ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದೇ ಇವರ ದೊಡ್ಡ ಸಾಧನೆ ಎಂದು ಉಚ್ಚಾಟಿತ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ವಿರುದ್ಧ ಹರಿಹಾಯ್ದಿದ್ದಾರೆ.
ಬಾಗಲಕೋಟೆ (ಜೂ.22): ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದೇ ಇವರ ದೊಡ್ಡ ಸಾಧನೆ ಎಂದು ಉಚ್ಚಾಟಿತ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ವಿರುದ್ಧ ಹರಿಹಾಯ್ದಿದ್ದಾರೆ.
ನವನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಗೌಡ ಪಾಟೀಲ ಬಿಜೆಪಿ ಜಿಲ್ಲಾಧ್ಯಕ್ಷನಾದ ನಂತರ ಪಕ್ಷ ಸಂಘಟನೆ ಮಾಡದೇ ಕೇವಲ ಕಾರ್ಯಕರ್ತರನ್ನು ಉಚ್ಚಾಟಿಸುವುದು ಒಂದೇ ಇವರ ಕೆಲಸವಾಗಿದೆ. ಪಕ್ಷ ಸಂಘಟಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೀನಾಯ ಪರಿಸ್ಥಿತಿಗೆ ಕಾರಣಕರ್ತರು ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಎಂದು ಆರೋಪಿಸಿದರು.
undefined
ಬಾಗಲಕೋಟೆ: ಬಸ್ ಕಿಟಕಿಗಳೇ ಬಾಗಿಲುಗಳಾದವು..!
ಟಿಕೆಟ್ ಕೇಳಿದ್ದಕ್ಕೆ ಉಚ್ಚಾಟನೆ:
ಜಿಲ್ಲೆಯಲ್ಲಿ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ, ನಗರ ಅಧ್ಯಕ್ಷ ಶಿಫಾರಸ್ಸಿನಂತೆ ನನ್ನನ್ನು ಸೇರಿ ಮೂವರನ್ನು ಉಚ್ಚಾಟಿಸಿದ್ದು ಜಿಲ್ಲೆಯಲ್ಲಿ ಇಲ್ಲಿವರೆಗೂ 8ಕ್ಕೂ ಹೆಚ್ಚು ಕಾರ್ಯಕರ್ತರನ್ನು ಉಚ್ಚಾಟಿಸಿದ್ದಾರೆ. ಬಾಗಲಕೋಟೆ ಮೂವರು, ಜಮಖಂಡಿ -ಮುಧೋಳ ತಲಾ ಒಬ್ಬರನ್ನು ಉಚ್ಚಾಟನೆ ಮಾಡಿದ್ದಾರೆ. ಉಚ್ಚಾಟನೆ ಮುನ್ನ ಕಾರಣ ಕೇಳಿ ನೋಟಿಸ್ ನೀಡದೇ ಪಕ್ಷದಿಂದ ತೆಗೆದು ಹಾಕಿದ್ದಾರೆ. ಕಳೆದ ಮೂರುದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ತೇರದಾಳ ಮತಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದೆ ಆದರೆ ಶಾಸಕ ಸಿದ್ದು ಸವದಿ ಅವರಿಗೆ ಟಿಕೆಟ್ ನೀಡಿದರು. ನಾನು ಟಿಕೆಟ್ ಕೇಳಿದ್ದಕ್ಕೆ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಹೇಳಿದರು.
ಶಾಸಕ ಸಿದ್ದು ಸವದಿ ಅವರು ನನ್ನನ್ನು ಚುನಾವಣೆಯಲ್ಲಿ ದೂರವಿಟ್ಟರು. ದೂರವಾಣಿ ಕರೆ ಮಾಡಿದರು ಸ್ವೀಕರಿಸಲಿಲ್ಲ. ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದರಿಂದ ಸಿದ್ದು ಸವದಿ ಅವರಿಗೆ ಗೆಲುವು ಸಿಕ್ಕಿತು. ಇಲ್ಲದಿದ್ದರೆ ಅವರ ಸೋಲು ಖಚಿತವಾಗಿತ್ತು. ಶಾಸಕರು ಹೇಳಿದಂತೆ ಜಿಲ್ಲಾಧ್ಯಕ್ಷ ನಡೆದುಕೊಳ್ಳುತ್ತಿದ್ದು ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುತ್ತಾ ಬಂದಿದ್ದಾರೆಂದು ಆಪಾದಿಸಿದರು.
