ಕಾಂಗ್ರೆಸ್ ಪಕ್ಷ 2023ಕ್ಕೆ ಅಧಿಕಾರಕ್ಕೆ ಬಂದರೆ ಮನೆ ಯಜಮಾನಿಗೆ 2 ಸಾವಿರ, 10 ಕೆಜಿ ಅಕ್ಕಿ, 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆಯೊಂದಿಗೆ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ.
ಹೊಸಕೋಟೆ (ಮಾ.06): ಕಾಂಗ್ರೆಸ್ ಪಕ್ಷ 2023ಕ್ಕೆ ಅಧಿಕಾರಕ್ಕೆ ಬಂದರೆ ಮನೆ ಯಜಮಾನಿಗೆ 2 ಸಾವಿರ, 10 ಕೆಜಿ ಅಕ್ಕಿ, 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆಯೊಂದಿಗೆ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಉಚಿತವಾಗಿ ಏನನ್ನೂ ಕೊಡೊಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ನಂದಗುಡಿ ಹೋಬಳಿಯ ಬಾಣಮಾಕನಹಳ್ಳಿ, ಅಗಸರಹಳ್ಳಿ, ಮಾರಸಂಡಹಳ್ಳಿ, ಬೀರಹಳ್ಳಿ ಹಾಗೂ ಬಂಡಹಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಶೇಷ ಅನುದಾನ ಯೋಜನೆ 5054 ಅನುದಾನದಡಿ ಒಟ್ಟು 50 ಲಕ್ಷ ರು. ವೆಚ್ಚದ ಸಿ.ಸಿ.ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ವಿಪಕ್ಷ ನಾಯಕರು ಬಡವರಿಗೆ ನಿವೇಶನ ನೀಡುವುದಾಗಿ ನಕಲಿ ಹಕ್ಕುಪತ್ರ ನೀಡಿ ಮತದಾರರನ್ನು ಯಮಾರಿಸಿರುವ ನಿದರ್ಶನಗಳು ಕಣ್ಣ ಮುಂದಿದೆ. ಇನ್ನು ಈಗ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮುಂದಿನ 2023ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಪೊಳ್ಳು ಭರವಸೆಗಳನ್ನು ಜನ ನಂಬಬಾರದು ಎಂದರು.
ಬಿಜೆಪಿ ಅಧಿಕಾರಕ್ಕೆ ಕನಕಪುರ ಮತದಾರರು ಮುನ್ನುಡಿ ಬರೆಯಿರಿ: ಸಚಿವ ಅಶೋಕ್
ಕಾರ್ಯಕ್ರಮದಲ್ಲಿ ಜಿಪಂನ ಮಾಜಿ ಸದಸ್ಯ ಸಿ.ನಾಗರಾಜ್, ಬಿಎಂಆರ್‌ಡಿಎ ಅಧ್ಯಕ್ಷ ಶಂಕರೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಸತೀಶ್, ಕುರುಬರ ಸಂಘದ ಕಾರ್ಯದರ್ಶಿ ಲಿಂಗಾಪುರ ಮಂಜುನಾಥ್, ಗ್ರಾಪಂ ಸದಸ್ಯ ರಾಮೇಗೌಡ, ಎಸ್‌ಎಫ್‌ಸಿಎಸ್ ನಿರ್ದೇಶಕಿ ಲಕ್ಷ್ಮೇದೇವಿ ನಾರಾಯಣಸ್ವಾಮಿ, ಮಾಜಿ ಸದಸ್ಯರಾದ ಕುಳ್ಳ ರಾಜಪ್ಪ, ಮಂಜುನಾಥ್, ಮುಖಂಡರಾದ ಮಂಜುನಾಥ್, ಶ್ರೀನಿವಾಸ್, ದಿಲೀಪ್, ಲೋಕೇಶ್, ವೆಂಕಟೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.
ರಸ್ತೆಗಳ ನಿರ್ಮಾಣದಲ್ಲಿ ಬಿಜೆಪಿಯದ್ದು ಕ್ರಾಂತಿ: ದೇಶ ಹಾಗೂ ರಾಜ್ಯದಲ್ಲಿ ರಸ್ತೆಗಳ ನಿರ್ಮಾಣ ಹಾಗೂ ಅಭಿವೃದ್ಧಿ ಮಾಡುವಲ್ಲಿ ಬಿಜೆಪಿ ಸರ್ಕಾರ ದೊಡ್ಡ ಕ್ರಾಂತಿಯನ್ನೆ ಮಾಡಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ಕೆ.ಮಲ್ಲಸಂದ್ರ ಹಾಗೂ ಬಿಸನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 207ರಿಂದ ನಡವತ್ತಿ, ಬಿಸನಹಳ್ಳಿ, ಹುಣಸೇಹಳ್ಳಿ, ಪರಮನಹಳ್ಳಿ, ತಿಂಡ್ಲು, ಖಾಜಿ ಹೊಸಹಳ್ಳಿ ಕಟ್ಟಿಗೇನಹಳ್ಳಿ ಮಾರ್ಗವಾಗಿ ಹೊಸಕೋಟೆ-ಮಾಲೂರು ರಾಜ್ಯ ಹೆದ್ದಾರಿ 95ಕ್ಕೆ ಸಂಪರ್ಕ ಕಲ್ಪಿಸುವ 8 ಕಿಮೀವರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ.
ಚುನಾವಣೆ ವೇಳೆ ಶಾಸಕ ಶರತ್ ರಾಜಕೀಯ ನಾಟಕ: ಸಚಿವ ಎಂಟಿಬಿ ನಾಗರಾಜ್
ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಸರ್ಕಾರ ಈ ಹಿಂದೆ ದಶಕಗಳ ಕಾಲ ಆಡಳಿತ ಮಾಡಿದ ಯಾವುದೇ ಸರ್ಕಾರಗಳು ಮಾಡದಷ್ಟುರಸ್ತೆ ನಿರ್ಮಾಣವನ್ನು ಮಾಡಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದರು. ಬಿಎಂಆರ್‌ಡಿಎ ಅಧ್ಯಕ್ಷ ಶಂಕರೇಗೌಡ ಮಾತನಾಡಿ, ರಸ್ತೆಗಳು ಅಭಿವೃದ್ಧಿಯಾದರೆ ದೇಶದಲ್ಲಿ ಕೈಗಾರಿಕೆಗಳ ಬೆಳವಣಿಗೆ ಆಗುತ್ತದೆ. ಕೈಗಾರಿಕೆಗಳ ಅಭಿವೃದ್ಧಿಯಾದರೆ ಉದ್ಯೋಗ ಸೃಷ್ಟಿಆಗುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೂರ ದೃಷ್ಟಿಇಟ್ಟುಕೊಂಡು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.