Karnataka Politics| ಬಿಜೆಪಿಗೆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ: ದೇಶಪಾಂಡೆ

Kannadaprabha News   | Asianet News
Published : Nov 24, 2021, 09:40 AM ISTUpdated : Nov 24, 2021, 09:42 AM IST
Karnataka Politics| ಬಿಜೆಪಿಗೆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ: ದೇಶಪಾಂಡೆ

ಸಾರಾಂಶ

*  ಗೆಲುವು ನಮ್ಮದೇ- ಆರ್‌.ವಿ. ದೇಶಪಾಂಡೆ *  ಖಾಸಗೀಕರಣದಿಂದ ಬಿಜೆಪಿ ದೇಶ ಮಾರಲು ಹೊರಟಿದೆ-ಬಿ.ಕೆ. ಹರಿಪ್ರಸಾದ *  BSY ತಮ್ಮನ್ನು ಯಾಕೆ ಅಧಿಕಾರದಿಂದ ಇಳಿಸಿದರು ಎನ್ನುವುದನ್ನು ಮೊದಲು ಹೇಳಲಿ 

ಕಾರವಾರ(ನ.24): ಅಧಿಕಾರದ ಬಲ, ಹಣದಿಂದ ಚುನಾವಣೆ(Election) ಗೆಲ್ಲುವ ಕನಸಿನಲ್ಲಿರುವ ಬಿಜೆಪಿ ಈ ಬಾರಿ ಭಾರಿ ನಿರಾಸೆ ಅನುಭವಿಸಲಿದೆ ಎಂದು ಮಾಜಿ ಸಚಿವ, ಶಾಸಕ ಆರ್‌.ವಿ. ದೇಶಪಾಂಡೆ(RV Deshpande) ಹೇಳಿದ್ದಾರೆ.

ಮಂಗಳವಾರ ಕಾಂಗ್ರೆಸ್‌(Congress) ಅಭ್ಯರ್ಥಿ ಭೀಮಣ್ಣ ನಾಯ್ಕ(Bheemanna Naik) ನಾಮಪತ್ರ(Nomination) ಸಲ್ಲಿಕೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ 50 ವರ್ಷದ ರಾಜಕೀಯ(Politics) ಜೀವನದಲ್ಲಿ ಇಷ್ಟು ಪ್ರಮಾಣದಲ್ಲಿ ಹಣದ ಬಲ, ಭ್ರಷ್ಟಾಚಾರ(Corruption), ಹಣ ಹಂಚಿಕೆಯನ್ನು ನೋಡಿಲ್ಲ. ನೋಡಿದರೆ ಆತಂಕವಾಗುತ್ತದೆ. ಬಿಜೆಪಿಗೆ(BJP) ಪ್ರಜಾಪ್ರಭುತ್ವದಲ್ಲಿ(Democracy) ವಿಶ್ವಾಸ ಇಲ್ಲದ ರೀತಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ ಎಂದರು.

'ಸರ್ಕಾರದಿಂದ ವೃದ್ಧಾಪ್ಯ, ವಿಧವೆ, ಅಂಗವಿಕಲ ವೇತನ ಸ್ಥಗಿತ'

ತಮ್ಮ ಪ್ರಕಾರ ಬಿಜೆಪಿಯ ಮುಖಂಡರು, ಕಾರ್ಯಕರ್ತರಿಗೆ ಈ ಚುನಾವಣೆಯಲ್ಲಿ ಮತ ಕೇಳುವ ಅರ್ಹತೆ ಇಲ್ಲ. ಪಂಚಾಯಿತಿ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಬಿಜೆಪಿಗರಿಗೆ ವಿಶ್ವಾಸವಿಲ್ಲ ಎಂದರು. ಬಿಜೆಪಿ ಸರ್ಕಾರ ಜಿಪಂ, ತಾಪಂ ಚುನಾವಣೆ ಮಾಡಲು ಕೂಡ ತಯಾರಿಲ್ಲ. ಅಲ್ಲಿನ ಪ್ರತಿನಿಧಿಗಳು ಇದರಿಂದಾಗಿ ಈ ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಅನಾವಶ್ಯಕವಾಗಿ ಹೊಸ ಸಮಿತಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಈಗ ಮಾಡಿರುವ ಮೀಸಲಾತಿಯನ್ನು ಕಾಂಗ್ರೆಸ್‌ ಮಾಡಿರುವುದಲ್ಲ, ಚುನಾವಣಾ ಆಯೋಗ(Election Commission) ಮಾಡಿರುವುದು. ಆದರೂ ಅವರಿಗೆ ಈ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲ. ಈ ವ್ಯವಸ್ಥೆಯಲ್ಲಿನ ವಿಶ್ವಾಸದ ಮೇರೆಗೆ ರಾಜ್ಯದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ಉತ್ತರ ಕನ್ನಡದಲ್ಲಂತೂ(Uttara Kannada) ಖಚಿತವಾಗಿ ಗೆಲುವು ನಮ್ಮದೇ, ಅದರಲ್ಲಿ ಬೇರೆ ಸಂಶಯ ಬೇಡ ಎಂದರು.

ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌(BK Hariprasad) ಮಾತನಾಡಿ, ನರೇಂದ್ರ ಮೋದಿ ಅವರ 20 ವರ್ಷದ ರಾಜಕೀಯದಲ್ಲಿ ಪ್ರಥಮ ಬಾರಿಗೆ ರೈತರ ಮುಂದೆ ಬಂದು ಕ್ಷಮೆ ಯಾಚಿಸಿದ್ದಾರೆ. ರೈತ ವಿಚಾರ, ಕೋವಿಡ್‌, ಕಾರ್ಮಿಕರು, ಯುವಕರು, ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ವಿಫಲರಾಗಿರುವುದರಿಂದಲೇ ಕ್ಷಮೆ ಕೇಳಿದ್ದಾರೆ. 70 ವರ್ಷಗಳಲ್ಲಿ ನಾವೇನೂ ಮಾಡಿಲ್ಲವೆಂದು ಅವರು ಹೇಳುತ್ತಿದ್ದರೋ, ಈಗ ಬಿಜೆಪಿಯವರು ಅದನ್ನು ಮಾಡುತ್ತಿದ್ದಾರೆ. ಎಲ್ಲವನ್ನೂ ಬಿಜೆಪಿ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಎಲ್ಲವನ್ನೂ ಖಾಸಗೀಕರಣ(Privatization) ಮಾಡಿ ದೇಶವನ್ನೇ ಮಾರಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಇಬ್ಬರು ಮುಖಂಡರ ವಿರಸ : ಭಾರೀ ಅಸಮಾಧಾನ ಸ್ಫೋಟ

ಬಿಜೆಪಿಯವರೇ ಮುಳುಗುತ್ತಿರುವ ಕಾರಣ ಅವರು ಬೇರೆಯವರಿಗೆ ಹೇಳುತ್ತಿದ್ದಾರೆ. ಹಿಮಾಚಲ ಪ್ರದೇಶ(Himachal Pradesh), ರಾಜಸ್ಥಾನ(Rajashtha), ಮಧ್ಯಪ್ರದೇಶದಲ್ಲಿ(Madhya Pradesh) ಸೋಲನ್ನು ಅನುಭವಿಸಿದ ಪ್ರಧಾನಿ ಮೋದಿ(Narendra Modi) ನೇತೃತ್ವದ ಬಿಜೆಪಿ ಸರ್ಕಾರದ(BJP Government) ಹಡಗು ಮುಳುಗುತ್ತಿದೆ. ಯಡಿಯೂರಪ್ಪ ತಮ್ಮನ್ನು ಯಾಕೆ ಅಧಿಕಾರದಿಂದ ಇಳಿಸಿದರು ಎನ್ನುವುದನ್ನು ಮೊದಲು ಹೇಳಲಿ. ಅದನ್ನು ಬಿಟ್ಟು ನಮ್ಮ ಮೇಲೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಇತ್ತೀಚೆಗೆ ಯಲ್ಲಾಪುರದಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರ ಕಾಂಗ್ರೆಸ್‌ ಮುಳುಗುತ್ತಿರುವ ಹಡಗು ಹೇಳಿಕೆಗೆ ಹರಿಪ್ರಸಾದ್‌ ಪ್ರತ್ಯುತ್ತರ ನೀಡಿದರು.

ಎಲ್ಲ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಸೋಮವಾರ ಬಿಡುಗಡೆಯಾಗಿದೆ. ಉತ್ತರ ಕನ್ನಡದಲ್ಲಿ ದೇಶಪಾಂಡೆ, ಮಾರ್ಗರೆಟ್‌ ಆಳ್ವ ಸೇರಿ ಎಲ್ಲ ಮಾಜಿ ಶಾಸಕರು, ಪ್ರಮುಖರು ಸೇರಿ ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ. ಅದೇ ಅಭ್ಯರ್ಥಿಯನ್ನೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಒಪ್ಪಿ, ಎಐಸಿಸಿ ಕೂಡ ಅವರನ್ನೇ ಆಯ್ಕೆ ಮಾಡಿ ಘೋಷಿಸಿದೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು