ಮೂರನೇ ಬಾರಿಗೆ ಪ್ರಧಾನಿ ಮೋದಿ ಅವರನ್ನು ಪ್ರಧಾನಿಯಾಗಿಸುವ ಉದ್ದೇಶದಿಂದ ರಾಜ್ಯಾದ್ಯಂತ ನಮೋ ಬ್ರಿಗೇಡ್ ಬೈಕ್ ರ‍್ಯಾಲಿ ನಡೆಸಲಾಗುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಹೊಸಪೇಟೆ (ಅ.11): ಮೂರನೇ ಬಾರಿಗೆ ಪ್ರಧಾನಿ ಮೋದಿ ಅವರನ್ನು ಪ್ರಧಾನಿಯಾಗಿಸುವ ಉದ್ದೇಶದಿಂದ ರಾಜ್ಯಾದ್ಯಂತ ನಮೋ ಬ್ರಿಗೇಡ್ ಬೈಕ್ ರ‍್ಯಾಲಿ ನಡೆಸಲಾಗುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ನಗರದಲ್ಲಿ ನಮೋ ಬ್ರಿಗೇಡ್ 2.0 ಬೈಕ್ ರ‍್ಯಾಲಿಯಲ್ಲಿ ಪುನೀತ್ ವೃತ್ತದಲ್ಲಿ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡುವ ಉದ್ದೇಶದಿಂದ ಕೋಲಾರದಿಂದ ಆರಂಭಿಸಿರುವ ಯಾತ್ರೆ 17 ದಿನಗಳ ಕಾಲ ನಡೆಯಲಿದ್ದು, ಇನ್ನೂ ಮೂರು ದಿನ ಬಾಕಿ ಇದೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮೋದಿ ಅವರ ಕಳೆದ ಹತ್ತು ವರ್ಷದ ಒಟ್ಟಾರೆ ಸಾಧನೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ನಾನು ರಾಜಕಾರಣದ ಪ್ರಚಾರಕ್ಕೆ ಬಂದಿಲ್ಲ. ಮೋದಿ ಅವರ ಸಾಧನೆ ಗುರುತಿಸಿ ಕೆಲಸ ಮಾಡುತ್ತಿದ್ದೇನೆ ಎಂದರು. ಕಾಂಗ್ರೆಸ್‌ನವರು ಮುಸ್ಲಿಂ ಸಮುದಾಯಗಳನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ಕೊಡುವ ಅನುದಾನವನ್ನು ಹತ್ತು ಸಾವಿರ ಕೋಟಿಗೆ ಏರಿಸುವುದು ನನ್ನ ಗುರಿ ಅಂತ ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ.
ಜತೆಗೆ ಗೃಹ ಸಚಿವರು ಈ ಸರ್ಕಾರವು ಅಲ್ಲಾಹುನ ಕೃಪೆಯಿಂದ ಬಂದಿದೆ ಅಂತ ಹೇಳಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇಸ್ರೆಲ್‌ಗೆ ಭಾರತ ಬೆಂಬಲ ನೀಡಿದೆ. ಅಲ್ಲದೆ ರಷ್ಯಾ, ಅಮೆರಿಕ, ಇಂಗ್ಲೆಂಡ್ ಹಾಗೂ ಇಡೀ ಯೂರೋಪಿಯನ್ ದೇಶಗಳು ಇಸ್ರೆಲ್‌ಗೆ ಬೆಂಬಲ ಸೂಚಿಸಿವೆ. ಇಸ್ರೆಲ್ ವಿರೋಧಕ್ಕೆ ನಿಂತಿರುವ ಕೆಲವು ರಾಷ್ಟ್ರಗಳಲ್ಲಿ ಪಾಕಿಸ್ತಾನ, ಇರಾನ್ ,ಟರ್ಕಿ, ಕತಾರ್ ರಾಷ್ಟ್ರಗಳು ಮತ್ತು ಕಾಂಗ್ರೆಸ್ ಕೂಡ ಒಂದು.
ಸೋಮಣ್ಣ ಪವರ್ ಫುಲ್ ಲೀಡರ್, ಸಿದ್ದರಾಮಯ್ಯರನ್ನ ಸೋಲಿಸುವ ಶಕ್ತಿ ಇತ್ತು: ಕೆ.ಎಸ್.ಈಶ್ವರಪ್ಪ
ಇಸ್ರೆಲ್‌ನ ವಿರುದ್ಧಕ್ಕೆ ಮತ್ತು ಪ್ಯಾಲಿಸ್ತೇನ್ ಹಾಗೂ ಭಯೋತ್ಪಾದಕರ ಪರವಾಗಿ ಕಾಂಗ್ರೆಸ್ ನಿಂತಿದ್ದರೆ, ಭಾರತಕ್ಕೆ ಸದಾ ಕಾಲ ಜತೆಯಾಗಿರುವ ಇಸ್ರೆಲ್ ಪರವಾಗಿ ಮತ್ತು ಅಲ್ಲಿ ನಡೆದಿರುವ ದುಷ್ಕಾರ್ಯಗಳ ವಿರುದ್ಧವಾಗಿ ಭಾರತ ಗಟ್ಟಿಯಾಗಿ ಧ್ವನಿ ಎತ್ತಲಿದೆ ಎಂದರು. ಕಾಂಗ್ರೆಸ್ ಪ್ಯಾಲಿಸ್ತೇನ್ ಪರವಾಗಿ ನಿಂತು, ಇಸ್ರೆಲ್ ದಾಳಿಯನ್ನು ತಪ್ಪು ಅಂತ ಹೇಳುತ್ತಿದೆ. ಇದರಿಂದ ಇಸ್ರೆಲ್ ವಿರುದ್ಧ ನಡೆದ ಈ ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸಿಕೊಂಡಿದೆ ಎಂಬುದು ಎಂಥವರಿಗಾದರೂ ಅರ್ಥವಾಗುತ್ತದೆ ಎಂದರು. ಬಿಜೆಪಿ ಯುವ ಮುಖಂಡ ಸಿದ್ದಾರ್ಥ್ ಸಿಂಗ್, ಸಾಲಿಸಿದ್ದಯ್ಯ ಸ್ವಾಮಿ ಸೇರಿ ಇತರರಿದ್ದರು.