ವೋಟ್ ಹಾಕಿದ್ರೆ ಅಭಿವೃದ್ದಿ, ಇಲ್ಲಂದ್ರೆ ನೋ ಅಭಿವೃದ್ಧಿ: ಶಾಸಕ ಬಾಲಕೃಷ್ಣ

By Govindaraj S  |  First Published Oct 11, 2023, 9:23 PM IST

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯವಾಗಿ ಹಲವು ಲೆಕ್ಕಾಚಾರಗಳು ನಡೆಯುತ್ತಿವೆ. ವೋಟ್ ಹಾಕಿದ ಬೂತ್ ಗಳಲ್ಲಿ ಅಭಿವೃದ್ಧಿ,ಲೀಡ್ ಬಾರದ ಕಡೆ ಅಭಿವೃದ್ಧಿ ಇಲ್ಲ ಅನ್ನೋ ಅರ್ಥದಲ್ಲಿ ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣರ ಒಂದು ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ  ದ್ವೇಷ ರಾಜಕಾರಣಕ್ಕೆ ಮುಂದಾದ್ರ ಅನ್ನೋ ಚರ್ಚೆ ಆಗ್ತಿದೆ.


ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಅ.11): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯವಾಗಿ ಹಲವು ಲೆಕ್ಕಾಚಾರಗಳು ನಡೆಯುತ್ತಿವೆ. ವೋಟ್ ಹಾಕಿದ ಬೂತ್ ಗಳಲ್ಲಿ ಅಭಿವೃದ್ಧಿ,ಲೀಡ್ ಬಾರದ ಕಡೆ ಅಭಿವೃದ್ಧಿ ಇಲ್ಲ ಅನ್ನೋ ಅರ್ಥದಲ್ಲಿ ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣರ ಒಂದು ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ  ದ್ವೇಷ ರಾಜಕಾರಣಕ್ಕೆ ಮುಂದಾದ್ರ ಅನ್ನೋ ಚರ್ಚೆ ಆಗ್ತಿದೆ.

Tap to resize

Latest Videos

ಕಾಂಗ್ರೆಸ್‌ಗೆ ವೋಟ್ ಹಾಕಿದ ಬೂತ್‌ಗಳಲ್ಲಿ ಮಾತ್ರ ಅಭಿವೃದ್ಧಿ: ಹೌದು, ಜೆಡಿಎಸ್- ಬಿಜೆಪಿ ಮೈತ್ರಿ ಬೆನ್ನಲೇ ಕಾಂಗ್ರೆಸ್ ನ ನಾಯಕರು ಪುಲ್ ಅಲರ್ಟ್ ಆಗಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಸಂಸದ ಡಿಕೆ ಸುರೇಶ್ ಗೆಲ್ಲಿಸಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಗೆ ವೋಟ್ ಹಾಕೋ ಊರುಗಳಿಗೆ ಮಾತ್ರ ಕೆಲಸ ಮಾಡ್ತೀವಿ. ವೋಟ್ ಹಾಕದೇ ಇರೋರ ಬಗ್ಗೆ ಆಲೋಚನೆ ಮಾಡ್ತೀವಿ ಎಂದು ಹೇಳುವ ಮೂಲಕ ಮಾಗಡಿ ಶಾಸಕ ಬಾಲಕೃಷ್ಣ ವಿವಾದ ಸೃಷ್ಟಿಸಿದ್ದಾರೆ. 

