ಬಿಜೆಪಿ ಪ್ಲಾನ್‌ಗೆ ಬೆದರಿದ ಡಿಕೆ ಬ್ರದರ್ಸ್: ಡಿಕೆ ಶಿವಕುಮಾರ್ ವಿರುದ್ಧ ಸುಳ್ಳು ಆಸ್ತಿ ವಿವರ ಸಲ್ಲಿಕೆ ದೂರು

By Sathish Kumar KH  |  First Published Apr 20, 2023, 4:24 PM IST

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಸುಳ್ಳು ಆಸ್ತಿ ವಿವರ ನೀಡಿದ್ದಾರೆಂದು ಆರೋಪಿಸಿ ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಲು ಬಿಜೆಪಿ ಚಿಂತನೆ ನಡೆಸಿದೆ.


ಬೆಂಗಳೂರು (ಏ.20): ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಸುಳ್ಳು ಆಸ್ತಿ ವಿವರ ನೀಡಿದ್ದಾರೆಂದು ಆರೋಪಿಸಿ ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಲು ಬಿಜೆಪಿ ಚಿಂತನೆ ನಡೆಸಿದೆ. ಲೀಗಲ್ ಟೀಮ್ ಜೊತೆ ಚರ್ಚೆ ನಡೆಯುತ್ತಿದೆ. ಈ ಹಿಂಟ್ ಸಿಕ್ಕಿದ ಬಳಿಕವೇ ಡಿಕೆ ಶಿವಕುಮಾರ್ ತನ್ನ ಸಹೋದರನ ಮೂಲಕ ನಾಮಿನೇಶನ್ ಮಾಡಿಸಿದ್ದಾರೆ ಎನ್ನಲಾಗಿದೆ. 

ಈಗಾಗಲೇ ಡಿ.ಕೆ. ಶಿವಕುಮಾರ್‌ ಅವರು ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿಯೂ ಬಂದಿದ್ದಾರೆ. ಇದರ ಬೆನ್ನಲ್ಲೇ ಅವರು ಈಗಲೂ ಆಸ್ತಿಯ ವಿವರವನ್ನು ಮುಚ್ಚಿಟ್ಟು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ನಿಗದಿತ ಆಸ್ತಿಗಿಂತ ಕಡಿಮೆ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಬಿಜೆಪಿ ನಾಯಕರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕನಕಪುರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿರುವ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಸುಳ್ಳು ಆಸ್ತಿ ವಿವರ ಘೋಷಣೆ ಮಾಡಿರುವ ಕುರಿತಾಗಿ ದೂರು ಸಲ್ಲಿಸಲು ಚಿಂತನೆ ಮಾಡಿದೆ. ಈ ಬಗ್ಗೆ ಬಿಜೆಪಿ ಲೀಗಲ್ ಟೀಮ್ ಡಿಕೆ ಶಿವಕುಮಾರ್ ಮೇಲೆ ಆಸ್ತಿ ಸುಳ್ಳು ವಿವರ ನೀಡಿದ್ದಾರೆಂದು ಆಯೋಗಕ್ಕೆ ದೂರು ಸಲ್ಲಿಸಲು ಪ್ಲಾನ್ ಮಾಡಿದೆ. ಈ ಸುಳಿವು ಸಿಕ್ಕಿದ ಬೆನ್ನಲ್ಲೇ ಡಿಕೆಶಿ ಸಹೋದರ ಡಿ.ಕೆ. ಸುರೇಶ್‌ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Tap to resize

Latest Videos

ಡಿಕೆಶಿಗೆ ಜೈಲು ಶಿಕ್ಷೆಯ ಭಯ: ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ ಡಿ.ಕೆ. ಸುರೇಶ್

ನಾಮಪತ್ರ ರಿಜೆಕ್ಟ್‌ ಮಾಡಿಸ್ತಾರೆ ಎನ್ನುವ ಅನುಮಾನ:  ಈ ಕುರಿತು ಮಾತನಾಡಿದ ಡಿ.ಕೆ. ಸುರೇಶ್ ನಮ್ಮ ಮೇಲಿನ ಕೇಸ್ ಗಳ ಮೇಲೆ ಎಲ್ಲಾ ಕಡೆ ತಡೆಯಾಜ್ಞೆಗಳು ಇದೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಡಿಕೆಶಿಯನ್ನು ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿ ಅವರು ಮೊದಲೇ ಹೇಳಿದ್ದಾರೆ. ಟಿಕೆಟ್ ಘೋಷಣೆ ಮಾಡುವ ವೇಳೆ ಡಿಕೆಶಿಗೆ ಟಕ್ಕರ್ ಕೊಡ್ತೀನಿ ಅಂತಾ ಹೇಳಿದ್ದಾರೆ. ನಾವು ಕೂಡ ಮುಂಜಾಗ್ರತಾ ಕ್ರಮವಾಗಿ ರೆಡಿಯಾಗಿದ್ದೇವೆ. ಬಿಜೆಪಿ ಅವರು ಏನು ಮಾಡಿದ್ರೂ ಸಹ ಏನು ಆಗೊಲ್ಲ. ಅವರು ನಾಮ ಪತ್ರ ರಿಜೆಕ್ಟ್ ಮಾಡಿಸ್ತಾರೆ ಅನ್ನೊ ಅನುಮಾನ ಇದೆ ಎಂದು ಮಾಹಿತಿ ನೀಡಿದರು. 

