ಕೆಳಮಟ್ಟದ ಪದ ಬಳಕೆ ಮಾಡಿದ ರಾಜಕೀಯ ನಾಯಕರು: ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಅನ್ನೋದೇ ದುರಂತ..!

By Girish Goudar  |  First Published Oct 19, 2022, 9:50 PM IST

ಹುಚ್ಚ, ಪೆದ್ದ, ಮನೆ ಮುರುಕ, ರಾಕ್ಷಸ ತಲೆಕೆಟ್ಟವರು ಪದಬಳಕೆ, ಸಿದ್ದರಾಮಯ್ಯ, ಶ್ರಿರಾಮುಲು, ನಾಗೇಂದ್ರ ಉಗ್ರಪ್ಪರಿಂದ ಪದ ಬಳಕೆ


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ

ಬಳ್ಳಾರಿ(ಅ.19):  ರಾಜಕೀಯದಲ್ಲಿ ವಾಕ್ಸಮರ ನಡೆಸೋದು ಸಾಮಾನ್ಯ. ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಆಯಾ ಪಕ್ಷದ ಸಾಧನೆ ಹೇಳಿಕೊಳ್ಳೋದು ಮತ್ತು ಹೊಗೊಳೋದು ಮತ್ತು ತೆಗಳೋದು ಸಾಮಾನ್ಯ. ಆದ್ರೇ, ಇತ್ತೀಚೆಗೆ ನಾಯಕರ ಮಾತುಗಳು ಹದ್ದು ಮೀರುತ್ತಿವೆ. ಇದು ಜನಸಾಮಾನ್ಯರಲ್ಲೂ ಕೂಡ ಸಾಕಷ್ಟು ಅಸಮಾಧನವನ್ನು  ಮೂಡಿಸಿದೆ. ಚುನಾವಣೆಗೆ ಇನ್ನಾರು ತಿಂಗಳು ಬಾಕಿ ಇರೋವಾಗಲೇ ಬಳ್ಳಾರಿಯಲ್ಲಿ ವಾಕ್ಸಮರ ಆರಂಭವಾಗಿದೆ. ಹುಚ್ಚ, ಜೋಕರ್, ಪೆದ್ದ, ಭ್ರಷ್ಟಾಚಾರಿ, ಮನೆ ಮುರುಕ, ರಾಕ್ಷಸ, ಸರ್ಕಸ್ ಕಂಪನಿಯವರು ಈ ರೀತಿಯ ಪದ ಬಳಕೆ ಹೆಚ್ಚಾಗಿದೆ. ಇನ್ನೂ ಈ ಪದ ಬಳಕೆ ಮಾಡಿದವರು ಸಣ್ಣ ಪುಟ್ಟ ರಾಜಕಾರಣಿಗಳಲ್ಲ ಬದಲಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಎನ್ನುವುದೇ ದುರಂತವಾಗಿದೆ.

