ಭ್ರಷ್ಟಚಾರಕ್ಕೆ ದೇಶದ ಗೃಹಮಂತ್ರಿಗಳು ಪ್ರಾಂಶುಪಾಲರು, ರಾಜ್ಯದಲ್ಲಿ ಯಡಿಯೂರಪ್ಪ ಹೆಡ್‌ಮಾಸ್ಟರ್, ಬಿಜೆಪಿ ಪಕ್ಷದ ಶೇ.40 ಕಮಿಷನ್ ಬಗ್ಗೆ ವಿರೋಧ ಪಕ್ಷದವರು ಮಾತನಾಡಿದರೆ ಸಾಕ್ಷಿ ಕೊಡಿ ಎನ್ನುತ್ತಿದ್ದರು.
ಕೆಜಿಎಫ್ (ಮಾ.06): ಭ್ರಷ್ಟಚಾರಕ್ಕೆ ದೇಶದ ಗೃಹಮಂತ್ರಿಗಳು ಪ್ರಾಂಶುಪಾಲರು, ರಾಜ್ಯದಲ್ಲಿ ಯಡಿಯೂರಪ್ಪ ಹೆಡ್‌ಮಾಸ್ಟರ್, ಬಿಜೆಪಿ ಪಕ್ಷದ ಶೇ.40 ಕಮಿಷನ್ ಬಗ್ಗೆ ವಿರೋಧ ಪಕ್ಷದವರು ಮಾತನಾಡಿದರೆ ಸಾಕ್ಷಿ ಕೊಡಿ ಎನ್ನುತ್ತಿದ್ದರು. ಈಗ ಸಾಕ್ಷಿಯಾಗಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ 40 ಲಕ್ಷ ಲಂಚವನ್ನು ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ಸಾಕ್ಷವನ್ನು ನೀಡಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕೆ ಎಂದು ಜೆಡಿಎಸ್‌ನ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದರು. ಕೆಜಿಎಫ್‌ನ ಹೊರವಲಯದ ಸುಂದರಪಾಳ್ಯ ಮದರಸಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಿಜೆಪಿ, ಕಾಂಗ್ರೆಸ್ ಅಣ್ಣ ತಮ್ಮಂದಿರಿದ್ದಂತೆ. ಕಾಂಗ್ರೆಸ್ ಶೇ.20 ಪಡೆದರೆ, ಬಿಜೆಪಿ ಪಕ್ಷದವರು ಶೇ.40 ಕಮಿಷನ್ ಪಡೆಯುತ್ತಿದ್ದಾರೆ. ಈ ಎರಡು ಪಕ್ಷಗಳನ್ನು ಹೊರಗಿಟ್ಟು 2023ಕ್ಕೆ ಜೆಡಿಎಸ್ ಪಕ್ಷಕ್ಕೆ ರಾಜ್ಯದ ಜನರು ಅಧಿಕಾರ ನೀಡಲಿದ್ದಾರೆ ಎಂದರು. ಈ ಬಾರಿ ಕೋಲಾರ ಜಿಲ್ಲೆಯಲ್ಲಿ ಆರಕ್ಕೆ ಆರು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜೆಡಿಎಸ್ ಪ್ರಾಬಲ್ಯ ಮೆರೆಯಲಿದೆ, ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ರಮೇಶ್ ಬಾಬುರನ್ನು ಅಭ್ಯರ್ಥಿ ಮಾಡಿದ್ದೇವೆ, ಅವರನ್ನು ಆಯ್ಕೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆಂದು ತಿಳಿಸಿದರು.
undefined
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ: ಸಿ.ಎಂ.ಇಬ್ರಾಹಿಂ
ಬಿಜೆಪಿ ಸೋಲಿಸುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲ: ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಜೆಡಿಎಸ್‌ಗೆ ಮಾತ್ರ. ಕಾಂಗ್ರೆಸ್‌ನಿಂದ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಸೋಲಿಸಲು ಆಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ತಾಲೂಕಿನ ಹರಳಹಳ್ಳಿಯ ಬಳಿಯ ಜಾಮಿಯ ಫೈಸುಲ್ ರಸೂಲ್ ಸುನ್ನಿ ಎಜುಕೇಷನ್ ಟ್ರಸ್ವ್ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಜೆಡಿಎಸ್ ಅಲ್ಪ ಸಂಖ್ಯಾತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಜೆಡಿಎಸ್ ಅನ್ನು ಬಿಜೆಪಿ ಬಿ-ಟೀಂ ಎಂದು ಟೀಕೆ ಮಾಡುತ್ತಾರೆ. ವಾಸ್ತವದಲ್ಲಿ ಬಿಜೆಪಿಯನ್ನು ಮಣಿಸುವ ಶಕ್ತಿ ಇರುವುದು ರೈತ ಮಕ್ಕಳಿಗೆ ಮಾತ್ರ. ಇವತ್ತಿಗೂ ಜೆಡಿಎಸ್‌ಗೆ ಆ ಶಕ್ತಿ ಇದೆ ಎಂದು ಪುನರುಚ್ಚರಿಸಿದರು.
