ಇನ್ನೇನು ಸೋತಾಗಿದೆ, ಏನ್ ಮಾತಾಡ್ಲಿ, ಸೋತಾಯಿತಲ್ಲ: ವಿ.ಸೋಮಣ್ಣ

By Govindaraj S  |  First Published May 14, 2023, 11:14 AM IST

ಇನ್ನೇನು ಸೋತಾಗಿದೆ, ಏನ್ ಮಾತಾಡ್ಲಿ, ಸೋತಾಯಿತಲ್ಲ. ಮಾತಾಡೋದು ಅಗತ್ಯ ಇಲ್ಲ ಸೋತಿದೀನಿ ಅಷ್ಟೇ, ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದೆ. ಚಾಲೆಂಜ್ ಆಗಿ ತಗೊಂಡೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು. 


ಬೆಂಗಳೂರು (ಮೇ.14): ಇನ್ನೇನು ಸೋತಾಗಿದೆ, ಏನ್ ಮಾತಾಡ್ಲಿ, ಸೋತಾಯಿತಲ್ಲ. ಮಾತಾಡೋದು ಅಗತ್ಯ ಇಲ್ಲ ಸೋತಿದೀನಿ ಅಷ್ಟೇ, ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದೆ. ಚಾಲೆಂಜ್ ಆಗಿ ತಗೊಂಡೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು. ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತೆ. ನನ್ನ ಈ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳ್ತು ಅಂತ ಹೋದೆ. ಜನ ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ. ಪಕ್ಷಕ್ಕೂ ಹಿನ್ನಡೆ ಆಗಿದ್ದು ನಮಗೆಲ್ಲ ಒಂದು ಎಚ್ಚರಿಕೆ ಗಂಟೆ. ಜನರ ತೀರ್ಮಾನ ಇದು, ಬದ್ಧರಾಗಬೇಕು ಎಂದು ಅವರು ಹೇಳಿದರು.

ಯಡಿಯೂರಪ್ಪ ಅವರನ್ನು ಪಕ್ಷ ಮೂಲೆಗುಂಪು ಮಾಡಲಿಲ್ಲ. ಅವರ ನಾಯಕತ್ವದಲ್ಲಿ ಚುನಾವಣೆ ಮಾಡಿದೀವಲ್ಲ. ಯಡಿಯೂರಪ್ಪ ಹೇಳಿದಾರಾ ಮೂಲೆಗುಂಪು ಮಾಡಿದಾರೆ ಅಂತ?. ಸೋತ ತಕ್ಷಣ ಎಲ್ಲ ಮುಗಿದು ಹೋಯ್ತಾ?. ಸೋಲಿಗೆ ಯಡಿಯೂರಪ್ಪ ಫ್ಯಾಕ್ಟರ್ ಕಾರಣ ಅಲ್ಲ ಎಂದು ಸೋಮಣ್ಣ ಹೇಳಿದರು. ಕಾಂಗ್ರೆಸ್‌ನ ಗ್ಯಾರಂಟಿ ಸ್ಕೀಂಗಳೇ ಅವರ ಗೆಲುವಿಗೆ ಕಾರಣ.ಈ ದೇಶಕ್ಕೆ ಮೋದಿಯವರು ಪ್ರಶ್ನಾತೀತ ನಾಯಕರು. ಅವರ ಕೆಲಸಗಳು ಅವಿಸ್ಮರಣೀಯ. ನಾನು ಕೆಲಸಗಾರ, ಈಗ ನಿರುದ್ಯೋಗಿ ಆಗಿದೀನಿ. ನಾನು ಸೋಲನ್ನು ಒಪ್ಕೊಂಡಿದೀನಿ. ವರಿಷ್ಠರು ಕರೆ ಮಾಡಿದ್ರು. ಒಳ್ಳೆಯವರನ್ನು ಯಾರೂ ಗುರುತಿಸಿಲ್ಲ ಎಂದರು

