Karnataka Lok Sabha Election 2024 ಹೈವೋಲ್ಟೇಜ್ ಕ್ಷೇತ್ರವಾಗಿರೋ ಹಾಸನದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮತದಾರರ ಪಟ್ಟಿಯಲ್ಲಿ ಒಂದೇ ಗ್ರಾಮದ 45 ಜನರ ಹೆಸರು ನಾಪತ್ತೆಯಾಗಿದೆ.
ಮಂಡ್ಯ (ಏ.26): ಹೈವೋಲ್ಟೇಜ್ ಕ್ಷೇತ್ರವಾಗಿರೋ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಟಾರ್ ಚಂದ್ರು (ವೆಂಕಟ ರಮಣೇಗೌಡ)ಕಣದಲ್ಲಿದ್ದಾರೆ. ಮಂಡ್ಯದಲ್ಲಿ ಸಂಜೆ 5 ಗಂಟೆಗೆ 74.87% ರಷ್ಟು ಮತದಾನವಾಗಿದ್ದು, ಟಾಪ್ ನಲ್ಲಿದೆ. ಗಂಟೆಗೆ 3 ಗಂಟೆಗೆ 57.44% ಮತದಾನವಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗ್ರಾಮದಲ್ಲಿ ಮತದಾರ ಪಟ್ಟಿಯಿಂದ 45 ಜನರ ಹೆಸರು ನಾಪತ್ತೆಯಾಗಿರೋದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಒಂದೇ ಗ್ರಾಮದ 45 ಜನರ ಹೆಸರು ನಾಪತ್ತೆಯಾಗಿದ್ದು, ಮತದಾರರು ರಸ್ತೆ ತಡೆ ನಡೆಸಿ ಆಕ್ರೋಶ ಹೊರ ಹಾಕಿದರು. ಹೆಸರು ಕೈ ಬಿಟ್ಟಿರೊ ಬಗೆಗೆ ತಿಳಿದರೂ ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದರು.
ಸಂಸದೆ ಸುಮಲತಾ ಅಂಬರೀಶ್‌ರಿಂದ ಮತದಾನ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಕ್ಕು ಚಲಾಯಿಸಿದ ಸುಮಲತಾ. ಮತಗಟ್ಟೆ ಸಂಖ್ಯೆ 164ರಲ್ಲಿ ಮತದಾನ ಮಾಡಿದ ಸಂಸದೆ.
ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆ.ಕಡಿಮೆ ವೋಟಿಂಗ್
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿಯಲ್ಲಿ ಮಾಜಿ ಸಚಿವ ಸಿಎಸ್ ಪುಟ್ಟರಾಜು ಮತದಾನ ಮಾಡಿದರು. ಪತ್ನಿ ನಾಗಮ್ಮ ಜೊತೆಗೂಡಿ ಚಿನಕುರುಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತಚಲಾವಣೆ ಮಾಡಿದರು.
ಮತದಾನ ಬಳಿಕ ಮಾತನಾಡಿದ ಸಿಎಸ್ ಪುಟ್ಟರಾಜು ಅವರು ಹೆಚ್.ಡಿ.ಕುಮಾರಸ್ವಾಮಿ ಪ್ರಚಂಡ ಬಹುಮತದಿಂದ ಗೆಲ್ತಾರೆ. ಕ್ಷೇತ್ರದಲ್ಲಿ ಬಿರುಸಿನಿಂದ ಮತದಾನ ಪ್ರಾರಂಭವಾಗಿದೆ. ಮಂಡ್ಯದಲ್ಲಿ ನೂರಕ್ಕೆ ನೂರರಷ್ಟು ಇದು ಒನ್ ಸೈಡ್ ಚುನಾವಣೆ. ಹಿಂದೆಯೂ ಸ್ವಾಭಿಮಾನ ನಿರ್ಧಾರಗಳನ್ನ ಮಾಡಿದ್ದಾರೆ. ಈ ಬಾರಿಯೂ ಸ್ಪಷ್ಟ ನಿರ್ಧಾರ ಮಾಡಿದ್ದಾರೆ. ಕುಮಾರಣ್ಣ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಆಶೀರ್ವಾದ ಮಾಡ್ತಾರೆ. ರೈತರಿಗೆ ಕೊಟ್ಟ ಕೊಡುಗೆ, ಜನರ ಸಾಮಾನ್ಯರ ಕಣ್ಣೀರು ಒರೆಸಿದ್ದಾರೆ. ತಾಯಂದಿರ ಕಷ್ಟಗಳಿಗೆ ಸ್ಪಂದಿಸಿರುವ ಹಿನ್ನೆಲೆ ಪ್ರಚಂಡ ಬಹುಮತದಿಂದ ಗೆಲ್ಲಿಸುತ್ತಾರೆ ಎಂದರು.
