ನಂಗೆ ರಾಜಕೀಯ ಆಸಕ್ತಿಯಿಲ್ಲ; ಈ ಸೋಲನ್ನು ಸಂತೋಷದಿಂದ ಸ್ವೀಕರಿಸ್ತೇನೆ: ಡಿ.ಕೆ. ಸುರೇಶ್

By Sathish Kumar KH  |  First Published Jun 10, 2024, 1:08 PM IST

ನಾನು ರಾಜಕಾರಣಕ್ಕೆ ಬರಬೇಕು ಅಂತ ಬಂದವನಲ್ಲ. ರಾಜಕೀಯ ಆಶಕ್ತಿಯೂ ನನಗಿರಲಿಲ್ಲ. ಈ ಸೋಲನ್ನ ಸಂತೋಷ ದಿಂದ ಒಪ್ಪಿದ್ದೇನೆ. ಎಂದು ಪರಾಜಿತ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದ್ದಾರೆ.


ರಾಮನಗರ (ಜೂ.10): ನಾನು ರಾಜಕಾರಣಕ್ಕೆ ಬರಬೇಕು ಅಂತ ಬಂದವನಲ್ಲ. ರಾಜಕೀಯ ಆಶಕ್ತಿಯೂ ನನಗಿರಲಿಲ್ಲ. ರಾಜ್ಯದ ನಾಯಕರು ನನ್ನ ಮೇಲೆ ಹಾಗೂ ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ಹಾಕಿ ನಿಲ್ಲಿಸಿದ್ದರು. ಈ ಸೋಲನ್ನ ಸಂತೋಷ ದಿಂದ ಒಪ್ಪಿದ್ದೇನೆ. ಜನರ ತೀರ್ಪನ್ನ ಗೌರವಿಸುತ್ತೇನೆ ಎಂದು ಬೆಂಗಳೂರು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಸೋಲಿನ ಬಳಿಕ ಕನಕಪುರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 10ವರ್ಷ 8ತಿಂಗಳ ಕಾಲ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಎಲ್ಲರೂ ಸಹಕಾರ, ಪ್ರೋತ್ಸಾಹ ಕೊಟ್ಟಿದ್ದಾರೆ. ನಾನು ರಾಜಕಾರಣಕ್ಕೆ ಬರಬೇಕು ಅಂತ ಬಂದವನಲ್ಲ. ರಾಜಕೀಯ ಆಸಕ್ತಿಯೂ ನನಗಿರಲಿಲ್ಲ. ಆದರೆ, ಉಪಚುನಾವಣೆಯಲ್ಲಿ ರಾಜ್ಯದ ನಾಯಕರು ನನ್ನ ಮೇಲೆ ಹಾಗೂ ನನ್ನ ಸಹೋದರ ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ಹಾಕಿ ನಿಲ್ಲಿಸಿದ್ದರು. ಆಗ ಕಾಂಗ್ರೆಸ್‌ನ ಎಲ್ಲಾ ನಾಯಕರು, ಮುಖಂಡರು ಚುನಾವಣೆ ಮಾಡಿ ಗೆಲ್ಲಿಸಿದ್ದರು. ಮೂರು ಚುನಾವಣೆಯಲ್ಲಿ ನಾನು   ಈ ‌ಕ್ಷೇತ್ರದಲ್ಲಿ ಸೇವೆ ಮಾಡಿದ್ದೇನೆ. ಆದರೆ, ಈ ಚುನಾವಣೆಯಲ್ಲಿ ನಾನು ಸೋತಿದ್ದೇನೆ ಎಂದರು.

Tap to resize

Latest Videos

undefined

ಶ್ರೀರಾಮನ ಹೆಸರಲ್ಲಿ ಲೋಕಸಭೆ ಚುನಾವಣೆ ಎದುರಿಸಿದ ಬಿಜೆಪಿಗೆ ರಾಮನಿಂದಲೇ ಸಿಗಲಿಲ್ಲ ಶ್ರೀರಕ್ಷೆ!

