ಪಕ್ಷ ಯಾರಿಗೇ ಟಿಕೆಟ್‌ ನೀಡಲಿ, ಖಂಡ್ರೆ ಸೋಲಿಸುವದೊಂದೇ ಗುರಿ: ಬಿಜೆಪಿ ಒಗ್ಗಟ್ಟಿನ ಪ್ರಮಾಣ

By Kannadaprabha News  |  First Published Mar 18, 2023, 1:56 PM IST
  • ಪಕ್ಷ ಯಾರಿಗೇ ಟಿಕೆಟ್‌ ನೀಡಲಿ, ಖಂಡ್ರೆ ಸೋಲಿಸುವದೊಂದೇ ಗುರಿ
  • ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಒಗ್ಗಟ್ಟಿನ ಮಂತ್ರಕ್ಕಾಗಿ ಪ್ರಮಾಣ
  • ಕೇಂದ್ರ ಸಚಿವ, ಟಿಕೆಟ್‌ ಆಕಾಂಕ್ಷಿಗಳಿಂದ ಆಣೆ, ಪ್ರಮಾಣ ಸ್ವೀಕಾರ
  • ಮನೆ ದೇವರು, ಮಲ್ಲಣ್ಣನ ಮೇಲೆ ಪ್ರಮಾಣ ಮಾಡಿದ ಬಿಜೆಪಿಗರು

ಬೀದರ್‌ (ಮಾ.18) : ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿರುವ ಬಿಜೆಪಿಯ ಮುಖಂಡರು ಇಲ್ಲಿನ ಸುಕ್ಷೇತ್ರ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿ ಕಾಂಗ್ರೆಸ್‌ ಶಾಸಕ ಈಶ್ವಕ ಖಂಡ್ರೆ(Eshwar Khandre) ವಿರುದ್ಧ ಸಮರ ಸಾರಿದ್ದಾರೆ.

ಶುಕ್ರವಾರ ಬೆಳಿಗ್ಗೆ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರ ನೇತೃತ್ವದಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರ(Bhalki assembly constituency)ದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಸಿದ್ರಾಮ್‌, ಡಾ. ದಿನಕರ್‌ ಮೋರೆ ಅವರು ಸೇರಿದಂತೆ ಅನೇಕರು ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಪ್ರಮಾಣ ಮಾಡಿದ ಘಟನೆ ನಡೆದಿದೆ.

Latest Videos

undefined

ಇಲ್ಲೇ ಕುಳಿತರೆ ಸ್ಟಾರ್‌ ಕನಸು ಅಸಾಧ್ಯ: ನಟ ವೈಜನಾಥ್‌ ಬಿರಾದರ್‌

ನಾವು ಮೈಲಾರ ಮಲ್ಲಣ್ಣ(Mailar Mallanna temple) ದೇವರ ಸಮ್ಮುಖದಲ್ಲಿ ಪ್ರಮಾಣ ಮಾಡಿ ತಿಳಿಸುವದೇನೆಂದರೆ 2023ರ ವಿಧಾನಸಭಾ ಚುನಾವಣೆ(Karnataka assembly election)ಯಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಪಕ್ಷ ಯಾರಿಗೇ ಟಿಕೆಟ್‌ ನೀಡಿದರೂ ನಾನು ಹಾಗೂ ನನ್ನ ಪರಿವಾರ ಬಿಜೆಪಿಯ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡುತ್ತೇವೆ ಎಂದು ನಮ್ಮ ದೇವರು ಹಾಗೂ ಮೈಲಾರ ಮಲ್ಲಣ್ಣ ದೇವರ ಮೇಲೆ ಪ್ರಮಾಣ ಮಾಡುತ್ತೇವೆ ಎಂದು ಹೇಳುವ ಮೂಲಕ ಆಣೆ ಪ್ರಮಾಣ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಭಾಲ್ಕಿ ಕ್ಷೇತ್ರದಲ್ಲಿ ಈಗಾಗಲೇ ಮರಾಠಾ ವ್ಯಕ್ತಿಗೆ ಟಿಕೆಟ್‌ ನೀಡುವಂತೆ ಒತ್ತಡ ಹೆಚ್ಚಾಗುತ್ತಿರುವ ಬೆನ್ನಲ್ಲಿಯೇ ಪ್ರಬಲ ಆಕಾಂಕ್ಷಿ ಪ್ರಕಾಶ ಖಂಡ್ರೆ ಟಿಕೆಟ್‌ ಗಿಟ್ಟಿಸಿಕೊಳ್ಳುವತ್ತ ಹರಸಾಹಸ ಪಡುತ್ತಿದ್ದಾರೆ. ಕಳೆದ ಬಾರಿ ಟಿಕೆಟ್‌ ವಂಚಿತರಿಂದ ಪಕ್ಷದ ವಿರೋಧಿ ಚಟುವಟಿಕೆಗಳು ನಡೆದಿದ್ದು, ಅದಕ್ಕಾಗಿ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂಬ ಮಾತುಗಳು ದಟ್ಟವಾಗಿದ್ದವು.

ಈ ಬಾರಿಯೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಮಣಿಸುವದು ಸರಳ ಸಾಧ್ಯವೇನಿಲ್ಲ, ಇದರಿಂದಾಗಿ ಬಿಜೆಪಿಯ ಮುಖಂಡರು ಈ ಆಣೆ ಪ್ರಮಾಣದ ಲೆಕ್ಕಕ್ಕೆ ಮೊರೆ ಹೋದಂತಿದೆ. ಭಾಲ್ಕಿ ಕ್ಷೇತ್ರದಲ್ಲಿ ಕೆಲ ಬಿಜೆಪಿ ಮುಖಂಡರಿಗಂತೂ ಮಾಡು ಇಲ್ಲವೇ ಮಡಿ ಎಂಬಂಥ ಸ್ಥಿತಿ ಇದೆ. ಟಿಕೆಟ್‌ ಸಿಕ್ಕು ಜಯಗಳಿಸೋದು ಬಿಡೋಡು ಎರಡನೇ ಮಾತು ಆದರೆ, ಟಿಕೆಟ್‌ ಸಿಗದಿದ್ದಲ್ಲಿ ಅವರ ರಾಜಕೀಯ ಭವಿಷ್ಯ ಮತ್ತು ಅವರು ಭಾಲ್ಕಿಯಿಂದ ಗಂಟುಮೂಟೆ ಕಟ್ಟಿಕೊಂಡು ಹೊರನಡೆಯುವ ಅನಿವಾರ್ಯತೆಯೂ ಇದೆ. ಹೀಗಾಗಿ ಇಲ್ಲಿ ಮತ್ತೊಂದು ಬಾರಿ ಒಗ್ಗಟ್ಟಿನ ಸಮಸ್ಯೆ ಎದುರಾಗಬಹುದು ಎಂಬ ವಿಚಾರ ಪಕ್ಷ ಪ್ರಮುಖರಲ್ಲಿ ಕಾಡಿದ್ದು, ಮೈಲಾರ ಮಲ್ಲಣ್ಣನ ಆಶ್ರಯ ಪಡೆಯಲು ಪ್ರಮುಖ ಕಾರಣ ಎಂಬಂತಾಗಿದೆ.

ಬಡವರ ಹಣ ದೋಚಿದ ಕೇಂದ್ರ ಸಚಿವ ಭಗವಂತ ಖೂಬಾ: ಈಶ್ವರ ಖಂಡ್ರೆ ಆರೋಪ

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ ಪ್ರಮಾಣ ವಚನ ಬೋಧಿಸಿದ್ದು, ವಿಭಾಗೀಯ ಸಹ ಪ್ರಮುಖರಾದ ಈಶ್ವರಸಿಂಗ್‌ ಠಾಕೂರ್‌, ತಾಲೂಕು ಅಧ್ಯಕ್ಷ ಪಂಡಿತ ಶಿರೋಳೆ, ಶಿವರಾಂಜ ಗಂದಗೆ, ಅನೀಲ ಭೂಸಾರೆ, ಧೋಂಡಿರಾಮ ಚಾಂದಿವಾಲೆ, ವೀರಣ್ಣ ಕಾರಬಾರಿ ಮತ್ತಿತರರು ಇದ್ದರು.

click me!