ಬೆಂಗಳೂರು (ನ.24): ‘ಕೆಜಿಎಫ್ ಬಾಬು’ ಎಂದೇ (KGF Babu) ಹೆಸರುವಾಸಿಯಾಗಿರುವ ಯೂಸುಫ್ ಷರೀಫ್ (Yusuf Sharif) ಅವರು ಬೆಂಗಳೂರು ನಗರ (Bengaluru City) ಸ್ಥಳೀಯ ಸಂಸ್ಥೆಗಳ ಚುನಾವಣೆಗೆ (Election) ಕಾಂಗ್ರೆಸ್ ಅಭ್ಯರ್ಥಿಯಾಗಿ (Congress Candidate) ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದು, ಬರೋಬ್ಬರಿ 1,743 ಕೋಟಿ ರು. ಆಸ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ರಾಜ್ಯದ ಅತಿ ಶ್ರೀಮಂತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ. ಕಳೆದ ಹೊಸಕೋಟೆ (hosakote) ವಿಧಾನಸಭೆ ಉಪಚುನಾವಣೆ ವೇಳೆ ಬಿಜೆಪಿ (BJP) ಅಭ್ಯರ್ಥಿಯಾಗಿದ್ದ ಹಾಲಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ಸುಮಾರು 1200 ಕೋಟಿ ರು. ಆಸ್ತಿ ಘೋಷಿಸಿಕೊಂಡು ಈವರೆಗಿನ ಸಿರಿವಂತ ಅಭ್ಯರ್ಥಿ ಎನ್ನಿಸಿಕೊಂಡಿದ್ದರು. ಅವರ ದಾಖಲೆಯನ್ನು ಕೆಜಿಎಫ್ ಬಾಬು ‘ಧ್ವಂಸ’ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಜೊತೆಗೂಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರಿಗೆ ಮಂಗಳವಾರ ಕಾಂಗ್ರೆಸ್ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಬರೋಬ್ಬರಿ 100 ಕೋಟಿ ರು. ಮೌಲ್ಯದ ಚರಾಸ್ಥಿ ಹಾಗೂ 1,643.59 ಕೋಟಿ ರು. ಸ್ಥಿರಾಸ್ತಿ (ಒಟ್ಟು 1743 ಕೋಟಿ) ಹೊಂದಿರುವುದಾಗಿ ಬಾಬು ತಿಳಿಸಿದ್ದಾರೆ.
undefined
ಬಚ್ಚನ್‌ರಿಂದ ಕಾರು ಖರೀದಿ!:
ಬಾಲಿವುಡ್‌ನ ಖ್ಯಾತ ನಟ ಅಮಿತಾಭ್ ಬಚ್ಚನ್ (Amithab bachan) ಅವರಿಂದ ರೋಲ್ಸ್ ರಾಯ್‌್ಸ ಖರೀದಿಸಿದ ಖ್ಯಾತಿಯ ಯೂಸುಫ್, ತಮ್ಮ ಬಳಿ 4.8 ಕೆ.ಜಿ. ಚಿನ್ನಾಭರಣ ಹಾಗೂ 1.10 ಕೋಟಿ ರು. ಮೌಲ್ಯದ ವಾಚ್ ಸೇರಿದಂತೆ ದುಬಾರಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಚುನಾವಣಾ ಪ್ರಮಾಣ ಪತ್ರದಲ್ಲಿ ಘೋಷಿಸಿದ್ದಾರೆ.
100 ಕೋಟಿ ರು. ಚರಾಸ್ತಿ: ಯೂಸುಫ್ ಷರೀಫ್ ಅವರು ತಾಜ್ ಅಬ್ದುಲ್ ರಜಾಕ್, ಶಾಜಿಯಾ ತರನ್ನಮ್ ಎಂಬ ಇಬ್ಬರು ಪತ್ನಿಯರನ್ನು ಹೊಂದಿದ್ದು, ಐದು ಮಕ್ಕಳನ್ನು (Children) ಹೊಂದಿದ್ದಾರೆ.
