* ಮೋದಿ ಆಡಳಿತವನ್ನ ಇಡಿ ದೇಶವೇ ಒಪ್ಪಿಕೊಂಡಿದೆ
* 2023ಕ್ಕೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತೆ...
* ಕೇಂದ್ರದಲ್ಲಿ ಮೋದಿ ಸರಕಾರ ಮೂರನೇ ಸಲ ಅಧಿಕಾರಕ್ಕೆ ಬರುತ್ತೆ
* ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ವಿಶ್ವಾಸ
ಧಾರವಾಡ, (ಜೂನ್.02) : ಮೋದಿ ಸರಕಾರಕ್ಕೆ ಇಂದಿಗೆ 8 ವರ್ಷ ಕಳೆದಿದೆ. ಮೋದಿ ಆಡಳಿತವನ್ನ ಇಡಿ ದೇಶವೇ ಒಪ್ಪಿಕೊಂಡಿದೆ..ಕೊರೊನಾ ಸಮಯದಲ್ಲಿ ಮೋದಿ ಸರಕಾರ ಜನರಿಗೆ ಹತ್ತಿರದಿಂದ ಸ್ಪಂದನೆ ಮಾಡಿದೆ..ವ್ಯಾಕ್ಸಿನ್ ಕೊಡಿಸುವುದರಲ್ಲಿ ಮೋದಿ ಸರಕಾರ, ಒಳ್ಳೆಯ ಆಡಳಿತ ಕೊಟ್ಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹಾಡಿ ಹೊಗಳಿದ್ದಾರೆ..
ಧಾರವಾಡದಲ್ಲಿ ಇಂದು(ಗುರುವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ನೋಡಿ ಕಾಂಗ್ರೆಸ್ ಪಕ್ಷಕ್ಕೆ ಸಹಿಸಿಕ್ಕೊಳ್ಳುತ್ತಿಲ್ಲ. ಕಾಂಗ್ರೆಸ್ ಇವತ್ತು ನೆಲ ಕಚ್ಚಿದೆ. ನಾಲ್ಕು ರಾಜ್ಯಗಳ ಚುಣಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಮುಂಬರುವ 2023 ರಲ್ಲಿ ರಾಜ್ಯದಲ್ಲಿ ಬಿಜೆಪಿ, 2024 ರಲ್ಲಿ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ನೆತೃತ್ವದ ಬಿಜೆಪಿ ಸರಕಾರವು ಎರಡು ಅವಧಿಯಲ್ಲಿ 8ನೇ ವರ್ಷವನ್ನ ಪೂರೈಸಿದೆ. ಮೋದಿ ಅವರು ಇಡಿ ದೇಶಾದ್ಯಂತ ಅಭಿವೃದ್ದಿ ಪತದತ್ತ ತೆಗೆದುಕ್ಕೊಂಡು ಹೋಗುತ್ತಿದ್ದಾರೆ. ಇನ್ನು ರಷ್ಯಾ ಮತ್ತು ಉಕ್ರೆನ್ ಸಂದರ್ಭದಲ್ಲಿ 22,000 ಜನರನ್ನ ಭಾರತಕ್ಕೆ ಜೀವಂತವಾಗಿ ಕರೆದುಕ್ಕೊಂಡು ಬಂದಿದ್ದಾರೆ. ಇದು ಸಾಮಾನ್ಯ ಕೆಲಸ ಅಲ್ಲ. ಇನ್ನು ಹಾವೇರಿ ಯುವಕನನ್ನ ಯುದ್ದ ನಿಲ್ಲಿಸಿ ಮೃತ ದೇಹವನ್ನ ತಾಯ್ನಾಡಿಗೆ ಮರಳಿ ತಂದಿದ್ದಾರೆ ಎಂದರು.
