ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕೊರೋನಾ| ಕುಟುಂಬ ಸದಸ್ಯರಿಗೂ ವಕ್ಕರಿಸಿದ ಮಹಾಮಾರಿ| ಬಿಜೆಪಿಯ ಎಪ್ಪತ್ತೈದು ನಾಯಕರಿಗೆ ಕೊರೋನಾ
ಪಾಡ್ನಾ(ಜು.15): ಬಿಹಾರದ ಬಿಜೆಪಿ ನಾಯಕರಿಗೆ ಕೊರೋನಾ ಸೋಂಕು ತಗುಲಿದ ಪ್ರಕರಣಗಳು ಒಂದಾದ ಬಳಿಕ ಮತ್ತೊಂದರಂತೆ ಬೆಳಕಿಗೆ ಬರುತ್ತಿವೆ. ಸದ್ಯ ಬಿಹಾರದ ಬಿಜೆಪಿ ರಾಜ್ಯಾಧ್ಯಕ್ಷ ಡಾಕ್ಟರ್ ಸಂಜಯ್ ಜಯಸ್ವಾಲ್‌ಗೂ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಅವರ ಕುಟುಂಬದ ಕೆಲ ಸದಸ್ಯರಿಗೂ ಕೊರೋನಾ ತಗುಲಿದೆ ಎನ್ನಲಾಗಿದೆ.
ಸದ್ಯ ಜಯಸ್ವಾಲ್ ಐಸೋಲೇಟ್ ಆಗಿದ್ದಾರೆ. ಕಳೆದ ವಾರ ಪಕ್ಷದ ಕಾರ್ಯಾಲಯದಲ್ಲಿ ಒಂದಾದ ಬಳಿಕ ಮತ್ತೊಂದರಂತೆ ನಡೆದ ಸಭೆ ವೇಳೆ ಇವರಿಗೆ ಕೊರೋನಾ ತಗುಲಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇದಕ್ಕೂ ಮುನ್ನ ಮಂಗಳವಾರ ಬಿಜೆಪಿ ಕಚೇರಿಯ ಇಪ್ಪತ್ತೈದು ಮಂದಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿತ್ತು.
ಸುಶಾಂತ್ ಸಾವು ದಾವೂದ್ ಗ್ಯಾಂಗ್ ಮಾಡಿದ ಕೊಲೆ; ಮಾಜಿ ರಾ ಅಧಿಕಾರಿ
ಹೀಗಿರುವಾಗ ವಿಪಕ್ಷ ನಾಯಕ ತೇಜಸ್ವಿ ಯಾದವ್ ಕೊರೋನಾ ಸೋಂಕು ನಿರಂತರವಾಗಿ ಹೆಚ್ಚುತ್ತಿರುವ ಸಂಬಂಧ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ತೇಜಸ್ವಿ ತನ್ನ ಒಂದು ಟ್ವೀಟ್‌ನಲ್ಲಿ ಬಿಹಾರದ ನಾಯಕರೇ ರಾಜ್ಯದಲ್ಲಿ ಸೋಂಕು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಬಿಹಾರ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಶಾಸಕರೂ ಸೇರಿ ಅನೇಕ ಗಣ್ಯ ನಾಯಕರಿಗೆ ಕೊರೋನಾ ತಗುಲಿದೆ. ಬಿಜೆಪಿಗರೇ ರಾಜ್ಯದಲ್ಲಿ ಸೋಂಕು ಹಬ್ಬಿಸುತ್ತಿದ್ದಾರೆ. ಆರೋಗ್ಯ ಮಂತ್ರಿ ಅದೆಷ್ಟು ಕೆಟ್ಟದಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದರೆ ಬಿಜೆಪಿ ಕಾರ್ಯಾಲಯವನ್ನೇ ಕೊರೋನಾದಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಜನ ಸಾಮಾನ್ಯರನ್ನು ಹೇಗೆ ಕಾಪಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ತಮ್ಮ ಮತ್ತೊಂದು ಟ್ವೀಟ್‌ನಲ್ಲಿ 'ಬಿಹಾರ ಬಿಜೆಪಿಯ ನೂರು ಮಂದಿ ನಾಯಕರಿಗೆ ಮಾಡಿದ ರಾಂಡಮ್ ಟೆಸ್ಟ್‌ನಲ್ಲಿ 75 ನಾಯಕರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಒಂದು ವೇಳೆ ಎಲ್ಲರನ್ನೂ ತಪಾಸಣೆಗೊಳಪಡಿಸಿದರೆ ಅದೆಷ್ಟು ಮಂದಿಗೆ ಸೋಂಕು ದೃಢಪಡಬಹುದೆಂದು ನೀವೇ ಊಹಿಸಿಕೊಳ್ಳಿ' ಎಂದು ಹೇಳಿದ್ದಾರೆ.