ನನ್ನ ಉಚ್ಚಾಟನೆ ಕ್ರಮವನ್ನು ರಾಜ್ಯಾಧ್ಯಕ್ಷರಿಗೆ ಮನವಿ ಮೂಲಕ ತಿಳಿಸುತ್ತೇನೆ. ಶಾಸಕ ಸಿದ್ದು ಸವದಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರ ವಿರುದ್ದ ವರಿಷ್ಠರಿಗೆ ದೂರು ನೀಡುತ್ತೇನೆ ಎಂದರು. ಕ್ಷೇತ್ರದಲ್ಲಿ ಪಿಕೆಪಿಎಸ್ ಚುನಾವಣೆಯಲ್ಲಿ ಬಿಜೆಪಿ ಮೊದಲನಿಂದಲೂ ಅವಿರೋಧ ಆಯ್ಕೆ ಮಾಡುತ್ತಾ ಬಂದಿತು. ಆದರೆ ಈಗ ಶಾಸಕ ಸಿದ್ದು ಸವದಿ ಅವರ ಧೋರಣೆಯಿಂದ ಚುನಾವಣೆ ನಡೆಯುವ ಸನ್ನಿವೇಶಗಳು ಆರಂಭಗೊಂಡಿವೆ ಎಂದು ಹೇಳಿದರು.
ಪಕ್ಷದಿಂದ ಉಚ್ಚಾಟಿಸಿದರೆ ಪಕ್ಷ ಬೆಳೆಯುವುದೇ?
ಪಕ್ಷದಿಂದ ಕಾರ್ಯಕರ್ತರನ್ನು ಉಚ್ಚಾಟನೆ ಮಾಡುವುದರಿಂದ ಪಕ್ಷವು ಬೆಳೆಯುವುದೇ ಎಂದು ರಾಜೇಂದ್ರ ಅಂಬಲಿ ಅವರು ಪ್ರಶ್ನಿಸಿದರು.
ಪಕ್ಷದಲ್ಲಿ ದುಡಿಯುವವರಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಶಾಸಕರ ಹಾಗೂ ಪ್ರಮುಖರ ಮಾತುಗಳನ್ನು ಕೇಳಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರು ಉಚ್ಚಾಟನೆ ಮಾಡುತ್ತಾ ಹೊರಟಿದ್ದಾರೆ. ಜಿಲ್ಲಾಧ್ಯಕ್ಷರು ಪಕ್ಷದ ಸಂಘಟನೆಗೆ ಒತ್ತು ನೀಡದೇ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರು ಚುನಾವಣೆಯಲ್ಲಿ ಟಿಕೆಟ್ ಕೇಳಿದರೆ ಅವರನ್ನು ಉಚ್ಚಾಟಿಸುವುದು ಇವರ ಸಾಧನೆಯಾಗಿದ್ದು, ಎಲ್ಲರನ್ನು ಉಚ್ಚಾಟಿಸುತ್ತಾ ಹೋದರೆ ಪಕ್ಷ ಬೆಳೆಯುತ್ತದೆಯೇ ಎಂದು ಹೇಳಿದ ಅವರು, ಮುಂದಿನ ದಿನಮಾನಗಳಲ್ಲಿ ಪಕ್ಷವನ್ನು ಕಟ್ಟುವುದು ಬಹುದೊಡ್ಡ ಕೆಲಸ. ಜಿಲ್ಲೆಯಲ್ಲಿ ಪಕ್ಷವು ಅಧೋಗತಿಗೆ ಇಳಿಯುತ್ತಿದ್ದು ಸಂಘಟನೆ ಶೂನ್ಯವಾಗಿದೆ. ಪಕ್ಷದ ಜಿಲ್ಲಾಧ್ಯಕ್ಷ ಕೆಲಸಕ್ಕೆ ಬಾರದಂತಹ ವ್ಯಕ್ತಿಯಾಗಿದ್ದು ಇಂಥವರನ್ನು ಮೊದಲು ಪಕ್ಷದಿಂದ ಉಚ್ಚಾಟಿಸಬೇಕು ಎಂದರು.
Bagalkote: 15 ವರ್ಷಗಳಿಂದ ಮಾಶಾಸನಕ್ಕಾಗಿ ಅಲೆಯುತ್ತಿರೋ ಹಿರಿಯ ಕಲಾವಿದ, ತುತ್ತು ಅನ್ನಕ್ಕೆ ಗೊಂದಳಿ ಪದವೇ ಆಸರೆ
(ಫೋಟೋ 22ಬಿಕೆಟಿ9, ನವನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಚ್ಛಾಟಿತ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