ಹಿಂದೂಗಳ ಹೆಸರಿನಲ್ಲಿ ಮತ ಕೇಳುವ ದುಸ್ಥಿತಿ ಬಿಜೆಪಿಗೆ ಬಂದಿದೆ: ಸಚಿವ ಶಿವರಾಜ ತಂಗಡಗಿ

By Kannadaprabha NewsFirst Published Apr 26, 2024, 12:54 PM IST
Highlights

ರಾಮಮಂದಿರ ನಾವೇ ಕಟ್ಟಿಸಿದ್ದೇವೆ ಎನ್ನುವ ಮೂಲಕ ಹಿಂದೂಗಳ ಹೆಸರಿನಲ್ಲಿ ಮತ ಕೇಳುವ ದುಸ್ಥಿತಿಗೆ ಬಿಜೆಪಿಯವರು ಬಂದಿದ್ದಾರೆ. ಇವರಿಗೇನಾದರೂ ಮಾನ-ಮರ್ಯಾದೆ ಇದೆಯಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು. 
 

ಯಲಬುರ್ಗಾ (ಏ.26): ರಾಮಮಂದಿರ ನಾವೇ ಕಟ್ಟಿಸಿದ್ದೇವೆ ಎನ್ನುವ ಮೂಲಕ ಹಿಂದೂಗಳ ಹೆಸರಿನಲ್ಲಿ ಮತ ಕೇಳುವ ದುಸ್ಥಿತಿಗೆ ಬಿಜೆಪಿಯವರು ಬಂದಿದ್ದಾರೆ. ಇವರಿಗೇನಾದರೂ ಮಾನ-ಮರ್ಯಾದೆ ಇದೆಯಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು. ತಾಲೂಕಿನ ಮುಧೋಳ ಗ್ರಾಮದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕೊಪ್ಪಳ ಲೋಕಸಭಾ ಚುನಾವಣಾ ಪ್ರಚಾರಾರ್ಥ ಸಾರ್ವಜನಿಕ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ೧೦ ವರ್ಷದ ಅಧಿಕಾರವಧಿಯಲ್ಲಿ ಮಾಡಿದ ಅಭಿವೃದ್ಧಿ ಕುರಿತು ಮತ ಕೇಳುತ್ತಿಲ್ಲ. 

ಬರೀ ಮೋದಿಯವರನ್ನು ನೋಡಿ ಮತಹಾಕಿ ಎಂದು ಕೇಳುತ್ತಿದ್ದಾರೆ. ಇದರಿಂದ ಬಿಜೆಪಿಯವರಿಗೆ ಸೋಲಿನ ಹತಾಶೆ ಕಾಡುತ್ತಿದೆ ಎಂದರು. ಗಂಗಾವತಿಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಹಾಸುಳ್ಳುಗಾರ, ಯಾವ ಕಡೆ ಲಾಭ ಸಿಗುತ್ತದೆಯೋ ಅತ್ತ ಕಡೆ ಹೋಗುವ ಸ್ವಾರ್ಥ ರಾಜಕಾರಣಿ, ಇರುವಷ್ಟು ದಿನ ಹಣ ಗಳಿಸಿಕೊಂಡು ಹೋಗುವ ಜಾಯಮಾನವುಳ್ಳವರು. ಇಂತವರ ಮಾತಿಗೆ ಕಿವಿಗೊಡದೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳಗೆ ಮತ ಹಾಕಿಸಿ ಕ್ಷೇತ್ರದ ಅಭಿವೃದ್ದಿಗೆ ಮುಂದಾಗೋಣ ಎಂದು ಮತಯಾಚನೆ ಮಾಡಿದರು.

ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆ.ಕಡಿಮೆ ವೋಟಿಂಗ್

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ೧ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ದೇಶದಲ್ಲೆಡೆ ಮೋದಿ ಹವಾ ಎಲ್ಲಿಯೂ ಇಲ್ಲ. ಆದರೆ ಬಿಜೆಪಿಯವರು ಅದನ್ನು ಜನರಲ್ಲಿ ಸೃಷ್ಟಿ ಮಾಡಲು ಹೊರಟಿದ್ದಾರೆ. ಇ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.

ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೇಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ, ವೀರನಗೌಡ ಬಳೂಟಗಿ, ಬಿ.ಎಂ. ಶಿರೂರ, ಎ.ಜಿ. ಭಾವಿಮನಿ, ಕೆರಿಬಸಪ್ಪ ನಿಡಗುಂದಿ, ಸಂಗಣ್ಣ ಟೆಂಗಿನಕಾಯಿ, ಆನಂದ ಉಳ್ಳಾಗಡ್ಡಿ, ಅಂದಾನಗೌಡ ಪೋಲಿಸ್‌ಪಾಟೀಲ್, ಈರಪ್ಪ ಕುಡಗುಂಟಿ ಮತ್ತಿತರರು ಇದ್ದರು.

click me!