ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸುವ ದೃಢ ನಿರ್ಧಾರದಿಂದ ದೇಶದಲ್ಲಿ ಎಸ್ಸಿ-ಎಸ್ಟಿಜನರು ಸ್ವಾಭಿಮಾನದಿಂದ ಬದುಕುವಂತೆ ಮಾಡಿ ಬಾಬಾಸಾಹೇಬ್ ಅಂಬೇಡ್ಕರ್ ಆಶಯ ಈಡೇರಿಸಿದೆ ಎಂದು ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಹೀಗಾಗಿ ಈ ಎರಡು ಸಮುದಾಯಗಳು ಬರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಯಾಡಗಿ (ಏ.23) : ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸುವ ದೃಢ ನಿರ್ಧಾರದಿಂದ ದೇಶದಲ್ಲಿ ಎಸ್ಸಿ-ಎಸ್ಟಿಜನರು ಸ್ವಾಭಿಮಾನದಿಂದ ಬದುಕುವಂತೆ ಮಾಡಿ ಬಾಬಾಸಾಹೇಬ್ ಅಂಬೇಡ್ಕರ್ ಆಶಯ ಈಡೇರಿಸಿದೆ ಎಂದು ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಹೀಗಾಗಿ ಈ ಎರಡು ಸಮುದಾಯಗಳು ಬರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಕಲ್ಲೇದೇವರ, ಛತ್ರ, ಅಳಲಗೇರಿ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದರು. ಆರು ದಶಕಗಳಿಂದ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ಎಸ್ಸಿ-ಎಸ್ಟಿಜನಾಂಗಕ್ಕೆ ನ್ಯಾಯ ಕೊಡಸಲಿಲ್ಲ. ಹೀಗಾಗಿ ಎರಡು ಸಮುದಾಯಗಳಿಗೆ ಸಾಮಾಜಿಕ ನ್ಯಾಯದಡಿ ಇಂದಿಗೂ ಯಾವುದೇ ಸೌಲಭ್ಯಗಳು ಸಿಗದೇ ಪರದಾಡುವಂತೆ ಮಾಡಿದರು. ಆದರೆ ಬಿಜೆಪಿ ಜನಸಂಖ್ಯೆಗೆ ಆಧಾರವಾಗಿ ಎರಡು ಸಮುದಾಯಗಳಿಗೆ ಸಿಗಬೇಕಾದ ಮೀಸಲಾತಿ ಸೌಲಭ್ಯ ಕಲ್ಪಿಸಿದೆ ಎಂದರು.
undefined
ರಾಹುಲ್ ಬಿಜೆಪಿಯ ಸ್ಟಾರ್ ಪ್ರಚಾರಕ; ರೋಡ್ ಶೋಗೆ ಯತ್ನಾಳ್ ಲೇವಡಿ
ಎಸ್ಸಿ-ಎಸ್ಟಿಕಾಲನಿಗಳಿಗೆ ಭೇಟಿ ನೀಡಿದ ಬಳ್ಳಾರಿ, ಬಿಜೆಪಿ ಸರ್ಕಾರ ನಿಮ್ಮಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದೆ. ತಮ್ಮ ಕಾಲನಿಗಳು ಮೊದಲು ಹೇಗಿದ್ದವು. ಇದೀಗ ಹೇಗಾಗಿವೆ. ಇವೆರಡನ್ನೂ ತುಲಾನಾತ್ಮಕವಾಗಿ ಅಳೆದು ತೂಗಿ ನೋಡಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಶಿವಬಸಣ್ಣ ಕುಳೇನೂರ, ನಾಗರಾಜ ಬಳ್ಳಾರಿ, ವಿಜಯಭರತ್ ಬಳ್ಳಾರಿ, ಈರಣ್ಣ ಬಳ್ಳಾರಿ, ವೈ.ಎನ್. ಕರೇಗೌಡ್ರ, ದ್ಯಾಮನಗೌಡ ಪೂಜಾರ, ಸುರೇಶ ಉದ್ಯೋಗಣ್ಣನವರ, ಎಸ್.ಎನ್. ಯಮನಕ್ಕನವರ, ಸಂತೋಷ ದೊಡ್ಮನಿ ಉಪಸ್ಥಿತರಿದ್ದರು.