ಕೊರೋನಾ ಬಿಕ್ಕಟ್ಟಿನ ಮಧ್ಯೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮತ್ತೊಂದೆಡೆ ಬಿಜೆಪಿಯೇ ಆಪರೇಷನ್ ಕಮಲ ಮಾಡಿದೆ.
ಬೆಂಗಳೂರು, (ಮೇ.31): ಕೊರೋನಾ ಭೀತಿ ನಡುವೆಯೂ ರಾಜ್ಯ ರಾಜಕೀಯ ಗರಿಗೆದರಿದೆ. ಅತ್ತ ಬಿಎಸ್‌ವೈ ವಿರುದ್ಧ ಅತೃಪ್ತರು ಬಂಡಾಯ ಬಾವುಟ ಹಾರಿಸಿದ್ರೆ, ಮತ್ತೊಂದೆಡೆ ಬಿಜೆಪಿ 'ಆಪರೇಷನ್ ಕಮಲ' ಮತ್ತೆ ಚುರುಕಾಗಿದೆ.
ಕಾಂಗ್ರೆಸ್ ಮುಖಂಡ ಮತ್ತು ಟಿ ದಾಸರಹಳ್ಳಿ ಕ್ಷೇತ್ರದ ಬಿಬಿಎಂಪಿ ಸದಸ್ಯೆಯ ಪತಿ ತಿಮ್ಮನಂಜಯ್ಯ ಬಿಜೆಪಿಗೆ ಸೇರಿದರು. ಇಂದು (ಭಾನುವಾರ) ಟಿ ದಾಸರಹಳ್ಳಿಯ ಬಗಲಕುಂಟೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಬಿಜೆಪಿ ಶಾಸಕ ಮುನಿರಾಜು, ಕ್ಷೇತ್ರದ ಬಿಜೆಪಿ ನಾಯಕ ಲೋಕೇಶ್, ನರಸಿಂಹಮೂರ್ತಿ, ಸಿ ಎಂ ನಾಗರಾಜು, ಉಮಾದೇವಿ ಮುಂತಾದ ನಾಯಕರು ಉಪಸ್ಥಿತಿಯಲ್ಲಿ ತಿಮ್ಮನಂಜಯ್ಯ ಬಿಜೆಪಿಗೆ ಸೇರ್ಪಡೆಯಾದರು.
BSY ಬದಲಾವಣೆಗೆ ರಹಸ್ಯ ಸಭೆ: ಇಲ್ಲಿದೆ ಮಹತ್ತರ ಸಾಕ್ಷಿ
ತಿಮ್ಮನಂಜಯ್ಯ ಅವರ ಪತ್ನಿ ಲಲಿತಾ ಸಧ್ಯ ಕಾರ್ಪೋರೇಟರ್ ಆಗಿದ್ದಾರೆ. ಈಗ ತಿಮ್ಮನಂಜಯ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಪೋರೇಟರ್ ಲಲಿತಾ ಸಹ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರೂ ಅಚ್ಚರಿ ಪಡಬೇಕಿಲ್ಲ. ಒಟ್ಟಿನಲ್ಲಿ ಇದೀಗ ತಿಮ್ಮನಂಜಯ್ಯ ಬಿಜೆಪಿಗೆ ಸೇರ್ಪಡೆಯಾಗಿರುವುದು ಕಾಂಗ್ರೆಸ್ ಆಘಾತವನ್ನುಂಟು ಮಾಡಿದಂತೂ ಸತ್ಯ.
ಮತ್ತೊಂದೆಡೆ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಕೆಲ ಅತೃಪ್ತ ಶಾಸಕರು ಬಿಎಸ್‌ವೈ ವಿರುದ್ಧ ಅಸಮಾಧಾನಗೊಂಡಿದ್ದು, ಗುಪ್ತ್-ಗುಪ್ತ್ ಸಭೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹದು.