಅಂತ ಹೇಳಿದ್ದರು. ಇದನ್ನು ಸಾಮಾನ್ಯ ಮನುಷ್ಯ ಹೇಳಿದ್ದಲ್ಲ, ಮೋದಿ ಸರ್ಕಾರದಲ್ಲಿ ಮಂತ್ರಿ ಆಗಿದ್ದ ಹೆಗ್ಗಡೆ ಹೇಳಿದ್ದು. ಇದನ್ನು ಹೇಳಿದ ಮೇಲೆ ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮೋದಿ ಅವರು ಅನಂತ್ ಕುಮಾರ್ ಹೆಗ್ಗಡೆಗೆ ಒಂದು ನೊಟೀಸ್ ಕೊಡಲಿಲ್ಲ. ಬಿಜೆಪಿಯವರು ಹಿಂದುಳಿದವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ನಾವು ಸಾಮಾಜಿಕ ನ್ಯಾಯದ ಪರ ಇದ್ದೇವೆ ಎಂದು ಹೇಳ್ತಾರೆ. ಹಾಗಿದ್ರೆ ಅನೇಕ ಸಂದರ್ಭಗಳಲ್ಲಿ ಮೀಸಲಾತಿ ವಿರೋಧ ಮಾಡಿದ್ದು ಯಾಕೆ? ಮೀಸಲಾತಿ ಕೊಟ್ಟಿರುವುದು ಸಾಕಲ್ವಾ ಎಂದು ಕೇಳಿರುವುದು ಯಾಕೆ? ಎಂದು ಪ್ರಶ್ನಿಸಿದರು.
ಸಂವಿಧಾನ ಬಾಹಿರವಾಗಿ ಮೇಲ್ಜಾತಿವರಿಗೆ ಶೇ.10 ಮೀಸಲಾತಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಅದಕ್ಕೆ ಹೇಳಿದ್ದು, ಮೀಸಲಾತಿ ಯಾರೋ ಕೊಡುವ ಭಿಕ್ಷೆ ಅಲ್ಲ. ಅದು ಶೋಷಿತರ ಹಕ್ಕು ಎಂದು ಹೇಳಿದ್ದಾರೆ. ಎಲ್ಲಿವರೆಗೆ ಜಾತಿ ವ್ಯವಸ್ಥೆ ಇರ್ತದೆ ಅಲ್ಲಿವರೆಗೂ ಮೀಸಲಾತಿ ಇರಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಆದರೆ, ಬಿಜೆಪಿಯವರು ಮೇಲ್ಜಾತಿ ಅವರಿಗೆ ಶೇ.10% ಮೀಸಲಾತಿ ಕೊಟ್ಟಿದ್ದಾರೆ. ಆದರೆ, ಇದಕ್ಕೆ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಕೊಡಲ್ಲ. ಸಾಮಾಜಿಕ ವಾಗಿ, ಶೈಕ್ಷಣಿಕವಾಗಿ, ಹಿಂದುಳಿದವರಿಗೆ ಮಾತ್ರ ಮೀಸಲಾತಿ ಕೊಡಬೇಕು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ತರಾತುರಿನಲ್ಲಿ 10% ಮೀಸಲಾತಿಯನ್ನು ಪಾಸ್ ಮಾಡಿದ್ದಾರೆ ಎಂದು ಆರೋಪಿಸಿದರು.
ನಾಳೆ ಕೋಲಾರಕ್ಕೆ ಸಿದ್ದರಾಮಯ್ಯ ಭೇಟಿ: ರಾಜಕೀಯ ಲೆಕ್ಕಾಚಾರ ಏನು?
ಕಾಂಗ್ರೆಸ್‌ನಿಂದ ನಾಗಮೋಹನ್‌ದಾಸ್ ಆಯೋಗ ರಚನೆ: ಬಿಜೆಪಿ SC/ST ಸಮುದಾಯವರಿಗೆ ಮೀಸಲಾತಿ ಹೆಚ್ಚು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವ ಆಗಿದ್ದಾಗ ನಾಗಮೋಹನ್ ದಾಸ್ ಅಯೋಗವನ್ನು ರಚನೆ ಮಾಡಿದ್ದರು. ಇದನ್ನು ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಾಡಿದ್ದಲ್ಲ. 2020 ನಾಗಮೋಹನ್ ದಾಸ್ ವರದಿ ಕೊಟ್ಟರು. ಇದಾದ ನಂತರವೂ ಬಿಜೆಪಿ ನಾಯಕರು 2 ವರ್ಷ ಹತ್ತು ತಿಂಗಳು ನಿದ್ದೆ ಮಾಡುತ್ತಿದ್ದರು. ಅದನ್ನು ಒಪ್ಕೊಂಡು ಜಾರಿ ಮಾಡಿ ಎಂದು ಹೋರಾಟ ಮಾಡಿದವರು ಕಾಂಗ್ರೆಸ್ SC/ST ನಾಯಕರು. ಒಬ್ಬ ಬಿಜೆಪಿ SC/ST ಜನಾಂಗದ ಶಾಸಕರು ಬಾಯಿ ಬಿಡಲಿಲ್ಲ. ನಾವು ಅನೇಕ ಬಾರಿ ಒತ್ತಾಯ ಮಾಡಿದ ಮೇಲೆ, ಚುನಾವಣೆ ಹತ್ತಿರ ಬಂದಾಗ SC ST ಮೀಸಲಾತಿ ಹೆಚ್ಚಿಸಿದ್ದೀವಿ ಎನ್ನುತ್ತಿದ್ದಾರೆ.
ಜ.31ರೊಳಗೆ ಸಂವಿಧಾನ ತಿದ್ದುಪಡಿ: ಸಮಾವೇಶದಲ್ಲಿ 10 ಅಂಶಗಳ ನಿರ್ಣಯ: ಈ ಸಮಾವೇಶದಲ್ಲಿ 10 ಅಂಶಗಳ ನಿರ್ಣಯ ನಿಮ್ಮ ಮುಂದೆ ಪರಮೇಶ್ವರ ಇಟ್ಟಿದ್ದಾರೆ. ಅದಕ್ಕೆ ಜನವರಿ 31ರೊಳಗೆ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿ 9 ಶೆಡ್ಯೂಲ್ ಗೆ ಸೇರಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಬೀದಿಗಳಿದು ಹೋರಾಟ ಮಾಡಲಿದೆ. ಕಾಂಗ್ರೆಸ್ ಸಂವಿಧಾನವನ್ನು ರಕ್ಷಣೆ ಮಾಡಲಿಕ್ಕೆ ಹೋರಾಟ ಮಾಡಿ ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು. ಆದರೆ, ತುರ್ತಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಹೋಗಬೇಕಾದ ಹಿನ್ನೆಲೆಯಲ್ಲಿ ವೇದಿಕೆ ಇಳಿದು ಹೋಗಿದ್ದರಿಂದ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.