Latest Videos

undefined

ಸಿದ್ದರಾಮಯ್ಯರಿಂದ ಆರಂಭವಾದ ವಾಗ್ದಾಳಿ

ಭಾರತ್ ಜೋಡೋ ಯಾತ್ರೆ ಹಿನ್ನೆಲೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿನ ಭಾಷಣದಲ್ಲಿ ಮಾತಿನ ಭರಾಟೆಯೋ ಅಥವಾ ಬೇಕು ಅಂತಲೇ ಮಾತನಾಡಿದ್ರೋ ಗೊತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀರಾಮುಲು ಅವರನ್ನು ‌ಪೆದ್ದ ಎನ್ನುವ ಮೂಲಕ ವಾಗ್ದಾಳಿ‌ ಆರಂಭ ಮಾಡಿದ್ರು. ಈ ಊರಲ್ಲಿ ಶ್ರೀರಾಮುಲು ಎನ್ನುವ ಒಬ್ಬ ಸಚಿವ ಇದ್ದಾನೆ ಅವನಿಗೆ ಮಾತನಾಡಲು ಬರೋದಿಲ್ಲ ಸುಖಾಸುಮ್ಮನೇ ಏನೇನೋ ಮಾತನಾಡುತ್ತಾನೆ. ಅವನೊಬ್ಬ ಪೆದ್ದ  ಈ ಹಿಂದೆ ಬಳ್ಳಾರಿಯಲ್ಲಿನ ಗಣಿ ಲೂಟಿ ಮಾಡಿದ ರೆಡ್ಡಿ ಸಹೋದರರ ಜೊತೆ ಇರುತ್ತಾನೆ ಎನ್ನುವ ಮೂಲಕ ಶ್ರೀರಾಮುಲು ಪೆದ್ದ ಎನ್ನುವ ಪದ ಬಳಕೆ ಮಾಡೋ ಮೂಲಕ ಅವಮಾನ ಮಾಡಿದ್ರು.

ಸಿದ್ದರಾಮಯ್ಯ ಅನ್ನಭಾಗ್ಯ ಕೊಟ್ಟಿಲ್ಲ, ಚೀಲ ಮಾತ್ರ: ಸಚಿವ ಕಾರಜೋಳ

ಉತ್ತರ ಕೊಡೋ ಭರಾಟೆಯಲ್ಲಿ ಶ್ರೀರಾಮುಲು ವಾಗ್ದಾಳಿ

ಇನ್ನೂ ಸಿದ್ದರಾಮಯ್ಯನವರಿಗೆ ಉತ್ತರ ಕೋಡೋ ಭರಾಟೆಯಲ್ಲಿ  ಶ್ರೀರಾಮುಲು ಅವರು ಸಿದ್ದರಾಮಯ್ಯ ಬಗ್ಗೆ ಇರೋಬರೋ‌ ಎಲ್ಲಾ ಪದಬಳಕೆ ಮಾಡಿದ್ರು. ರಾಕ್ಷಸ, ಉತ್ತರಕುಮಾರ, ತಲೆ ಕೆಟ್ಟವರು, ಪಾಪದ ಕೊಡ ತುಂಬಿದೆ, ಶಕುನಿ, ಬೆಂಕಿ ಹಚ್ಚೋ ಕೆಲಸ ಮಾಡೋರು, ದುಷ್ಟ ರಾಜಕಾರಣಿ ಹೀಗೆ ಹತ್ತಾರು ಪದ ಬಳಕೆ ಮಾಡಿ ವಾಗ್ದಾಳಿ ಮಾಡಿದ್ರು. ಹೌದು, ಸಿದ್ದರಾಮಯ್ಯ ಸಮಾವೇಶವಾದ ಬಳಿಕ ಬಳ್ಳಾರಿಯಿಂದ ತೆರಳಿದ್ರು. ಆದರೇ, ಅವರು ತೆರಳಿದ ಬಳಿಕ ವೇದಿಕೆ ಮತ್ತು ಸಮಾವೇಶದ ಸ್ಥಳದಲ್ಲಿ ಕಸವನ್ನು ಬಳಿಯೋ ಮೂಲಕ ಇದೇ ನೋಡಿ ಕಾಂಗ್ರೆಸ್ ಸಂಸ್ಕೃತಿ ಎಂದು ಶ್ರೀರಾಮುಲು ವ್ಯಂಗ್ಯವಾಡಿದ್ರು. ಅಲ್ಲದೇ ಜೆಡಿಎಸ್ ಪಕ್ಷವನ್ನು ಬಳಸಿಕೊಂಡು ಮೇಲಕ್ಕೆ ಬಂದ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಮುಳುಗಿಸಿಬಿಟ್ರು ಇದೀಗ ಕಾಂಗ್ರೆಸ್ ಪಕ್ಷವನ್ನು ನಿರ್ಣಾಮ ಮಾಡಲು ಹೊರಟಿದ್ದಾರೆ. ಅವರೊಬ್ಬ ರಾಕ್ಷಸವೆಂದ್ರು. ಅಲ್ಲದೇ ಉತ್ತರ ಕುಮಾರನ ಪೌರುಷ ಒಲೆಯ ಮುಂದೆ ಎನ್ನುವಂತೆ ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಏನೇನೋ ಮಾತನಾಡುತ್ತಿದ್ದಾರೆ. ಅವರ ಪಾಪದ ಕೊಡ ತುಂಬಿದೆ ಇನ್ನಾರು ತಿಂಗಳಲ್ಲಿ ಜನರು ಅವರನ್ನು ಮನೆಗೆ ಕಳುಹಿಸುತ್ತಾರೆಂದ್ರು. ಅಲ್ಲದೇ ಡಿಕೆಶಿ ಅವರ  ಅಕ್ರಮ ದಾಖಲೆಗಳನ್ನು ಇಟ್ಟುಕೊಂಡು ಡಿ.ಕೆ. ಶಿವಕುಮಾರ್ ಅವರನ್ನು ಬ್ಲಾಕ್ ಮೇಲ್ ಮಾಡೋ ಮೂಲಕ ಅವರ ಸಿಎಂ ಕನಸನ್ನು ಛಿದ್ರಗೊಳಿಸುತ್ತಿದ್ದಾರೆಂದು ಆರೋಪಿಸಿದ್ರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಬದಲಾವಣೆ: ಪೂಜಾರಿ

