Bharat Jodo Yatra: ಅ.21 ರಿಂದ 23ರವರೆಗೆ ರಾಯಚೂರಲ್ಲಿ ಭಾರತ್‌ ಜೋಡೊ ಯಾತ್ರೆ

By Kannadaprabha News  |  First Published Oct 19, 2022, 11:30 PM IST

ಅ.21 ರಿಂದ 23ರವರೆಗೆ ರಾಯಚೂರಿನಲ್ಲಿ ಸಂಚರಿಸಲಿದ್ದು, ಯಾತ್ರೆ ಯಶಸ್ವಿಗೆ ಅಗತ್ಯವಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ 


ರಾಯಚೂರು(ಅ.19): ಕಾಂಗ್ರೆಸ್‌ನ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ಪಾದಯಾತ್ರೆಯು ಇದೇ ಅ.21 ರಿಂದ 23ರವರೆಗೆ ರಾಯಚೂರಿನಲ್ಲಿ ಸಂಚರಿಸಲಿದ್ದು, ಯಾತ್ರೆ ಯಶಸ್ವಿಗೆ ಅಗತ್ಯವಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ತಿಳಿಸಿದರು.

ಮಂಗಳವಾರ ನಗರದಲ್ಲಿ ಶಾಸಕರ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅ.21 ಬೆಳಗ್ಗೆ ರಾಹುಲ್‌ ಗಾಂಧಿ ಅವರು ತುಂಗಭದ್ರಾ ಸೇತುವೆ ಮುಖಾಂತರ ರಾಯಚೂರು ಜಿಲ್ಲೆಗೆ ಪ್ರವೇಶಿಸಲಿದ್ದು, ಅಲ್ಲಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ. ಅಂದು ಬೆಳಗ್ಗೆ 11 ಗಂಟೆಗೆ ಗಿಲ್ಲೆಸುಗೂರಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಈ ವೇಳೆ ನರೇಗಾ ಕಾರ್ಮಿಕರೊಂದಿಗೆ ಚರ್ಚೆಗೆ ಅವಕಾಶವನ್ನು ನೀಡಲಾಗಿದೆ. ನಂತರ ವಿಶ್ರಾಂತಿ ಪಡೆಯಲಿರುವ ರಾಹುಲ್‌ ಗಾಂಧಿ ಅವರು ಸಂಜೆ 4 ರಿಂದ 7 ಗಂಟೆವರೆಗೆ ಪಾದಯಾತ್ರೆಯನ್ನು ಮುಂದುವರೆಸಿ ಯರಗೇರಾ ವಾಲ್ಮೀಕಿ ವೃತ್ತದ ಸಮೀಪದ ರಂಗನಾಥ ದೇವಸ್ಥಾನಕ್ಕೆ ಬಂದು ವಾಸ್ತವ್ಯ ಹೂಡಲಿದ್ದಾರೆ.

