ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಲು ಕೈ ಪಡೆ ಸಜ್ಜು!

By Santosh NaikFirst Published Sep 29, 2022, 10:33 AM IST
Highlights

ಪೇಸಿಎಂ ಅಭಿಯಾನದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿರುವ ಕಾಂಗ್ರೆಸ್ ಪಕ್ಷ, ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ಇದೇ ರೀತಿಯ ಇನ್ನೊಂದು ಯೋಜನೆ ರೂಪಿಸಿಕೊಂಡಿದೆ. ಸರ್ಕಾರಕ್ಕೆ ಮತ್ತೊಂದು ಮುಜುಗರ ತಂದಿಡಲು ಕೈ ಪಡೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
 

ಬೆಂಗಳೂರು (ಸೆ. 29): ಭಾರತ್‌ ಜೋಡೋ ಯಾತ್ರೆ ಕರ್ನಾಟಕಕ್ಕೆ ಆಗಮಿಸಲು ಸಜ್ಜಾಗಿದೆ. ರಾಹುಲ್‌ ಗಾಂಧಿ ನೇತೃತ್ವದ ಯಾತ್ರೆ ಕರ್ನಾಟಕ ಪ್ರವೇಶಿಸುವ ಸಮಯದಲ್ಲಿ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಇನ್ನೊಂದು ರೀತಿಯಲ್ಲಿ ಮುಜುಗರ ಉಂಟು ಮಾಡಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿಯೇ ಇದರ ಪ್ರಯೋಗ ಮಾಡಲು ಕೈ ಪಡೆ ಸಜ್ಜಾಗಿದೆ. ಕೋವಿಡ್‌ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್‌ ದುರಂತದಿಂದ 36 ಜನ ಸಾವು ಕಂಡಿದ್ದರು. ಈ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರ ಜೊತೆ ರಾಹುಲ್‌ ಗಾಂಧಿ ಸಂವಾದ ನಡೆಸಲಿದ್ದಾರೆ. ಸೆಪ್ಟೆಂಬರ್‌ 30 ರಂದು ಈ ಸಂವಾದ ಕಾರ್ಯಕ್ರಮ ನಡೆಯಲಿದೆ. ಆ ಮೂಲಕ ಯಾತ್ರೆ ಕರ್ನಾಟಕಕ್ಕೆ ಭರ್ಜರಿಯಾಗಿ ಪ್ರವೇಶ ಮಾಡುವ ಯೋಜನೆ ರೂಪಿಸಲಾಗುದೆ. ಪಾದಯಾತ್ರೆಯ ಬಿಡುವಿನ ವೇಳೆ ಈ ಸಂವಾದ ಕಾರ್ಯಕ್ರಮ ನಡೆಯಲಿದೆ ಎನ್ನುವುದು ಸದ್ಯದ ಮಾಹಿತಿ.

ಸಂವಾದ ನಡೆಸುವುದರ ಲೆಕ್ಕಾಚಾರವೇನು...?: ಸಂವಾದ ನಡೆಸುವುದರ ಹಿಂದೆ ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರವೂ ಇದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಡಿದ ಭ್ರಷ್ಟಾಚಾರವನ್ನು ಈ ವೇಳೆ ಪ್ರಸ್ತಾಪ ಮಾಡಲಿದ್ದಾರೆ. ಆಕ್ಸಿಜನ್ (Chamarajanagar Oxygen Shortage Death) ಕೊರತೆಯಿಂದ ಮೃತಪಟ್ಟವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಈ ಸಾವುಗಳು ಆಗಿವೆ ಎನ್ನುವುದನ್ನು ಜನರಿಗೆ ಮನದಟ್ಟು (Rahul Gandhi) ಮಾಡಲಿದ್ದಾರೆ. ಅದರೊಂದಿಗೆ ಕುಟುಂಬದ ಜೊತೆ ಕಾಂಗ್ರೆಸ್ (Congress) ನಿಂತಿದೆ ಎಂಬ ಸಂದೇಶವನ್ನು ತಲುಪಿಸಲು ಪ್ರಯತ್ನಿಸಲಿದ್ದಾರೆ.

ಭಾರತ್‌ ಜೋಡೋ ಯಾತ್ರೆ ವೇಳೆ ಡಿಕೆಶಿಗೆ ಸಿಬಿಐ ಶಾಕ್‌..!

ಈ ದುರಂತದಲ್ಲಿ ಮೃತಪಟ್ಟ ಸದಸ್ಯರ ಕುಟುಂಬದವರಿಗೆ ಕಾಂಗ್ರೆಸ್‌ ಪಕ್ಷ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದೆ. ಆದರೆ, ಸರ್ಕಾರ ಮಾತ್ರ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪ ಮಾಡಲಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ಬಿಜೆಪಿ (BJP) ಮುಜುಗರ ತರಲು ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆಸಲಿದೆ.

Chamarajanagar: ಐಕ್ಯತೆ ಮೂಡಿಸಲು ಭಾರತ್‌ ಜೋಡೋ ಪಾದಯಾತ್ರೆ: ಆರ್‌.ಧ್ರುವನಾರಾಯಣ

ಆದಿವಾಸಿಗಳ ಜೊತೆಗೂ ಸಂವಾದ: ಆಕ್ಸಿಜನ್‌ ದುರಂತದಲ್ಲಿ ಮೃತಪಟ್ಟ ಕುಟುಂಬದವರೊಂದಿಗೆ ಸಂವಾದ ನಡೆಸುವ ಮುನ್ನ ಆದಿವಾಸಿಗಳ ಜೊತೆಗೂ ರಾಹುಲ್‌ ಗಾಂಧಿ ಸಂವಾದ ಮಾಡಲಿದ್ದಾರೆ. ಸೋಲಿಗ ಹಾಗೂ ಆದಿವಾಸಿ ಬುಡಕಟ್ಟು ಜನಾಂಗದ ಜೊತೆ ರಾಗಾ ಸಂವಾದ ನಡೆಸಲಿದ್ದಾರೆ. ಈ ಸಂವಾದಗಳ ಬಳಿಕ ಗುಂಡ್ಲುಪೇಟೆಯಿಂದ ಬೇಗೂರಿಗೆ ಯಾತ್ರೆ ಪ್ರಾರಂಭವಾಗಲಿದೆ.

click me!