ಸಂಸದರ ನಿಧಿ ಬಳಕೆ: ಪ್ರತಾಪ್‌ ಸಿಂಹ ಫಸ್ಟ್‌, ಸುಮಲತಾ ದ್ವಿತೀಯ!

By Kannadaprabha NewsFirst Published May 27, 2020, 8:09 AM IST
Highlights

ಸಂಸದರ ನಿಧಿ ಬಳಕೆ: ಪ್ರತಾಪ್‌| ಸಿಂಹ ಫಸ್ಟ್‌, ಸುಮಲತಾ ದ್ವಿತೀಯ| ಪ್ರತಾಪ್‌ ಸಿಂಹ ಶೇ.49ರಷ್ಟು, ಸುಮಲತಾರಿಂದ ಶೇ.26ರಷ್ಟು ಹಣ ಬಳಕೆ

ಅಂಶಿ ಪ್ರಸನ್ನಕುಮಾರ್‌

ಮೈಸೂರು(ಮೇ.27): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಗೆ ಅಧಿಕಾರ ವಹಿಸಿ ಮೇ 30ಕ್ಕೆ ಒಂದು ವರ್ಷ ತುಂಬುವ ಈ ಸಂದರ್ಭದಲ್ಲಿ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಬಳಕೆಯ ವಿಚಾರದಲ್ಲಿ ರಾಜ್ಯದ 28 ಸಂಸದರ ಪೈಕಿ ಮೈಸೂರು-ಕೊಡಗು ಕ್ಷೇತ್ರದ ಪ್ರತಾಪ್‌ ಸಿಂಹ ಮುಂಚೂಣಿಯಲ್ಲಿ ನಿಂತಿದ್ದಾರೆ. ನಂತರದ ಸ್ಥಾನದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಇದ್ದಾರೆ.

"

ಇವರಿಬ್ಬರಿಗೂ ತಲಾ 5 ಕೋಟಿ ಬಿಡುಗಡೆಯಾಗಿದ್ದು ಉಳಿದವರಿಗೆ ತಲಾ .2.5 ಕೋಟಿ ಬಿಡುಗಡೆಯಾಗಿದೆ. ಮೊದಲ ಕಂತಲ್ಲಿ ಬಿಡುಗಡೆಯಾದ ಹಣಕ್ಕೆ ಬಳಕೆ ಪ್ರಮಾಣಪತ್ರ(ಯುಸಿ) ನೀಡಿದ ನಂತರ 2ನೇ ಕಂತು ಬಿಡುಗಡೆ ಮಾಡಲಾಗಿಗುತ್ತದೆ. ಪ್ರತಾಪ್‌ ಸಿಂಹ ಒಟ್ಟಾರೆ ತಮಗೆ ಬಿಡುಗಡೆಯಾದ ಹಣದಲ್ಲಿ ಶೇ.49ರಷ್ಟು, ಸುಮಲತಾ ಶೇ.26ರಷ್ಟುಬಳಕೆ ಮಾಡಿದ್ದಾರೆ. ಸುಮಲತಾ ಬಿಡುಗಡೆಯಾಗಿರುವ .5 ಕೋಟಿ ಅನುದಾನದಲ್ಲಿ 4.90 ಕೋಟಿ ಹಂಚಿಕೆ ಮಾಡಿದ್ದಾರೆ. ಹಂಚಿಕೆಯಲ್ಲಿ ಇವರು ಪ್ರತಾಪ್‌ಸಿಂಹರಿಗಿಂತ ಮುಂದಿದ್ದಾರೆ. ಆದರೆ ವೆಚ್ಚದಲ್ಲಿ ಹಿಂದುಳಿದಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ 5 ಟಾಸ್ಕ್‌ ನೀಡಿದ ಮೋದಿ!

ಮೊದಲ ಕಂತು.2.50 ಕೋಟಿ ಮಾತ್ರ ಬಿಡುಗಡೆಯಾಗಿರುವವರ ಪೈಕಿ ಹಾಸನದ ಪ್ರಜ್ವಲ್‌ ರೇವಣ್ಣ 2.45 ಕೋಟಿ ಹಂಚಿಕೆ ಹಾಗೂ .2.07 ಕೋಟಿ ವೆಚ್ಚ ಮಾಡಿ ಮೊದಲ ಸ್ಥಾನದಲ್ಲಿದ್ದಾರೆ. 1.88 ಕೋಟಿ ವೆಚ್ಚ ಮಾಡಿರುವ ದಕ್ಷಿಣ ಕನ್ನಡದ ನಳಿನ್‌ ಕುಮಾರ್‌ ಕಟೀಲ್‌ ದ್ವಿತೀಯ ಸ್ಥಾನದಲ್ಲಿದ್ದಾರೆ. ಕೇಂದ್ರ ಸಚಿವರೂ ಆಗಿರುವ ಧಾರವಾಡ ಕ್ಷೇತ್ರದ ಪ್ರಹ್ಲಾದ ಜೋಶಿ ಬಡ್ಡಿಸಹಿತ ತಮ್ಮ ಅನುದಾನದಲ್ಲಿದ್ದ .2.68 ಕೋಟಿ ಹಂಚಿಕೆ ಮಾಡಿದ್ದು, ಶೇ.18 ರಷ್ಟುಮಾತ್ರ ಬಳಕೆಯಾಗಿದೆ. ಉಡುಪಿ-ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ .2.50 ಕೋಟಿ ಪೈಕಿ .2.32 ಕೋಟಿ ಅನುದಾನ ಹಂಚಿಕೆ ಮಾಡಿದ್ದರೂ ವೆಚ್ಚವಾಗಿರುವುದು 5 ಲಕ್ಷ ಮಾತ್ರ. ಬೆಂಗಳೂರು ಗ್ರಾಮಾಂತರದ ಡಿ.ಕೆ. ಸುರೇಶ್‌ 5 ಲಕ್ಷ ಹಂಚಿಕೆ ಮಾಡಿದ್ದಾರೆ. ಉಳಿದೆಲ್ಲಾ ಸಂಸದರು ತಮ್ಮ ಮೊದಲ ಕಂತಿನ ಅನುದಾನವನ್ನು ಹಂಚಿಕೆ ಮಾಡಬೇಕಾಗಿದೆ.

ಸಂಸದರ ವೇತನ ಕಟ್: ಕ್ಯಾಬಿನೆಟ್ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್!

ಒಟ್ಟಾರೆ ರಾಜ್ಯದ 28 ಕ್ಷೇತ್ರಗಳಿಗೆ ತಲಾ5 ಕೋಟಿಗಳಂತೆ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ 140 ಕೋಟಿ ಬಿಡುಗಡೆಯಾಗಬೇಕು. ಈವರೆಗೆ .75 ಕೋಟಿ ಮಾತ್ರ ಬಿಡುಗಡೆಯಾಗಿದೆ. ಈ ಪೈಕಿ ಸಂಸದರು 23.53 ಕೋಟಿ ಹಂಚಿಕೆ ಮಾಡಿದ್ದು, 12.78 ಕೋಟಿ ಮಂಜೂರಾಗಿದೆ. 8.35 ಕೋಟಿ ವೆಚ್ಚವಾಗಿದೆ. ಬಳಕೆ ಪ್ರಮಾಣ ಶೇ.11.13 ರಷ್ಟುಮಾತ್ರ.

click me!