ಡಿಕೆಶಿಯನ್ನು ಜೈಲಿಗೆ ಕಳುಹಿಸಲು ಕುಮಾರಸ್ವಾಮಿ ಸಂಚು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ರಾಜ್ಯದಲ್ಲಿ ಮುಂದಿನ ಐದು ವರ್ಷ ನಮ್ಮ ಸರ್ಕಾರ ಇರುತ್ತೆ. ಬೂತ್ ಲೆಕ್ಕಾಚಾರದ ಮೇಲೆ ಎಲೆಕ್ಷನ್ ಆಗುತ್ತೆ. ಯಾವ್ ಬೂತ್ ನಲ್ಲಿ ಹೆಚ್ಚು ನಮಗೆ ವೋಟ್ ಬರುತ್ತೋ ಅಲ್ಲಿ ಕೆಲಸ ಮಾಡ್ತೀವಿ. ವೋಟ್ ಹಾಕದಿದ್ರೆ ಅಂತಹ ಬೂತ್ ಗಳ ಬಗ್ಗೆ ಆಲೋಚನೆ ಮಾಡ್ತೀವಿ. ಹಾಗಾಗಿ ಇದನ್ನ ಜನ ಯೋಚನೆ ಮಾಡಬೇಕು ಎಂದು  ಪರೋಕ್ಷವಾಗಿ ಕಾಂಗ್ರೆಸ್ ಗೆ ಮತಹಾಕದಿದ್ರೆ ಅಭಿವೃದ್ಧಿ ಮಾಡಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.

ಇನ್ನೂ ಶಾಸಕ ಬಾಲಕೃಷ್ಣರ ಈ ಸ್ಟೇಟ್ ಮೆಂಟ್ ಗೆ ಸಾರ್ವಜನಿಕವಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದ್ದು, ಮಾಗಡಿ ಜೆಡಿಎಸ್ ನ ಮಾಜಿ ಶಾಸಕ ಎ. ಮಂಜುನಾಥ್ ಕಿಡಿಕಾರಿದ್ದಾರೆ. ವೋಟ್ ಹಾಕಿದ್ರೆ ಮಾತ್ರ ಅಭಿವೃದ್ಧಿ, ವೋಟ್ ಹಾಕದ  ಬೂತ್ ಗಳಲ್ಲಿ ಅಭಿವೃದ್ಧಿ ಮಾಡೊಲ್ಲ ಅಂತಾ ಹೇಳ್ತಿದ್ದಾರಲ್ಲ, ಇದೇ ಏನ್ರಿ ನೀವು ರಾಜಕಾರಣಿ, ಶಾಸಕರಾಗಿ ಮಾತಾಡೋ ಮಾತು ಎಂದು ಪ್ರಶ್ನಿಸಿದ್ದಾರೆ. 

ಜಾತಿ ಆಧಾರದ ಮೇಲೆಯೇ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ

ನೀವು ಶಾಸಕರಾಗಿ 6 ತಿಂಗಳು ಆಯ್ತಲ್ಲ‌, ಅಸೆಂಬ್ಲಿ ಎಲೆಕ್ಷನ್ ನಲ್ಲಿ ನಿಮಗೆ ಮತ ಹಾಕಿರೋ ಗ್ರಾಮಗಳನ್ನು ಎಷ್ಟು ಅಭಿವೃದ್ಧಿ ಮಾಡಿದ್ದೀರಾ ಹೇಳಿ, ನಮ್ಮ ಅವಧಿಯ ಕಾಮಗಾರಿಗಳನ್ನು ತಮ್ಮ ಶಿಷ್ಯಂದಿರಿಗೆ ಕೊಡಿಸಲು ಹೊರಟಿದ್ದೀರಾ ದ್ವೇಷದ ರಾಜಕಾರಣ ಮಾಡೋದು ಒಳ್ಳೆಯದಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರು ಉತ್ತರ ಕೊಡ್ತಾರೆ ಎಂದು ಶಾಸಕ ಬಾಲಕೃಷ್ಣಗೆ ಟಾಂಗ್ ಕೊಟ್ಟರು. ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ವೋಟ್ ಹಾಕಿದ್ರೆ ಮಾತ್ರ ಅಭಿವೃದ್ಧಿ ಮಾಡ್ತೀವಿ ಅನ್ನೋ ಶಾಸಕರ ಸ್ಟೇಟ್ ಮೆಂಟ್ ಪ್ರಜಾಪ್ರಬುತ್ವದ ವ್ಯವಸ್ಥೆಗೆ ವಿರೋಧವಾಗಿದೆ.

click me!