ಸಿದ್ದರಾಮಯ್ಯ ಎಲ್ಲ ಸಮುದಾಯದ ಜನಪ್ರಿಯ ನಾಯಕ: ಜೆ.ಟಿ.ಪಾಟೀಲ

By Kannadaprabha NewsFirst Published Dec 3, 2023, 8:30 PM IST
Highlights

ಹಾಲುಮತ ಸಮಾಜದವರು ದುಡಿಮೆವುಳ್ಳವರು. ಅವರಿಗೆ ಎಷ್ಟೆ ಕಷ್ಟ ಬಂದರು ಅದನ್ನು ಮೇಟ್ಟಿನಿಂತು ಇತರೆ ಸಮಾಜದೊಂದಿಗೆ ಪ್ರೀತಿ, ವಿಶ್ವಾಸ, ನಂಬಿಕೆಯುವುಳ್ಳ ಸಮುದಾಯ ಇದಾಗಿದೆ. ಸಮಾಜದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಈ ಸಮಾಜದ ಋಣ ನನ್ನ ಬಹಳ ಇದೆ ಎಂದ ಶಾಸಕ ಜೆ.ಟಿ.ಪಾಟೀಲ 

ಬೀಳಗಿ(ಡಿ.03): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ಸಮುದಾಯದ ಜನರೊಂದಿಗೆ ಪ್ರೀತಿ ವಿಶ್ವಾಸ ಪಡೆಯುವ ಮೂಲಕ ೨ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಜಾರಿಗೆ ತಂದ ಯೋಜನೆಗಳು ಜನಪರವಾಗಿವೆ. ಇದರಿಂದ ಅವರಿಗೆ ಜನರು ಹೆಚ್ಚು ಪ್ರೀತಿಯಿಂದ ಕಾಣುತ್ತಾರೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಸ್ಥಳೀಯ ತಹಸೀಲ್ದಾರ್‌ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾಲುಮತ ಸಮಾಜದವರು ದುಡಿಮೆವುಳ್ಳವರು. ಅವರಿಗೆ ಎಷ್ಟೆ ಕಷ್ಟ ಬಂದರು ಅದನ್ನು ಮೇಟ್ಟಿನಿಂತು ಇತರೆ ಸಮಾಜದೊಂದಿಗೆ ಪ್ರೀತಿ, ವಿಶ್ವಾಸ, ನಂಬಿಕೆಯುವುಳ್ಳ ಸಮುದಾಯ ಇದಾಗಿದೆ. ಸಮಾಜದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಈ ಸಮಾಜದ ಋಣ ನನ್ನ ಬಹಳ ಇದೆ ಎಂದರು.

Latest Videos

ಬಾದಾಮಿ: ನಾನು ರಾಜಕಾರಣ ಮಾಡುವ ಶಾಸಕನಲ್ಲ, ಕಾಂಗ್ರೆಸ್‌ ಎಂಎಲ್‌ಎ ಚಿಮ್ಮನಕಟ್ಟಿ

ಕನಕದಾಸರು ಕವಿ, ದಾರ್ಶನಿಕ, ಸಂತರಾಗಿದ್ದು ಅವರು ತಮ್ಮ ಕೀರ್ತನೆಗಳ ಮೂಲಕ ಜಾತಿ ಮತ ಭೇದವಿಲ್ಲದೇ ಮನುಜ ಕುಲವೆಲ್ಲ ಒಂದೇ ಎಂಬ ಸಂದೇಶ ಸಾರಿದ್ದಾರೆ. ಅವರ ಕೀರ್ತನೆಗಳು ಮನುಕುಲಕ್ಕೆ ಸದಾಕಾಲ ದಾರಿದೀಪ. ಕನಕದಾಸರು, ಪುರಂದರ ದಾಸರಂತಹ ದಾರ್ಶನಿಕರ ಬಗ್ಗೆ ಯುವ ಸಮುದಾಯಕ್ಕೆ ತಿಳುವಳಿಕೆ ನೀಡುವುದು ಬಹಳ ಅಗತ್ಯ ಎಂದರು.

