ಭಾನುವಾರವಷ್ಟೇ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಮೊದಲ ಸಭೆ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.
ನವದೆಹಲಿ: ಭಾನುವಾರವಷ್ಟೇ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಮೊದಲ ಸಭೆ ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ಮೊದಲ ಸಂಪುಟ ಸಭೆಯಲ್ಲಿ 100 ದಿನಗಳ ಕಾರ್ಯಸೂಚಿಯನ್ನು ಪ್ರಸ್ತಾವಿಸಿ ಅಂಗೀಕರಿಸುವ ಸಾಧ್ಯತೆಯಿದೆ. ಅಲ್ಲದೆ ಇದೇ ವೇಳೆ ಹೊಸ ಸಂಪುಟ ಸದಸ್ಯರಿಗೆ ತಮ್ಮ ಮೈ ಚಳಿ ಬಿಟ್ಟು ತಕ್ಷಣದಿಂದ ಕೆಲಸ ಮಾಡುವಂತೆ ಸೂಚಿಸಬಹುದು ಎನ್ನಲಾಗಿದೆ. ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಜೆ.ಪಿ ನಡ್ಡಾ ಹೊಸ ಸಂಪುಟ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದಾರೆ.
ಪ್ರಮಾಣವಚನಕ್ಕೆ ಮೊದಲು ಸಚಿವರಿಗೆ ಪ್ರಧಾನಿ ಅಭಿವೃದ್ಧಿಯ ಪಾಠ
ನವದೆಹಲಿ: ಪ್ರಮಾಣವಚನ ಸ್ವೀಕಾರಕ್ಕೆ ಕೆಲವು ತಾಸುಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶಪಥಗ್ರಹಣ ಮಾಡಲಿರುವ ಎಲ್ಲ ಸಚಿವರನ್ನೂ ತಮ್ಮ ನಿವಾಸಕ್ಕೆ ಕರೆಸಿಕೊಂಡು ಕಿವಿಮಾತುಗಳನ್ನು ಹೇಳಿದ್ದಾರೆ. ಮಂತ್ರಿಮಂಡಲ ಸೇರ್ಪಡೆಗೆ ಆಯ್ಕೆಯಾದ ಸಂಸದರನ್ನು ಚಹಾ ಸೇವಿಸಲು ತಮ್ಮ ಸ್ವೀಕಾರಕ್ಕೆ ನರೇಂದ್ರ ಮೋದಿ ಆಹ್ವಾನಿಸಿದರು. 2014ರಿಂದಲೂ ಅವರು ದೆಹಲಿಯಲ್ಲಿ ಈ ಸಂಪ್ರದಾಯ ಪಾಲಿಸುತ್ತಿದ್ದಾರೆ.
ಕೇಂದ್ರದಲ್ಲಿ 5 ಅಲ್ಪಸಂಖ್ಯಾತರಿಗೆ ಸ್ಥಾನ, ಮುಸ್ಲಿಮರಿಗೆ ಶೂನ್ಯ: ಯುಪಿ, ಬಿಹಾರಕ್ಕೆ ಸಂಪುಟ ಬಂಪರ್
ಈಸಭೆಯಲ್ಲೇ ಬಿಜೆಪಿ, ಎನ್‌ಡಿಎ ಸಂಸದರಿಗೆ ಶಿಕ್ಷಕರ ರೀತಿ ಪಾಠ ಮಾಡಿದರು. ತಮ್ಮ ಸಚಿವಾಲಯ ವ್ಯಾಪ್ತಿಯಲ್ಲಿ 100 ದಿನಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಅದು ವೇಗವಾಗಿ ಜಾರಿಯಾಗುವಂತೆ ನೋಡಿಕೊಳ್ಳಿ. ತನ್ಮೂಲಕ ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ವಿಕಸಿತ ಭಾರತದ ಗುರಿ ಸಾಕಾರವಾಗಲು ನೆರವಾಗಿ ಎಂದು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ. ಸರ್ಕಾರದ ಮೇಲೆ ಜನರ ವಿಶ್ವಾಸ ಇರುವಂತೆ ಮಾಡಲು ಪರಿಶ್ರಮದಿಂದ ದುಡಿಯಿರಿ. ಬಾಕಿ ಇರುವ ಯೋಜನೆಗಳನ್ನು ವಿಳಂಬ ಮಾಡದೆ ತ್ವರಿತವಾಗಿ ಜಾರಿಗೊಳಿಸಿ ಎಂದರು. ಅಲ್ಲದೆ, ತಮ್ಮ ಮೇಲೆ ಮಹತ್ತರ ಜವಾಬ್ದಾರಿ ವಹಿಸಲಾಗುತ್ತಿದ್ದು, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು ಎಂದು ಮೂಲಗಳು ವಿವರಿಸಿವೆ.
ಮೋದಿ ಪ್ರಮಾಣವಚನ ಸಮಾರಂಭಕ್ಕೆ ಖರ್ಗೆ ಹಾಜರು, ಉಳಿದೆಲ್ಲಾ ವಿಪಕ್ಷ ನಾಯಕರು ಗೈರು