Tap to resize

Latest Videos

BHARAT JODO YATRA: ಮೊದಲ ಬಾರಿಗೆ ಮಂತ್ರಾಲಯಕ್ಕೆ ಗಾಂಧಿ ಕುಟುಂಬ ಸದಸ್ಯ ಭೇಟಿ

ಅ.22 ರಂದು ಬೆಳಗ್ಗೆ 6.30ಕ್ಕೆ ರಾಹುಲ್‌ ಗಾಂಧಿಯವರು ಪಾದಯಾತ್ರೆ ಆರಂಭಿಸಿ 11 ಗಂಟೆಗೆ ರಾಯಚೂರು ನಗರ ಸಮೀಪದ ಬೃಂದಾವನ ಹೋಟೆಲ್‌ನಲ್ಲಿ ಊಟದ ಬಿಡುವು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಏರ್ಪಡಿಸಿದ್ದು, ಸಂಜೆ 4 ಗಂಟೆಗೆ ಪಾದಯಾತ್ರೆ ಆರಂಭಿಸಿ, ನಗರದ ಬಸವೇಶ್ವರ ವೃತ್ತದ ಮಾರ್ಗವಾಗಿ ಸಾಗಿ ಸಂಜೆ 7 ಗಂಟೆಗೆ ಯರಮರಸ್‌ನ ಆನಂದ ಪ್ರೌಢಶಾಲೆ ಆವರಣದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಂದಿನ ಪಾದಯಾತ್ರೆಯಲ್ಲಿ ಕಾಂಗ್ರೆಸ್‌ನ ನಾಯಕ ಪ್ರಿಯಾಂಕ್‌ ಗಾಂಧಿಯವರು ಭಾಗವಹಿಸುವ ಸಾಧ್ಯತೆಗಳಿವೆ. ಮರುದಿನ ಅ.23 ರಂದು ಬೆಳಗ್ಗೆ 6.30ಕ್ಕೆ ರಾಹುಲ್‌ ಗಾಂಧಿಯವರು ಪಾದಯಾತ್ರೆ ಆರಂಭಿಸಿ 10.30ಕ್ಕೆ ತೆಲಂಗಾಣ ರಾಜ್ಯಕ್ಕೆ ಪಾದಯಾತ್ರೆ ನಡೆಸಲಿದ್ದಾರೆ ಎಂದು ವಿವರಿಸಿದರು.

ಈ ಭಾಗ ಪಾದಯಾತ್ರೆಯ ಉಸ್ತುವಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶ್ರೀಧರಬಾಬು, ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌ ಬೋಸರಾಜು, ಜಿಲ್ಲಾಧ್ಯಕ್ಷ ಬಿ.ವಿ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ ವಹಿಸಲಿದ್ದು, ಅವರ ನೇತೃತ್ವದಲ್ಲಿಯೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಕಾರ್ಯಕರ್ತರಿಗೆ ಕಾಲಕಾಲಕ್ಕೆ ಊಟ, ತಿಂಡಿ, ಇತರೆ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದರು.

ರಾಯಚೂರಿಗೆ ಏಮ್ಸ್‌ ನೀಡದಿದ್ದರೆ ಚುನಾವಣೆಗೆ ಸ್ಪರ್ಧಿಸಲ್ಲ: ಶಿವನಗೌಡ ನಾಯಕ

21ರಂದು ಬೆಳಿಗ್ಗೆ 7.30ಕ್ಕೆ ತುಂಗಭದ್ರಾ ಸೇತುವೆಯಲ್ಲಿ ಸುಮಾರು 15 ಸಾವಿರ ಜನರನ್ನು ಸೇರಿಸುತ್ತಿದ್ದು, ಇಡೀ ಪಾದಯಾತ್ರೆಯಲ್ಲಿ ನಿತ್ಯ 30 ರಿಂದ 40 ಸಾವಿರ ಜನರು ಭಾಗವಹಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ಇಷ್ಟೇ ಅಲ್ಲದೇ ಬೀದರ್‌, ಕಲಬುರಗಿ, ಯಾದಗಿರಿ ಹಾಗೂ ಜಿಲ್ಲೆಯ ಎಲ್ಲ ಕ್ಷೇತ್ರಗಳ ಕಾಂಗ್ರೆಸ್‌ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಸಹ ಯಾತ್ರೆಗೆ ಕೈಜೋಡಿಸುತ್ತಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ನ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ, ಕೆ.ಪಂಪಾಪತಿ, ಮುಖಂಡರಾದ ನಾಗೇಂದ್ರಪ್ಪ ಮಟಮಾರಿ, ರಾಮ ನಾಯಕ, ಬಷೀರ್‌ ಅಹಮ್ಮದ್‌ ಗೋವಿಂದಪ್ಪ, ಅಶೋಕ ಹಾಗೂ ಮತ್ತಿತರರು ಇದ್ದರು.
 

click me!