ಜಮಖಂಡಿಯ ಹುನ್ನೂರ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ವೈ.ವೈ ಕೊಕ್ಕನವರ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಇಂದಿನ ಯುವ ಜನಾಂಗದ ಹಲವು ಸಮಸ್ಯೆಗಳಿಗೆ ಕನಕದಾಸರ ಚಿಂತನೆಗಳು ಪರಿಹಾರ ನೀಡಬಲ್ಲವಾಗಿದ್ದು, ಸಮಾಜದಲ್ಲಿ ಜಾತಿ ಪದ್ದತಿ ನಿರ್ಮೂಲನೆ, ಬಡವ - ಶ್ರೀಮಂತ ಎನ್ನುವ ಅಂತರಗಳನ್ನು ಶಮನಗೊಳಿಸಿ ಸಾಮರಸ್ಯದ ಬದುಕು ಸಾಗಿಸಲು ಕನಕದಾಸರ ಸಾಹಿತ್ಯ ಯುವ ಜನತೆ ತಿಳಿಯಬೇಕಾಗಿದೆ ಎಂದರು.

ವಿದ್ಯುತ್ ಮಗ್ಗಗಳಿಗೂ ಶೂನ್ಯ ವಿದ್ಯುತ್ ಬಿಲ್: ನೇಕಾರರು ಫುಲ್ ಖುಶ್‌..!

ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ತಹಸೀಲ್ದಾರ ಸುಹಾಸ ಇಂಗಳೆ, ತಾಪಂ ಇಒ ಸಿದ್ದು ನಕ್ಕರಗುಂದಿ, ಬಿಇಒ ಎಸ್. ಆರ್. ಆದಾಪೂರ, ಹಾಲುಮತ ಸಮಾಜ ಅಧ್ಯಕ್ಷ ಪಡಿಯಪ್ಪ ಕರಿಗಾರ, ಹಿರಿಯ ಸತ್ಯಪ್ಪ ಮೆಲ್ನಾಡ್, ಹನಮಂತ ಕಾಕಂಡಕಿ, ಕಿರಣ್ ಬಾಳಾಗೋಳ, ಸಂಗಪ್ಪ ಕಂದಗಲ್, ಯಲ್ಲಪ್ಪ ಹಂಡಿ, ಬಿ.ಆರ್‌ ಸೊನ್ನದ, ಬಿ.ಎಸ್ ಮುಖಾಸಿ, ರಮೇಶ್ ಭೀಮಪ್ಪ ನಾಯಿಕ್, ಮಲ್ಲು ಹೋಳಿ, ನ್ಯಾಯವಾದಿ ರಮೇಶ್ ಕರಿಗಾರ್, ಯುವ ಉದ್ದಿಮೆದಾರ ಮಲಕರಿ ಕಲ್ಲೋಳ್ಳಿ, ಸಿದ್ದು ಸಾರಾವರಿ, ಮಹಾದೇವ ಹಾದಿಮನಿ, ಶಿವಾನಂದ ಮಾದರ, ಬಸವರಾಜ ಹಳ್ಳದಮನಿ, ಚಂದ್ರಶೇಖರ್ ಪಂಡರಿ ಸೇರಿದಂತೆ ಇತರರು ಇದ್ದರು.

ಅದ್ದೂರಿ ಭಾವಚಿತ್ರ ಮೆರವಣಿಗೆ: ಕನಕದಾಸರ ಭಾವಚಿತ್ರದೊಂದಿಗೆ ನೂರಾರು ಮಹಿಳೆಯರು ಕುಂಭ ಹೊತ್ತು, ಆರುತಿ, ಸಕಲ ವಾದ್ಯ ವೈಭವ ನ್ರತ್ಯಗಳೊಂದಿಗೆ ಬೀಳಗಿ ಕ್ರಾಸ ಬಳಿಯಲ್ಲಿಯಲ್ಲಿ ಕನಕದಾಸ ವ್ರತ್ತದಿಂದ ಬೀಳಗಿ ಪಟ್ಟಣ ಪ್ರಮುಖ ರಸ್ತೆಯಲ್ಲಿ ಅದ್ದೂರಿ ಮೆರವಣಿಗೆ ಜರುಗಿತು. ಸಮಾಜದ ಎಲ್ಲ ಯುವಕರು, ಗಣ್ಯರು ಅತಿ ಉತ್ಸಾಹದಿಂದ ಅದ್ದೂರಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

click me!