ವಾಮಮಾರ್ಗದಿಂದ ಡಿಕೆಶಿ  ಮಣಿಸಲು ಬಿಜೆಪಿ ಪ್ಲಾನ್:  ಕನಕಪುರದಿಂದ ಸ್ಪರ್ಧೆ ಮಾಡೊದಕ್ಕೆ ಹೈಕಮಾಂಡ್ ಸೂಚನೆ ನೀಡಿತ್ತು. ಕೆಲವೊಂದು ಕುತಂತ್ರಗಳು ನಡೀತಿದೆ ಎಂದು ಗೊತ್ತಾಗ್ತಿದೆ. ಮುಂಜಾಗ್ರತಾ ಕ್ರಮವಾಗಿ ನಾಮ ಪಾತ್ರ ಸಲ್ಲಿಕೆ ಮಾಡಿದ್ದೇನೆ. ಡಿಕೆ ಶಿವಕುಮಾರ್ ಅವರ ಮೇಲೆ ಸಾಕಷ್ಟು ಕಣ್ಣುಗಳು ಬಿದ್ದಿವೆ. ವಾಮಮಾರ್ಗದಿಂದ ಡಿಕೆಶಿಯನ್ನು ಮಣಿಸಲು ಬಿಜೆಪಿ ಪ್ಲಾನ್ ಮಾಡಿದೆ. ಡಿಕೆಶಿಯನ್ನು ಬಂಧಿಸುವುದು, ನೋಟಿಸ್ ನಿಡೋದು ನಿವೆಲ್ಲಾ ನೋಡಿದ್ದೀರಿ. ನಾಲ್ಕು ದಿನದ ಹಿಂದೆ ಕೂಡ ಚೆನೈ ಇಂದ ಐಟಿ ಅವರು ನೋಟಿಸ್ ನೀಡಿದ್ದರು. ಖುದ್ದು ನೀವೆ ಹಾಜರಾಗಬೇಕು ಎಂದು ಹೇಳಿದ್ದಾರೆ. ಚುನಾವಣೆ ಆದ್ಮಲೇ ನಾವು ಬರ್ತೇವೆ ಎಂದು ಹೇಳಿದ್ದೇವೆ ಎಂದು ಡಿ.ಕೆ. ಸುರೇಶ್‌ ಹೇಳಿದರು. 

ಬೆಂಗಳೂರಿನ 1,500 ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ: ಮಚ್ಚು, ಲಾಂಗು ಪತ್ತೆ

ಕಾಂಗ್ರೆಸ್‌ ಹಾಗೂ ಡಿಕೆಶಿಗೆ ಹೆಜ್ಜೆ ಹೆಜ್ಜೆಗೂ ಭಯ: ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಯಾವ ಸ್ಥಿತಿಗೆ ಜಾರಿದ ಎನ್ನೋದು ನೋಡ್ತಾ ಇದ್ದೇವೆ. ನಾಗಲೋಟದಲ್ಲಿ ಇದ್ದವರು ಈಗ ಭೂಮಿಗೆ ಜಾರಿ ಬಂದಿದ್ದಾರೆ. ಕಾಂಗ್ರೆಸ್ ಗೆ ಹೆಜ್ಜೆ ಹೆಜ್ಜೆಗೂ  ಭಯ ಇದೆ. ಯಾಕೆ ಭಯ, ಕಾಂಗ್ರೆಸ್ ಪ್ರತಿ ನಾಯಕರದ್ದು ಒಂದೆಲ್ಲಾ ಒಂದು ಇದೆ. ಚಿನ್ನಾಭರಣ ಜಾಸ್ತಿ ಹಾಕಿ ರಸ್ತೆ ಮೇಲೆ ನಡೆದು ಹೋಗೋರಿಗೆ  ಭಯವಂತೆ. ಡಿಕೆ  ಶಿವಕುಮಾರ್ ಅದೇ ರೀತಿ ಭಯ ಪಡುತ್ತಿದ್ದಾರೆ.  ಡಿಕೆ ಶಿವಕುಮಾರ್ ಈ ವ್ಯವಸ್ಥೆಯನ್ನು ನಂಬ್ತಾ ಇಲ್ಲ. ಚುನಾವಣಾ ಆಯೋಗ ಏನೊ ಮಾಡಬಹುದು ಎಂದು ಡಿಕೆ ಸುರೇಶ್ ಹತ್ತಿರ ಕೂಡ ಕನಕಪುರದಲ್ಲಿ ನಾಮಪತ್ರ ಹಾಕಿದ್ದಾರೆ.. ಡಿ.ಕೆ. ಸುರೇಶ್‌ ಪದ್ಮನಾಭನಗರದಲ್ಲಿಯೂ ಹಾಕ್ತಾ ಇದ್ದರು, ಆದರೆ ಸಮಯ ಸಾಕಾಗಲಿಲ್ಲ ಅನಿಸುತ್ತದೆ ಎಂದು ಟಾಂಗ್‌ ನೀಡಿದರು.

click me!