ಭಾನುವಾರ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರದಲ್ಲಿ ಮೋದಿಯೂ ಸೇರಿದಂತೆ ಒಟ್ಟು ಏಳು ಮಂದಿ ಮಾಜಿ ಮುಖ್ಯಮಂತ್ರಿಗಳಿದ್ದಾರೆ.
ನವದೆಹಲಿ: ಭಾನುವಾರ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರದಲ್ಲಿ ಮೋದಿಯೂ ಸೇರಿದಂತೆ ಒಟ್ಟು ಏಳು ಮಂದಿ ಮಾಜಿ ಮುಖ್ಯಮಂತ್ರಿಗಳಿದ್ದಾರೆ. ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಉತ್ತರ ಪ್ರದೇಶದ ಮಾಜಿ ಸಿಎಂ ರಾಜನಾಥ್ ಸಿಂಗ್, ಹರ್ಯಾಣ ಮಾಜಿ ಸಿಎಂ ಮನೋಹರ್‌ಲ್ ಖಟ್ಟರ್, ಅಸ್ಸಾಂ ಮಾಜಿ ಸಿಎಂ ಸರ್ಬಾನಂದ್ ಸೋನೋವಾಲ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಹಾರ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಈ ಪೈಕಿ ಐವರು ಬಿಜೆಪಿ ಪಕ್ಷದವರಾಗಿದ್ದರೆ, ಉಳಿದಂತೆ ಎನ್‌ಡಿಎ ಮಿತ್ರಕೂಟದ ಪಕ್ಷಗಳಾದ ಜೆಡಿಎಸ್ (ಹೆಚ್ .ಡಿ.ಕುಮಾರಸ್ವಾಮಿ) ಹಿಂದುಸ್ತಾನ್ ಅವಾಮ್ ಮೋರ್ಚಾ (ಮಾಂಜಿ) ಒಬ್ಬರಿದ್ದಾರೆ.
ಮೋದಿ ಸಂಪುಟದಲ್ಲಿ ಜೀತನ್ ಹಿರಿಯ ಸಚಿವ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಬಿಹಾರದ ಮಾಜಿ ಸಿಎಂ ಜೀತನ್ ರಾಮ್ ಮಾಂಝಿ ಅವರು ಹಿರಿಯ ಸಚಿವರಾಗಿದ್ದಾರೆ. 79 ವರ್ಷದ ಜೀತನ್ ಗಯಾ ಕ್ಷೇತ್ರದಿಂದ ಹಿಂದುಸ್ಥಾನ್ ಅವಾಂ ಮೋರ್ಚಾದಿಂದ (ಎಚ್.ಎಎಂ) ಗೆದ್ದಿದ್ದಾರೆ. ಇವರು ಬಿಹಾರದ 23ನೇ ಮುಖ್ಯಮಂತ್ರಿಯಾಗಿದ್ದರು.
ಮೋದಿ ಪ್ರಮಾಣವಚನ ಸಮಾರಂಭಕ್ಕೆ ಖರ್ಗೆ ಹಾಜರು, ಉಳಿದೆಲ್ಲಾ ವಿಪಕ್ಷ ನಾಯಕರು ಗೈರು
ಮೋಹನ್ ನಾಯ್ಡು ಅತಿ ಕಿರಿಯ ಸಚಿವ
ಹಾಗೆಯೇ ಆಂಧ್ರಪ್ರದೇಶ ಶ್ರೀಕಾಕುಲಂ ಕ್ಷೇತ್ರದಿಂದ ಮೂರನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಟಿಡಿಪಿಯ 36 ವರ್ಷದ ರಾಮ ಮೋಹನ್ ಪ್ರಸಕ್ತ ಕೇಂದ್ರ ಸಚಿವ ಸಂಪುಟದ ಅತ್ಯಂತ ಕಿರಿಯ ಸಚಿವರಾಗಿದ್ದಾರೆ.
ದಕ್ಷಿಣ ಭಾರತದ 17 ಸಂಸದರಿಗೆ ಸಂಪುಟದಲ್ಲಿ ಸ್ಥಾನ
ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ತಮ್ಮ ಸಂಪುಟ ಸಭೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಒಟ್ಟು 13 ಸಂಸದರಿಗೂ ಅವಕಾಶ ನೀಡಿದ್ದಾರೆ. ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ತಮ್ಮ ಮಿತ್ರ ಪಕ್ಷದ ಸಂಸದರಿಗೆ ಸಂಪುಟ ಸಭೆಯಲ್ಲಿ ಸಚಿವರಾಗಿ ಆಯ್ಕೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕದ ಮಾಜಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಹಾಗೂ ಜೆಡಿಎಸ್‌ನಿಂದ ಕರ್ನಾಟಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
ಕೇಂದ್ರದಲ್ಲಿ 5 ಅಲ್ಪಸಂಖ್ಯಾತರಿಗೆ ಸ್ಥಾನ, ಮುಸ್ಲಿಮರಿಗೆ ಶೂನ್ಯ: ಯುಪಿ, ಬಿಹಾರಕ್ಕೆ ಸಂಪುಟ ಬಂಪರ್
ಆಂಧ್ರದಲ್ಲಿ ಎನ್‌ಡಿಎ ಮಿತ್ರಪಕ್ಷವಾದ ಟಿಡಿಪಿಯ ಗುಂಟೂರು ಕ್ಷೇತ್ರದ ಸಂಸದ ಡಾ. ಚಂದ್ರಶೇಖರ್ ಪೆಮ್ಮಸಾನಿ, ಶ್ರೀಕಾಕುಳಂ ಕ್ಷೇತ್ರದ ಕಿಂಜರಾಪು ರಾಮ್ ಮೋಹನ್ ನಾಯ್ಡು ಹಾಗೂ ಬಿಜೆಪಿಯಿಂದ ಶ್ರೀನಿವಾಸ್ ವರ್ಮಾ ಪ್ರಮಾಣವಚನ ಸ್ವೀಕರಿಸಿದರು. ಜನಸೇನಾ ಪಕ್ಷದಿಂದ ಯಾರೂ ಪ್ರಮಾಣ ಸ್ವೀಕಾರ ಮಾಡಿಲ್ಲ. ತೆಲಂಗಾಣದಿಂದ ಕಿಶನ್ ರೆಡ್ಡಿ ಹಾಗೂ ಬಂಡಿ ಸಂಜಯ್ ಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೇರಳದಿಂದ ಸುರೇಶ್ ಗೋಪಿ, ಮತ್ತು ಜಾರ್ಜ್ ಕುರಿಯನ್ ಅವರು ಪ್ರಮಾಣ ವಚನ ಪಡೆದಿದ್ದಾರೆ. ತಮಿಳುನಾಡಿನಿಂದ ಮುರಗನ್ ಎಲ್. ಪ್ರಮಾಣವಚನ ಸ್ವೀಕರಿಸಿದ್ದಾರೆ.