ದಾಖಲೆ ಸಮೇತರಾಗಿ ಬಂದ ಉಗ್ರಪ್ಪ

ಇನ್ನೂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಮಾತನಾಡುತ್ತಿದ್ದಂತೆ ಇದಕ್ಕೆ ಉತ್ತರವಾಗಿ ಮಾಜಿ ಸಂಸದ ಉಗ್ರಪ್ಪ ಕೂಡ ಶ್ರೀರಾಮುಲು ಒಬ್ಬ ಭ್ರಷ್ಟಾಚಾರಿ ಎಂದು ದಾಖಲೆ ಸಮೇತ ಮಾತನಾಡಿದ್ರು. ಶ್ರೀರಾಮುಲು ಒಬ್ಬ ಭ್ರಷ್ಟಾಚಾರಿ ಅವರು ಅಕ್ರಮ ಜಮೀನು ವರ್ಗಾವಣೆ ಪ್ರಕರಣದ ಎ-6 ಆರೋಪಿಯಾಗಿದ್ದಾರೆ. ಅವರನ್ನು ಕೂಡಲೇ ಬಂಧಿಸಿಬೇಕೆಂದ್ರು.

ಇದರ ಜೊತೆ ಶಾಸಕ ನಾಗೇಂದ್ರ ಕೂಡ ಮಾತನಾಡಿ ಸಿದ್ದರಾಮಯ್ಯ ಬಗ್ಗೆ ಮಾತನಾಡೋ ಶ್ರೀರಾಮುಲು ನಿಜಕ್ಕೂ ಪೆದ್ದ ಮತ್ತು ಹುಚ್ಚರೇ ಎಂದ್ರು. ಅಧಿಕಾರದ ಮದದಲ್ಲಿ ಶ್ರೀರಾಮುಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ನಿಜಕ್ಕು ಅವರು ಹುಚ್ಚರಿರಬಹುದು ಎಂದ್ರು.  ಹೀಗೆ ‌ಮತ್ತೊಬ್ಬರಿಗೆ ಮಾದರಿ ಯಾಗಬೇಕಾದ ನಾಯಕರು ಈ‌ ಮಟ್ಟದ ಕಿಳು‌ಪದ ಬಳಸುತ್ತಿರುವುದು ಮಾತ್ರ ನಾಚೀಕೆಬೇಡಿನ ಸಂಗತಿಯಾಗಿದೆ.  
 

click me!