ಎಲ್ಲಾ ಭಾಗ್ಯ ಕೊಟ್ಟು 128ರಿಂದ 78ಕ್ಕೆ ಕುಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಇಬ್ರಾಹಿಂ, ಕೊಟ್ಟಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ ಎನ್ನುತ್ತೀರಲ್ಲ. ಕಳೆದ ಚುನಾವಣೆಯಲ್ಲಿ ಬಾದಾಮಿಯವರು ಸಿದ್ದರಾಮಯ್ಯನವರನ್ನು ಗೆಲ್ಲಿಸಿದರು. ಈಗ ಬಾದಾಮಿ ಬಿಟ್ಟು ಬೇರೆ ಕ್ಷೇತ್ರವನ್ನು ಹುಡುಕಿಕೊಂಡು ಹೊರಟಿರುವ ನೀವು ಶೂರರೋ, ವೀರರೋ ಉತ್ತರಿಸಿ ಎಂದು ಸವಾಲು ಹಾಕಿದರು. ಕುಮಾರಸ್ವಾಮಿ ಎರಡು ಕಡೆ ನಿಂತರೂ ಎರಡೂ ಕಡೆ ಗೆಲ್ಲುತ್ತಿದ್ದಾರೆ. ನಿಮಗೆ ಆ ಧೈರ್ಯ ಇದೆಯಾ. 50 ಸಾವಿರ ವೋಟ್ ಇದೆ ಅಂತ ಕೋಲಾರಕ್ಕೆ ಹೋಗಿದ್ದೀಯಾ ಎಂದು ಏಕವಚನದಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೂ ಬರಲ್ಲ, ಹಣ, ಅಕ್ಕಿ, ವಿದ್ಯುತ್ ಇಲ್ಲ: ಸಚಿವ ಎಂಟಿಬಿ ನಾಗರಾಜ್
ಕಳೆದ ಚುನಾವಣೆ ಮುಗಿದ ನಂತರ ಕುಮಾರಸ್ವಾಮಿಯೇ ಗಂಡು ಆಗ್ಬೇಕು ಮೇಕಪ್ ಮಾಡಿಕೊಂಡು ಬಂದಿರಿ. 14 ತಿಂಗಳಿಗೆ ಶಾಸಕರನ್ನು ಬಾಂಬೆಗೆ ಕಳುಹಿಸಿ ಸರ್ಕಾರವನ್ನು ತೆಗೆದಿರಿ. ನಿಮಗೆ ಹೇಗೆ ಮನಸ್ಸು ಬಂತು ಸಿದ್ದರಾಮಯ್ಯ ಕುಮಾರಣ್ಣ ಯಾರಿಗಾದರೂ ಅನ್ಯಾಯ ಮಾಡಿದ್ದರಾ ಎಂದು ಪ್ರಶ್ನಿಸಿದರು. ಮೊನ್ನೆ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಇಬ್ಬರು ಶಾಸಕರಿಗೆ 10 ಕೋಟಿ ಕೊಡಿಸಿ ಬಿಜೆಪಿ ಪರ ಮತ ಹಾಕಿಸಿದಿರಿ. ಶ್ರೀನಿವಾಸ ಗೌಡ ಮತ್ತು ಗುಬ್ಬಿ ವಾಸು ಅವರನ್ನು ಕರೆದುಕೊಂಡು ಹೋಗಿದ್ದು ಏಕೆ. ಅದಕ್ಕೆ ಉತ್ತರ ಕೊಡ್ತೀರಾ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ. ನಮ್ಮನ್ನ ಬಿಜೆಪಿ ಬಿ ಟೀಂ ಅಂತೀರಾ ಎಂದು ಕುಟುಕಿದರು.