ಆಂತರಿಕ ಕಚ್ಚಾಟದಿಂದ ಹೈರಾಣಾದ ಕಾಂಗ್ರೆಸ್‌ಗೆ ಮತ್ತೊಂದು ಶಾಕ್
ಪ್ರಸಕ್ತ ವರ್ಷನಲ್ಲಿ ಉತ್ತಮ ಕೃಷಿ ಬಜೆಟ್‌ನ್ನು ಮಂಡಿಸಿದೆ. 8 ವರ್ಷದ ತೋಟಗಾರಿಕೆಯ ಬಜಟ್ ನಲ್ಲಿ 6 ಪಟ್ಟು ದ್ವಿಗುಣ ಮಾಡಿದ್ದಾರೆ. ಬತ್ತದ ಬೆಳೆಯಾಗಿರಬಹುದು, ಗೋದಿ, ಬೆಳೆಯಾಗಿರಬಹುದು, ಎಲ್ಲ ದ್ವಿದಳ ಧಾನ್ಯಗಳ ದರವನ್ನ ಏರಿಸುವುದರಿಂದ ರೈತರ ಪರ ಬಜೆಟ್ ಮಂಡನೆ ಮಾಡಿದ್ದಾರೆ...ಪಿ ಎಂ ಕಿಸಾನ್ ನಲ್ಲಿ ಕೋಟ್ಯಂತರ ಹಣವನ್ನ ರೈತರ ಖಾತೆಗೆ ಜಮಾ ಮಾಡಿದ್ದಾರೆ. ಪ್ರಧಾನ ಮಂತ್ರಿ ಮೋದಿ ಅವರು ಕೇಂದ್ರದಲ್ಲಿ ಹಲವಾರು ಯೋಜನೆಗಳನ್ನು ಜನರಿಗೆ ಮುಟ್ಡುವ ಹಾಗೆ ಮಾಡಿದ್ದಾರೆ...ಇನ್ನು ಪ್ರದಾನಿ ಮೋದಿ ಅವರು ಇಡಿ ದೇಶಕ್ಕೆ ಒಳ್ಳೆಯ ಆಡಳಿತವನ್ನ ಕೊಟ್ಟಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಧಾನಿ ಅವರು ನೇಯವಾಗಿ ಜನರಿಗೆ ನೀಡುವ ಸೌಲಭ್ಯದಲ್ಲಿ ಎಲ್ಲೂ ಸೋರಿಕೆಯಾಗದೆ ಹಾಗೆ ನೋಡಿಕ್ಕೊಳ್ಳುತ್ತಿದ್ದಾರೆ...2022 ರೊಳಗಾಗಿ ಬಡವರಿಗೆ ಮನೆಗಳನ್ನ ನಿರ್ಮಾಣ ಮಾಡುವ ಗುರಿಯನ್ನ ಹೊಂದಿದ್ದಾರೆ..2014 ರಿಂದ 2022 ರವರೆಗೆ ಮೋದಿ ಅವರು ಯಾವುದೆ ಹಗರಣ ಮಾಡಿಲ್ಲ ಒಂದೆ ಒಂದು ಕಪ್ಪು ಚುಕ್ಕೆಯನ್ನ ಸರಕಾರ ಮೈಗೆ ಅಂಟಿಸಿಕ್ಕೊಂಡಿಲ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರು ಚೀನಾ ಮತ್ತು ಪಾಕಿಸ್ಥಾನ ದೇಶಗಳನ್ನ ಎಲ್ಲಿಡಬೇಕು ಅಲ್ಲಿ ಇಟ್ಡಿದ್ದಿರಿ..ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ಥಾನಕ್ಕೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ...ಒಂದು ವೇಳೆ ಸುಖಾ ಸುಮ್ಮನೆ ನಮ್ಮದೇಶದ ಜೊತೆ ಖ್ಯಾತೆ ತೆಗೆದ್ರೆ ದೇಶದ ಒಳಗೆ ನುಗ್ಗಿ ಹೊಡೆಯುವ ಕೆಲಸವನ್ನ ಭಾರತ ಮಾಡುತ್ತೆ ಎಂದು ಮೋದಿ ಅವರು ಇಗಾವಲೆ ಪಾಕಿಸ್ಥಾನಕ್ಕೆ ಬಿಸಿ ಮುಟ್ಟಿಸಿದ್ದಾರೆ...8 ವರ್ಷದಲ್ಲಿ ಮೋದಿ ನೆತೃತ್ವದ ಬಿಜೆಪಿ ಸರಕಾರ ದೇಶದ ಅಭಿವೃದ್ದಿಗೆ ಶ್ರಮ ಪಡುತ್ತಿದೆ...ಮೋದಿ ಅವರು ಕಾಶ್ಮಿರದ ಚಿತ್ರಣವನ್ನ ಬಸಲಿ ಮಾಡಿದ್ದಾರೆ...ರಾಮ ಮಂದಿರದ ನಿರ್ಮಾಣ ಕಾರ್ಯ, ನಡೆದಿದೆ..ಅಯೋದ್ಯಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ...
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಸಂಜಯ ಕಫಾಟಕರ , ಮಹಾನಗರ ಪಾಲಿಕೆ ಮೇಯರ ಈರೇಶ ಅಂಚಟಗೇರಿ ಪತ್ರಿಕಾಗೋಷ್ಠಿಯನ್ನ ಇದ್ದರು.