Tap to resize

Latest Videos

Shivamogga Election News: ಸೋದ​ರ​ ಕುಮಾ​ರ್‌ ಬಂಗಾ​ರ​ಪ್ಪಗೆ ಮಣ್ಣು​ಮು​ಕ್ಕಿ​ಸಿದ ಮಧು ಬಂಗಾ​ರಪ್ಪ

ರಾಜಕೀಯ ನಿವೃತ್ತಿ ಇಲ್ಲ ಎಂದ ಸೋಮಣ್ಣ: ನಾನು ಸಾಯೋತನಕ ಸಕ್ರಿಯ ಆಗಿರ್ತೇನೆ. ನಿವೃತ್ತಿ ಅನ್ನೋ ಪದವೇ ನನಗೆ ಗೊತ್ತಿಲ್ಲ. ನಿವೃತ್ತಿ ಎಷ್ಟು ಜನ ತಗೊಂಡಿದಾರೆ ಹೇಳಿ?. ನಿವೃತ್ತಿ ಅನ್ನೋದೆಲ್ಲ ಒಂದು ನಾಟಕ ವೀರಶೈವ ಲಿಂಗಾಯತ ಮತ ವಿಭಜನೆ ಯಾಕಾಯ್ತು ಅಂತ ಯಡಿಯೂರಪ್ಪ ಅವರಿಗೆ ಕೇಳಿ. ಯಡಿಯೂರಪ್ಪ ಹಿರಿಯರು, ನಮ್ಮ ಪಕ್ಷದ ನಾಯಕರು.  ನಾನು ಸೀಮಿತ, ನನಗೆ ಕೇಳಬೇಡಿ ಎಂದರು ಸೋಮಣ್ಣ.

Davanagere Election Results 2023: ದಾಖಲೆ ಜಯ: ಕಾಂಗ್ರೆಸ್‌ ಸಾಧನೆ ಖುಷಿ ನೀಡಿದೆ

ವಿ.ಸೋಮಣ್ಣಗೆ ಕರೆ‌ಮಾಡಿದ ಅಮಿತ್ ಷಾ: ವರುಣಾ ಹಾಗೂ ಚಾಮರಾಜನಗರ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಸೋಮಣ್ಣಗೆ ಫಲಿತಾಂಶ ಬಂದ ಬೆನ್ನಲ್ಲೇ ನಿನ್ನೆ (ಶನಿವಾರ) ಅಮಿತ್ ಶಾ ಹಾಗೂ ಬಿ.ಎಲ್ ಸಂತೋಷ್ ಕರೆ ಮಾಡಿ ಮಾತನಾಡಿದ್ದಾರೆ. ಸಾರಿ ಸೋಮಣ್ಣ ಜೀ ಇದನ್ನು ನಾವು ಎಕ್ಸ್‌ಪೆಕ್ಟ್ ಮಾಡಿರಲಿಲ್ಲ ಎಂದುಅಮಿತ್ ಶಾ ಹಾಗೂ ಬಿ.ಎಲ್ ಸಂತೋಷ್ ಕ್ಷಮೆಯಾಚಿಸಿದ್ದಾರೆ. ನಿಮಗೆ ಈ ರೀತಿಯ ಫಲಿತಾಂಶ ಬರುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಎಣಿಕೆ ತಪ್ಪಾಗಿದೆ. ನಿಮ್ಮ ಬೆಂಬಲಕ್ಕೆ ಪಕ್ಷ ಹಾಗೂ ನಾವು ಸದಾ ಇರುತ್ತೇವೆ ಎಂದು ದೂರವಾಣಿ ಮೂಲಕ ಸೋಮಣ್ಣ ಜೊತೆ ಅಮಿತ್ ಶಾ ಹಾಗೂ ಬಿ ಎಲ್ ಸಂತೋಷ್ ಮಾತನಾಡಿದ್ದಾರೆ. 

click me!