ತಮ್ಮ ಕೈಯಲ್ಲಿ 19.53 ಲಕ್ಷ ನಗದು, ಬ್ಯಾಂಕ್‌ಗಳಲ್ಲಿ (Bank) 16.87 ಕೋಟಿ ಠೇವಣಿ, 17.61 ಕೋಟಿ ರು. ಹೂಡಿಕೆ, 58.10 ಕೋಟಿ ರು. ವೈಯಕ್ತಿಕ ಸಾಲ, ಮುಂಗಡ ಪಾವತಿ ಮತ್ತಿತರ ಪಾವತಿಗಳನ್ನು ಮಾಡಿರುವುದಾಗಿ ತಿಳಿಸಿದ್ದಾರೆ.
ಅಲ್ಲದೆ ತಮ್ಮ ಬಳಿ 73 ಲಕ್ಷ ರು. ಮೌಲ್ಯದ 1.51 ಕೆ.ಜಿ ಚಿನ್ನಾಭರಣ, ಮೊದಲ ಪತ್ನಿ (wife) ಬಳಿ 75.89 ಲಕ್ಷ ಮೌಲ್ಯದ 1.56 ಕೆ.ಜಿ. ಚಿನ್ನಾಭರಣ, ಎರಡನೇ ಪತ್ನಿ ಬಳಿ 29.19 ಲಕ್ಷ ರು. ಮೌಲ್ಯದ 600 ಗ್ರಾಂ. ಚಿನ್ನ, ಪುತ್ರಿ ಬಳಿ 57.40 ಲಕ್ಷ ರು. ಮೌಲ್ಯದ 1.18 ಕೆ.ಜಿ. ಚಿನ್ನ ಇರುವುದಾಗಿ ತಿಳಿಸಿದ್ದಾರೆ. ತಮ್ಮ ಬಳಿ 2.01 ಕೋಟಿ ರು. ಮೌಲ್ಯದ ರೋಲ್ಸ್ ರಾಯ್‌್ಸ ಕಾರು ಹಾಗೂ ಇಬ್ಬರು ಪತ್ನಿಯರ ಬಳಿ ತಲಾ 49 ಲಕ್ಷ ರು. ಮೌಲ್ಯದ ಎರಡು ಫಾರ್ಚೂನರ್ ಕಾರು ಹೊಂದಿದ್ದಾರೆ. ಅಲ್ಲದೆ 1.11 ಕೋಟಿ ರು. ಮೌಲ್ಯದ ದುಬಾರಿ ವಾಚ್ ಹೊಂದಿರುವ ಅವರು 100 ಕೋಟಿ ರು. ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ.
1,643.59 ಕೋಟಿ ರು. ಸ್ಥಿರಾಸ್ತಿ: ಇನ್ನು ಬೆಂಗಳೂರಿನಲ್ಲಿ ನೂರಾರು ಎಕರೆ ಕೃಷಿ (agriculture Land) ಹಾಗೂ ಕೃಷಿಯೇತರ ಜಮೀನು ಹೊಂದಿರುವ ಯೂಸುಫ್ ಷರೀಫ್ ತಮ್ಮ ಹೆಸರಿನಲ್ಲೇ 47.31 ಕೋಟಿ ರು. ಮೌಲ್ಯದ ಕೃಷಿಯೇತರ ಜಮೀನು ಹಾಗೂ ಪತ್ನಿಯ ಹೆಸರಿನಲ್ಲಿ 1.30 ಕೋಟಿ ರು. ಕೃಷಿಯೇತರ ಜಮೀನು ತೋರಿಸಿದ್ದಾರೆ. ಉಳಿದಂತೆ 1,593.27 ಕೋಟಿ ರು. ಮೌಲ್ಯದ ಕೃಷಿಯೇತರ ಜಮೀನು ಹೊಂದಿರುವುದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ 3.01 ಕೋಟಿ ರು. ಮೌಲ್ಯದ ವಸತಿ ಕಟ್ಟಡ ಹೊಂದಿದ್ದು, ಒಟ್ಟು 67.24 ಕೋಟಿ ರು. ಸಾಲ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.