ನಾನು ಸಂಸದನಾದಾಗ ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನ ಜನರ ಮನೆಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಅದರಲ್ಲೂ ವಿಶೇಷವಾಗಿ ರಾಮನಗರ ಅಭಿವೃದ್ಧಿಗಾಗಿ ದುಡಿದಿದ್ದೇನೆ. ಆ ಆತ್ಮ ತೃಪ್ತಿ ನನಗೆ ಇದೆ. ನಾನು ಮಾಡಿದ ಕೆಲಸ ಕಾರ್ಯಗಳನ್ನ ಜನರ ಮುಂದೆ ಇಟ್ಟು ಈ ಬಾರಿ ಚುನಾವಣೆಗೆ ಹೋದೆ. ಕನ್ನಡಿಗರ ಪರವಾಗಿ ಗಟ್ಟಿಧ್ವನಿ ಎತ್ತಿ ಟೀಕೆಗೂ ಒಳಗಾದೆ. ಕರ್ನಾಟಕದ ತೆರಿಗೆ ಹಣದ ವಿಚಾರವಾಗಿ ಹೋರಾಟ ಮಾಡಿದೆ. ನಾನು ಮತ ಕೇಳುವ ಸಂದರ್ಭದಲ್ಲಿ ನನ್ನ ಕೆಲಸಕ್ಕೆ ಕೂಲಿ ಕೊಡಿ ಅಂತ ಚುನಾವಣೆಗೆ ಬಂದೆ. ಆದರೆ, ಜನ ಅದನ್ನ ತಿರಸ್ಕಾರ ಮಾಡಿದ್ದಾರೆ ಎಂದು ಹೇಳುತ್ತಾ ಭಾವುಕರಾದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿನ ಈ ಸೋಲನ್ನ ಸಂತೋಷದಿಂದ ಒಪ್ಪಿದ್ದೇನೆ. ಜನರ ತೀರ್ಪನ್ನ ಗೌರವಿಸುತ್ತೇನೆ. ನಾನೊಬ್ಬ ಸಮಾನ್ಯ ಪ್ರಜೆಯಾಗಿ, ಕಾಂಗ್ರೆಸ್ ಕಾರ್ಯಕರ್ತನಾಗಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಆದರೆ, ಈಗ ಸೋತಿದ್ದೀನಿ ಅಂತಾ ಸುಮ್ನೆ ಕೂರೋದಿಲ್ಲ. ನಿಮ್ಮೆಲ್ಲರಿಗೂ ಒಂದು ಕೊರಗಿತ್ತು. ನಾನು ನಿಮ್ಮ ಮನೆಗೆ ಬರೊಲ್ಲ ಎಂದು ಹೇಳುತ್ತಿದ್ರಿ. ಇನ್ಮುಂದೆ ನಿಮ್ಮ ಮನೆಗೂ ಬರ್ತಿನಿ, ನಿಮ್ಮ ಬೀದಿಗೂ ಬರ್ತಿನಿ. ಎಲ್ಲಾ ಕೆಲಸ ಕಾರ್ಯಗಳನ್ನು ನಿಮ್ಮ ಜೊತೇಲಿ ಇದ್ದು ಮಾಡ್ತೀನಿ ಎಂದು ಹೇಳಿದರು.

ಕೇಂದ್ರ ಸಚಿವರಾದ ವಿ.ಸೋಮಣ್ಣ; ನಮ್ಮಪ್ಪಂಗೆ ಇದೇ ಖಾತೆ ಕೊಡಬೇಕೆಂದ ಪುತ್ರ ಅರುಣ್ ಸೋಮಣ್ಣ

ರಾಜಕೀಯ ಜೀವನದಲ್ಲಿ ನಾನು ಬದುಕಬೇಕು, ಬಾಳಬೇಕು, ನನ್ನ ಕೆಲಸಾನೂ ನೀವು ನೋಡಬೇಕು. ಅದೆಲ್ಲದರ ಜೊತೆ ನಿಮ್ಮ ಕೆಲಸಾನೂ ಮಾಡ್ತೀನಿ. ಯಾರು ಯಾರು ಏನೆಲ್ಲಾ ಮಾಡಿದ್ದಾರೆ ಅದೆಲ್ಲವನ್ನೂ ದೇವರು ನೋಡ್ಕೊತಾನೆ ಎಂದು ತಮಗೆ ಮತ ಹಾಕಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಭಾವುಕರಾದರು. ಈ ಕ್ಷಣದಲ್ಲಿ ಸ್ಥಳೀಯ ಶಾಸಕರು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ತಾವೆಲ್ಲರೂ ನಿಮ್ಮ ಜೊತೆಗಿರುವುದಾಗಿ ಹೇಳಿ ಸಂತೈಸಿದರು.

click me!