ಬಿಜೆಪಿಯ 500 ಜನರಿಂದ ಆಸ್ತಿಪತ್ರ ಡೌನ್‌ಲೋಡ್ ಆಗಿದೆ: ಡಿಕೆಶಿ ಗಂಭೀರ ಆರೋಪ

By Sathish Kumar KH  |  First Published Apr 20, 2023, 4:55 PM IST

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾನು ಕನಕಪುರದಿಂದ ನಾಮಪತ್ರ ಸಲ್ಲಿಕೆ ಮಾಡಿದ ವೇಳೆ ಕೊಟ್ಟ ಆಸ್ತಿಪತ್ರವನ್ನು ಬಿಜೆಪಿಯ 500 ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.


ಬೆಂಗಳೂರು (ಏ.20): ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾನು ಕನಕಪುರದಿಂದ ನಾಮಪತ್ರ ಸಲ್ಲಿಕೆ ಮಾಡಿದ ವೇಳೆ ಕೊಟ್ಟ ಆಸ್ತಿಪತ್ರವನ್ನು ಬಿಜೆಪಿಯ 500 ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಏನೇನು ಮಾಡ್ತಾ ಇದ್ದಾರೆ ಎಲ್ಲಾ ಗಮನಕ್ಕೆ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಕಾಂಗ್ರೆಸ್‌ ಹೈಕಮಾಂಡ್‌ ಕನಕಪುರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಅನ್ನು ಡಿ.ಕೆ. ಶಿವಕುಮಾರ್‌ ಅವರಿಗೆ ನೀಡಲಾಗಿದೆ. ಆದರೆ, ಈಗ ಅವರ ಸಹೋದರ ಡಿ.ಕೆ. ಸುರೇಶ್‌ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌ ಅವರು, ಬಿಜೆಪಿಯ ವಿರುದ್ಧ ಹರಿಹಾಯ್ದರು. ಐನೂರು ಜನ ಬಿಜೆಪಿಯವರು ನನ್ನ ಆಸ್ತಿ ಪತ್ರ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಅವರು ನಮ್ಮ ವಿರುದ್ಧ ಯಾವ್ಯಾವ ಪ್ಲಾನ್‌ ಮಾಡಿದ್ದಾರೆ ಎಂಬುದರ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ, ಅವರು ಮಾಡುವ ತಂತ್ರಕ್ಕೆ  ನಾವು ಪ್ರತಿ ತಂತ್ರ ಮಾಡ್ತಾ ಇದ್ದೇವೆ ಎಂದು ಹೇಳಿದರು.

Tap to resize

Latest Videos

ಬಿಜೆಪಿ ಪ್ಲಾನ್‌ಗೆ ಬೆದರಿದ ಡಿಕೆ ಬ್ರದರ್ಸ್: ಡಿಕೆ ಶಿವಕುಮಾರ್ ವಿರುದ್ಧ ಸುಳ್ಳು ಆಸ್ತಿ ವಿವರ ಸಲ್ಲಿಕೆ ದೂರು

ರಾಣಾ ಜಾರ್ಜ್ ಕೂಡಾ ನಾಮ ಪಾತ್ರ ಸಲ್ಲಿಕೆ:  ಕನಕಪುರದಲ್ಲಿ ಡಿಕೆ ಸುರೇಶ್ ಯಾಕೆ ನಾಮಪತ್ರ ಸಲ್ಲಿಸಿದ್ದಾರೆ ಅಂತಾ ನಾಡಿದ್ದು ನಿಮಗೆ ಗೊತ್ತಾಗಲಿದೆ. ಇನ್ನು ಯಾಕೆ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಬಾರದಾ ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು. ಡಿ.ಕೆ. ಸುರೇಶ್‌ ಜೊತೆಗೆ, ಕಾಂಗ್ರೆಸ್‌ನ ಮತ್ತೊಬ್ಬ ವ್ಯಕ್ತಿ ರಾಣಾ ಜಾರ್ಜ್ ಕೂಡಾ ನಾಮ ಪಾತ್ರ ಸಲ್ಲಿಸಿದ್ದಾರೆ. ಅವರಿಗೂ ನಾಮಪತ್ರ ಸಲ್ಲಿಸೋಕೆ ನಾನೇ ಹೇಳಿದ್ದೆನು. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ನೂರಾ ನಲವತ್ತರಿಂದ ನೂರಾ ಐವತ್ತು  (140-150) ಸ್ಥಾನಗಳನ್ನು ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು.

ಐಟಿ, ಇಡಿ, ಸಿಬಿಐ ಕೇಸಲ್ಲಿ ಜೈಲಿಗೆ ಕಳಿಸುವ ಕುತಂತ್ರ: ಕನಕಪುರದಲ್ಲಿ ಪ್ರತಿ ಮನೆಯಲ್ಲಿ ಡಿಕೆ ಶಿವಕುಮಾರ್‌ ಇದ್ದಾರೆ. ನಾವಿಬ್ಬರೂ ನಿರಂತರವಾಗಿ ಮಾಡ್ಕೊಂಡು ಬಂದಿದ್ದೇವೆ. ಆದರೆ, ಬಿಜೆಪಿ ನಾಯಕರು ಇಡಿ, ಐಟಿ ಮತ್ತು ಸಿಬಿಐ ಇಲಾಖೆಯಲ್ಲಿ ಸದಾ ಹಸ್ತಕ್ಷೇಪ ಮಾಡಿಕೊಂಡು ಬಂದು ಕೆಲವು ತಂತ್ರಗಾರಿಕೆ ಮಾಡುತ್ತಿದ್ದಾರೆ. ಕಳೆದ 4 ವರ್ಷಗಳಿಂದ ವಿನಾಕಾರಣ ನಮ್ಮ ಮೇಲೆ ಕೇಸ್ ದಾಖಲಿಸಿ ಕಿರುಕುಳ ಕೊಡುತ್ತಿದ್ದು, ಜೈಲಿಗೆ ಕಳಿಸುತ್ತಿದ್ದಾರೆ.  ಹೀಗಾಗಿ ನಾನು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ.  ನಮಗೆ ಯಾವುದೇ ಆತಂಕ ಇಲ್ಲ, ಮತದಾರರು ಕಾಪಾಡುತ್ತಾರೆ ಎಂದು ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿಗೆ ಜೈಲು ಶಿಕ್ಷೆಯ ಭಯ: ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ ಡಿ.ಕೆ. ಸುರೇಶ್

ಬಿಜೆಪಿಯವರು ನಾಮಪತ್ರ ರಿಜೆಕ್ಟ್‌ ಮಾಡಿಸ್ತಾರೆ : ಕನಕಪುರದಿಂದ ಸ್ಪರ್ಧೆ ಮಾಡೊದಕ್ಕೆ ಹೈಕಮಾಂಡ್ ಸೂಚನೆ ನೀಡಿತ್ತು. ಕೆಲವೊಂದು ಕುತಂತ್ರಗಳು ನಡೀತಿದೆ ಎಂದು ಗೊತ್ತಾಗ್ತಿದೆ. ಮುಂಜಾಗ್ರತಾ ಕ್ರಮವಾಗಿ ನಾಮ ಪಾತ್ರ ಸಲ್ಲಿಕೆ ಮಾಡಿದ್ದೇನೆ. ಡಿಕೆ ಶಿವಕುಮಾರ್ ಅವರ ಮೇಲೆ ಸಾಕಷ್ಟು ಕಣ್ಣುಗಳು ಬಿದ್ದಿವೆ. ವಾಮಮಾರ್ಗದಿಂದ ಡಿಕೆಶಿಯನ್ನು ಮಣಿಸಲು ಬಿಜೆಪಿ ಪ್ಲಾನ್ ಮಾಡಿದೆ. ಡಿಕೆಶಿಯನ್ನು ಬಂಧಿಸುವುದು, ನೋಟಿಸ್ ನಿಡೋದು ನಿವೆಲ್ಲಾ ನೋಡಿದ್ದೀರಿ. ನಾಲ್ಕು ದಿನದ ಹಿಂದೆ ಕೂಡ ಚೆನೈ ಇಂದ ಐಟಿ ಅವರು ನೋಟಿಸ್ ನೀಡಿದ್ದರು. ಖುದ್ದು ನೀವೆ ಹಾಜರಾಗಬೇಕು ಎಂದು ಹೇಳಿದ್ದಾರೆ. ಚುನಾವಣೆ ಆದ್ಮಲೇ ನಾವು ಬರ್ತೇವೆ ಎಂದು ಹೇಳಿದ್ದೇವೆ ಎಂದು ಡಿ.ಕೆ. ಸುರೇಶ್‌ ಹೇಳಿದರು.

 

click me!