
ರಾಯಚೂರು, (ಏ.11): ಕಣ್ಣೇ ಅಧಿರಿಂದಿ ಫೈಟ್ ಚೆಧಿರಿಂದಿ ಕಾಲೇ ನಿಲವದು ಪಿಲಗ; ನಿನ್ನಟಿಕೆಲ್ಲಿ ಗಮ್ಮತಿಗುಂದಿ ಗುಂಡೆಲ ಲೊಲ್ಲಿ ಸಮ್ಮಗ ಉಂದಿ..... ತೆಲುಗು ರಾಬರ್ಟ್ ಚಿತ್ರದ ಈ ಸಾಂಗ್ ಸಖತ್ ಹಿಟ್ ಆಗಿದೆ.
ಸಾಂಗ್ ಮೂಲಕ ತೆಲುಗು ಗಾಯಕಿ ಮಂಗ್ಲಿ ಯುವಜನತೆಯ ಎದೆಬಡಿತ ಹೆಚ್ಚಿಸಿದ್ದಾರೆ. ಅಷ್ಟೇ ಅಲ್ಲದೇ ಈ ಹಾಡಿನ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿದ್ದು, ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗಿದೆ.
ರಾಬರ್ಟ್ ತೆಲುಗು ಸಾಂಗ್ ವೈರಲ್: ಹಾಡಿದ ಮಂಗ್ಲಿಇವರೇ
ಇದೀಗ ವಿಷ್ಯಾ ಏನಪ್ಪಾ ಅಂದ್ರೆ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆ ಪ್ರಚಾರದ ಅಖಾಡಕ್ಕಿಳಿಯಲಿದ್ದಾರೆ.
ಹೌದು...ಇದೇ ಏ. 13ರಂದು ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಮಂಗ್ಲಿ ಅವರು ಪ್ರಚಾರ ನಡೆಸಲಿದ್ದಾರೆ.
ಮಂಗ್ಲಿ ಇತ್ತೀಚಿಗೆ ತೆಲುಗು ಅವತರಣಿಕೆಯ ರಾಬರ್ಟ್ ಸಿನಿಮಾದಲ್ಲಿ ಹಾಡಿದ ಕಣ್ಣೇ ಅದಿರಿಂದಿ ಹಾಡು ಕರ್ನಾಟಕದಲ್ಲೂ ಸಿಕ್ಕಪಟ್ಟೆ ಫೇಮಸ್ ಆಗಿತ್ತು. ಈಗ ಮಂಗ್ಲಿ ಫೆಮಸ್ ಬಳಸಿಕೊಂಡಿರುವ ಬಿಜೆಪಿ, ಮಸ್ಕಿ ಉಪಚುನಾವಣೆಯಲ್ಲಿ ಮಂಗ್ಲಿಯವರ ಮೂಲಕ ಮತ ಸೆಳೆಯಲು ಪ್ಲಾನ್ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.