ಬಿಜೆಪಿಯವರು ಭಾರತ್ ಅಕ್ಕಿ ಸ್ಕೀಂ ಲೋಕಸಭೆ ಎಲೆಕ್ಷನ್‌ಗಾಗಿ ತಂದದ್ದು: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Jul 7, 2024, 8:56 AM IST
Highlights

ಬಿಜೆಪಿಯವರು ಲೋಕಸಭೆ ಚುನಾವಣೆ ಸೋಲುವ ಭಯದಿಂದ ಚುನಾವಣೆಗಾಗಿ ಸೀಮಿತವಾಗಿ ‘ಭಾರತ್ ಅಕ್ಕಿ’ (ಭಾರತ್‌ ರೈಸ್‌) ವಿತರಣೆ ಜಾರಿಗೆ ತಂದಿದ್ದರು. ಕೇಂದ್ರ ಬಿಜೆಪಿಯು ಬಡವರ ಪರವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 
 

ಬೆಂಗಳೂರು (ಜು.07): ಬಿಜೆಪಿಯವರು ಲೋಕಸಭೆ ಚುನಾವಣೆ ಸೋಲುವ ಭಯದಿಂದ ಚುನಾವಣೆಗಾಗಿ ಸೀಮಿತವಾಗಿ ‘ಭಾರತ್ ಅಕ್ಕಿ’ (ಭಾರತ್‌ ರೈಸ್‌) ವಿತರಣೆ ಜಾರಿಗೆ ತಂದಿದ್ದರು. ಕೇಂದ್ರ ಬಿಜೆಪಿಯು ಬಡವರ ಪರವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬೆನ್ನಲ್ಲೇ ಪ್ರತಿ ಕೆ.ಜಿ.ಗೆ 29 ರು. ದರದಂತೆ ಅಕ್ಕಿ ವಿತರಿಸುವ ಭಾರತ್‌ ಅಕ್ಕಿ ಹಂಚಿಕೆ ನಿಲ್ಲಿಸಿದ ಕೇಂದ್ರದ ಕ್ರಮದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಚುನಾವಣೆ ಮುಗಿದ ತಕ್ಷಣ ಭಾರತ್‌ ಅಕ್ಕಿ ನಿಲ್ಲಿಸಿದ್ದಾರೆ ಎಂದರೆ ಅವರು ಚುನಾವಣೆಗಾಗಿಯೇ ಇದನ್ನು ಮಾಡಿದ್ದರು ಎಂಬುದು ಸ್ಪಷ್ಟ. ನಮ್ಮ ಅನ್ನಭಾಗ್ಯ ಯೋಜನೆಗೂ ಅಕ್ಕಿ ದಾಸ್ತಾನು ಇಟ್ಟುಕೊಂಡು ಕೊಡಲಿಲ್ಲ. ತಮ್ಮ ರಾಜಕೀಯ ದುರುದ್ದೇಶಕ್ಕೆ ಬಡವರಿಗೆ ಸಿಗಬೇಕಾಗಿದ್ದ ಅಕ್ಕಿ ನೀಡಲಿಲ್ಲ. ತನ್ಮೂಲಕ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದರು. ಆದರೆ ನಾವು ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಹಣವನ್ನೇ ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಿದೆವು ಎಂದು ಹೇಳಿದರು.

Latest Videos

ಮುಡಾದಲ್ಲಿ ಹಗರಣ ಆಗಿಲ್ಲವಾದರೆ ತನಿಖೆ ಯಾಕೆ?: ಎಚ್‌.ಡಿ.ಕುಮಾರಸ್ವಾಮಿ

ಈಗಲೂ ಕೇಂದ್ರದಲ್ಲಿ ಅಕ್ಕಿ ದಾಸ್ತಾನಿದ್ದರೂ ನಾವು ಹಣಕ್ಕೆ ಕೇಳಿದರೂ ಕೊಡುತ್ತಿಲ್ಲ. ಜತೆಗೆ ಭಾರತ್‌ ಅಕ್ಕಿ ವಿತರಣೆಯನ್ನೂ ನಿಲ್ಲಿಸಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ಬಡವರ ಪರವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಎಲ್ಲಾ ಜಾತಿಯವರಲ್ಲೂ ಬಡವರಿದ್ದಾರೆ. ಆದರೆ ಕೇಂದ್ರ ಬಿಜೆಪಿಯವರಿಗೆ ಬಡವರು ಎಂದರೆ ಅಸಡ್ಡೆ. ಹೀಗಾಗಿಯೇ ಅಕ್ಕಿ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು.

ಯೋಜನೆಯನ್ನು ಪುನರಾರಂಭಿಸಲಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯ ಸರ್ಕಾರ ಆರಂಭಿಸಿದ್ದ ಭಾರತ್ ರೈಸ್ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಬಡವರ ಅನ್ನದ ಜೊತೆಗೆ ಆಟವಾಡಿದ್ದಂತಾಗಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮಾನ್ಯರಿಗೂ ಅಗ್ಗದ ದರದಲ್ಲಿ ಅಕ್ಕಿ ಸಿಗಬೇಕೆಂಬ ಉದ್ದೇಶದಿಂದ ಭಾರತ್ ರೈಸ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಈ ಯೋಜನೆಯನ್ನು ಜು.1ರಿಂದಲೇ ರದ್ದು ಮಾಡಲಾಗಿದೆ. ಇದು ಅತ್ಯಂತ ಖಂಡನೀಯವಾದ್ದದ್ದು, ಕೂಡಲೇ ಎನ್‍ಡಿಎ ಅಂಗಪಕ್ಷಗಳ ಮುಖಂಡರಾದ ಚಂದ್ರಬಾಬು ನಾಯ್ಡು, ನಿತೀಶ್‍ ಕುಮಾರ್, ಕುಮಾರಸ್ವಾಮಿ ಮುಂತಾದವರು ಪ್ರಧಾನ ಮಂತ್ರಿ ಮೋದಿಯವರ ಮೇಲೆ ಒತ್ತಡ ತಂದು ಯೋಜನೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಸುಳ್ಳು ಸುದ್ದಿ ಹರಡಿದರೆ ಯಾವುದೇ ಪಕ್ಷದವರಾದರೂ ಬಿಡಬೇಡಿ: ಸಿಎಂ ಸಿದ್ದರಾಮಯ್ಯ

ಇದರ ಜೊತೆಗೆ ಬೇಳೆ, ಗೋದಿ, ಹಿಟ್ಟಿನ ಮಾರಾಟವನ್ನು ಕೂಡ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬೇಕಾಗಿತ್ತು. ಬಿಪಿಎಲ್ ಎಪಿಎಲ್ ಇಲ್ಲದ ಕುಟುಂಬಗಳಿಗೆ ಇದು ಸಹಾಯಕ ವಾಗುತ್ತಿತ್ತು. ಅಕ್ಕಿ ಮತ್ತು ಇತರೆ ದಿನಸುಗಳನ್ನು ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸುವುದನ್ನು ಬಿಟ್ಟು ಮಾಲ್‍ಗಳ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಇದು ಸರಿಯಲ್ಲ, ಮೋದಿಯವರು ಚುನಾವಣಾ ಸಂದರ್ಭದಲ್ಲಿ ಘೋಷಿಸಿ ಗೆದ್ದ ಮೇಲೆ ಈ ಯೋಜನೆಯನ್ನು ಸ್ಥಗಿತಗೊಳಿಸಿ, ಬಡವರನ್ನು ಭ್ರಮನಿರಸನಗೊಳಿಸಿದ್ದಾರೆ ಎಂದು ಆರೋಪಿಸಿದರು.

click me!