ಕೋಲಾರ 2024 Elections ಶೇಕಡವಾರು ಪ್ರಮಾಣ ಏರಿಕೆ ಸಂಜೆ 5 ಗಂಟೆವರೆಗೆ ಶೇ.71.26 ರಷ್ಟು ಮತದಾನ

By Santosh NaikFirst Published Apr 26, 2024, 12:52 PM IST
Highlights


ಬೆಂಗಳೂರು ಸನಿಹದ ಮತ್ತೊಂದು ಜಿಲ್ಲೆಯಾಗಿರುವ ಕೋಲಾರದಲ್ಲಿ ಮಧ್ಯಾಹ್ನದ ವೇಳೆಗೆ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೋಲಾರದಲ್ಲಿ ವ್ಯಕ್ತಿಯೊಬ್ಬ ದುಬೈನಿಂದ ಬಂದು ಮತದಾನ ಮಾಡಿದ್ದಾರೆ.

ಕೋಲಾರ (ಏ.26): ರಾಜ್ಯ ರಾಜಧಾನಿ ಬೆಂಗಳೂರಿನ ಸನಿಹದಲ್ಲಿರುವ ಮತ್ತೊಂದು ಜಿಲ್ಲೆ ಕೋಲಾರದಲ್ಲಿ ಸಂಜೆ 5 ಗಂಟೆ ವೇಳೆಗೆ 71.26% ಮತದಾನವಾಗಿದೆ. ಮಧ್ಯಾಹ್ನ 3 ಗಂಟೆಯ ವೇಳೆ ಶೇ. 54.66ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ ಮಧ್ಯಾಹ್ನ 1 ಗಂಟೆಯ ವೇಳಗೆ ಶೇ. 38.42ರಷ್ಟು ಮತದಾನವಾಗಿತ್ತು. ಬೆಳಗ್ಗೆ 11 ಗಂಟೆಯ ವೇಳೆಗೆ ಶೇ. 21ರಷ್ಟು ಮತದಾನವಾಗಿತ್ತು. ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಎಂ.ಮಲ್ಲೇಶ್‌ ಬಾಬು ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ ಕೆವಿ ಗೌತಮ್‌ ಸ್ಪರ್ಧೆ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 18 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 17.26 ಲಕ್ಷ ಮಂದಿ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. 8.53 ಲಕ್ಷ ಪುರುಷ ಹಾಗೂ 8.72 ಲಕ್ಷ ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಕೋಲಾರ ಮೀಸಲು ಕ್ಷೇತ್ರ ರಾಜಕೀಯ ಬೆಳವಣಿಗೆಗಳ ಕಾರಣಕ್ಕಾಗಿ ಸದಾ ಸುದ್ದಿಯಲ್ಲಿ ಇರುತ್ತದೆ. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಕಳೆದ ಬಾರಿ ಬಿಜೆಪಿ ವಶವಾಗಿತ್ತು. ಈ ಬಾರಿ ಕಾಂಗ್ರೆಸ್‌ನಿಂದ ಕೆವಿ ಗೌತಮ್‌ರನ್ನು ಕಣಕ್ಕಿಳಿಸಲಾಗಿದ್ದು, ಈ ಕ್ಷೇತ್ರವನ್ನು ಗೆಲ್ಲಲೇಬೇಕು ಎನ್ನುವ ಪಣತೊಟ್ಟಿದೆ. ಇನ್ನೊಂದೆಡೆ ಬಿಜೆಪಿ-ಜೆಡಿಎಸ್‌ ಮೈತ್ರಿಯ ಲಾಭದಲ್ಲಿ ಗೆಲ್ಲುವ ನಿರೀಕ್ಷೆ ಇರಿಸಿಕೊಂಡಿದೆ. ಸ್ಥಳೀಯ ಹಾಗೂ ಹೊರಗಿನ ವ್ಯಕ್ತಿಯ ನಡುವಿನ ನೇರಾನೇರ ಪೈಪೋಟಿ ಇಲ್ಲಿದೆ.

ದುಬೈನಿಂದ ಬಂದು ಮತದಾನ: ಕೋಲಾರ ಕ್ಷೇತ್ರದಲ್ಲಿ  ಅಬ್ದುಲ್ ಸುಬಾನ್ ಎನ್ನುವವರು ದುಬೈನಿಂದ ಬಂದು ಮತದಾನ ಮಾಡಿದ್ದಾರೆ. ಅಬ್ದುಲ್‌ ಸುಬಾನ್‌ ದುಬೈನಲ್ಲಿ ಉದ್ಯಮಿಯಾಗಿದ್ದಾರೆ. ಕೋಲಾರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ,ಮತಗಟ್ಟೆ ಸಂಖ್ಯೆ 117ರಲ್ಲಿ ಅವರು ಮತ ಹಕ್ಕು ಚುಲಾಯಿಸಿದರು.

ಶಾಸಕ ಮಂಜುನಾಥ್‌ ಮತದಾನ: ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ತಾಯಿ ವೆಂಕಟಮ್ಮ, ಪತ್ನಿ ಗೀತ ಅವರೊಂದಿಗೆ ಬಂದು ಮತದಾನ ಮಾಡಿದರು. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮರಹೇರು ಗ್ರಾಮದ ಮತಗಟ್ಟೆ ಸಂಖ್ಯೆ 63 ರಲ್ಲಿ ಮತದಾನ ಮಾಡಿದರು.

ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆ.ಕಡಿಮೆ ವೋಟಿಂಗ್ 

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತದಾನ.: ಶ್ರೀನಿವಾಸಪುರ ತಾಲೂಕಿನ ಸ್ವಗ್ರಾಮ ಅಡ್ಡಗಲ್‌ನಲ್ಲಿ ಅವರು ಮತದಾನ ಮಾಡಿದರು. ಅಡ್ಡಗಲ್ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಮತ ಗಟ್ಟೆ ಸಂಖ್ಯೆ 35 ರಲ್ಲಿ ಮತ ಹಕ್ಕು ಚಲಾಯಿಸಿದರು.

LIVE: ಬೆಂಗಳೂರು ಕೇಂದ್ರ ELECTIONS 2024; ಬೆಳಗ್ಗೆ 11.30ರ ವೇಳೆಗೆ ಶೇ.19.21 ಮತದಾನ

click me!