ಹೆಚ್ಡಿಕೆ ವಿರುದ್ದ ಅಪಪ್ರಚಾರ ವಿಚಾರಕ್ಕೆ ಸಂಬಂಧಿಸಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆರೋಪ ಸಾಮಾನ್ಯ. ಆದ್ರೂ ಜಿಲ್ಲೆಯ ಜನ ಕುಮಾರಸ್ವಾಮಿಯವರಿಗೆ ಆಶೀರ್ವಾದ ಮಾಡ್ತಾರೆ ಎಂದರು.
LIVE: ಹಾಸನ Elections 2024: ಏಕಾಂಗಿಯಾಗಿ ಬಂದು ಮತ ಚಲಾಯಿಸಿದ ಪ್ರಜ್ವಲ್ ರೇವಣ್ಣ
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತದಾನ ಮಾಡಿದರು. ಸ್ವಗ್ರಾಮ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಮತಚಲಾಯಿಸಿದರು. ಮಂಡ್ಯ ತಾಲೂಕಿನ ಗಣಿಗ ಗ್ರಾಮದಲ್ಲಿ ಶಾಸಕ ರವಿಗಣಿಗ ಮತದಾನ ಮಾಡಿದರು. ಪತ್ನಿ ಸಮೇತವಾಗಿ ಆಗಮಿಸಿ ಬೂತ್ ಸಂಖ್ಯೆ 15ರಲ್ಲಿ ಮತಚಲಾವಣೆ ಮಾಡಿದರು.
ಮಂಡ್ಯದ ಕೆ.ಆರ್.ಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತಕೇಂದ್ರದಲ್ಲಿ ಮಾಜಿ ಸಚಿವ ನಾರಾಯಣಗೌಡ ಮತದಾನ ಮಾಡಿದರು. ಪತ್ನಿ ದೇವಕಿ, ಪುತ್ರಿ ಜೊತೆ ಮತಚಲಾವಣೆ ಮಾಡಿದರು. ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳಿಂದ ಮತದಾನ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮತದಾನ ಮಾಡಿದ ಶ್ರೀಗಳು.
ಹೈವೋಲ್ಟೇಜ್ ಕ್ಷೇತ್ರವಾಗಿರೋ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2076 ಮತಗಟ್ಟೆ ಇದ್ದು, 2076 ಪೈಕಿ 693 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಯಾಗಿದೆ. ಸೂಕ್ಷ್ಮ ಮತಗಟ್ಟೆಗಳ ಬಳಿ ಹೆಚ್ಚಿನ ಭದ್ರತೆ ಮಾಡಲಾಗಿದೆ. ಮತಗಟ್ಟೆಗಳ ಸುತ್ತ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ವಿಕಲಚೇತನರಿಗೆ ಹಾಗೂ ಹಿರಿಯನಾಗರಿಕರಿಗಾಗಿ ವೀಲ್ಚೇರ್ ವ್ಯವಸ್ಥೆ ಕೂಡ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನದ ವ್ಯವಸ್ಥೆ ಮಾಡಲಾಗಿದ್ದು, ಮತಗಟ್ಟೆಗಳಲ್ಲಿ ಮೊಬೈಲ್ ನಿಷೇಧ. ಒಬ್ಬ PRO ಗೆ ಮಾತ್ರ ಮೊಬೈಲ್ ಬಳಕೆಗೆ ಅವಕಾಶ.
ಜಿಲ್ಲಾಧ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.
ಮಂಡ್ಯ ಕ್ಷೇತ್ರದಲ್ಲಿ ಒಟ್ಟು 17,79,243 ಮತದಾರರು
ಪುರುಷ ಮತದಾರರು-8,76,112,
ಮಹಿಳೆ ಮತದಾರರು-9,02,963.
ಇತರೆ ಮತದಾರರು-168.