ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್. ಮಂಜುನಾಥ್ ಒಳ್ಳೆಯ ವ್ಯಕ್ತಿ ಎಂದು ಜನ ಮತ ನೀಡಿದ್ದಾರೆಯೇ ಹೊರತು ಬಿಜೆಪಿ ಪಕ್ಷಕ್ಕೆ ಮತ ಬಂದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಜೂ.04): ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್. ಮಂಜುನಾಥ್ ಅವರು ಗೆದ್ದಿದ್ದಾರೆ. ಒಳ್ಳೆಯ ವ್ಯಕ್ತಿ ಎಂದು ಜನ ಮತ ನೀಡಿದ್ದಾರೆಯೇ ಹೊರತು ಅಲ್ಲಿ ಪಕ್ಷಕ್ಕೆ ಮತ ಬಂದಿಲ್ಲ. ನನ್ನ ಸಹೋದರ ಕೂಡ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಸಹೋದರ ಡಿ.ಕೆ. ಸುರೇಶ್ ಅವರ ಸೋಲಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಭಾವನೆ ಸೋತಿದೆ, ಬದುಕು ಗೆದ್ದಿದೆ. ಈ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಜನಾದೇಶವನ್ನು ಸ್ವಾಗತಿಸುತ್ತೇನೆ. ಅಧಿಕಾರ ರಾಜಕೀಯಕ್ಕಿಂತ ವಿಶ್ವಾಸ ರಾಜಕೀಯ ಮುಖ್ಯ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜನ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಹೆಚ್ಚಿನ ಮತ ನೀಡಿದ್ದಾರೆ. ಬಿಜೆಪಿಯವರು 400 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದರು ಜನ ಅದನ್ನು ಸುಳ್ಳು ಮಾಡಿದ್ದಾರೆ. ಇನ್ನೂ ಹೆಚ್ಚಿನ ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ನಿರೀಕ್ಷಿಸಿದ್ದೆವು, ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣ ಏನೆಂಬುದನ್ನು ಸದ್ಯದಲ್ಲೇ ಶಾಸಕರು, ಪ್ರಮುಖ ನಾಯಕರ ಸಭೆ ಕರೆದು ಪರಾಮರ್ಶೆ ನಡೆಸುತ್ತೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ. ಸಿಎನ್. ಮಂಜುನಾಥ್ ಅವರು ಗೆದ್ದಿದ್ದಾರೆ. ಒಳ್ಳೆಯ ವ್ಯಕ್ತಿ ಎಂದು ಜನ ಮತ ನೀಡಿದ್ದಾರೆಯೇ ಹೊರತು ಅಲ್ಲಿ ಪಕ್ಷಕ್ಕೆ ಮತ ಬಂದಿಲ್ಲ. ನನ್ನ ಸಹೋದರ ಕೂಡ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ.
undefined
ಲೋಕಸಭೆ ಫಲಿತಾಂಶ: ಮಲ್ಲಿಕಾರ್ಜುನ ಖರ್ಗೆಗೆ ಲಕ್, ಡಿ.ಕೆ. ಬ್ರದರ್ಸ್‌ಗೆ ಪವರ್ ಬ್ರೇಕ್; ಸಿದ್ದು ಗದ್ದುಗೆ ಡೋಂಟ್ ಶೇಕ್
ನಮ್ಮ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಹಾಗೂ ಶ್ರೀ ರಾಹುಲ್ ಗಾಂಧಿ ಅವರ ಸತತ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಸಿಕ್ಕಿದೆ. ಬ್ರ್ಯಾಂಡ್ ಮೋದಿಯ ಅಸಲಿಯತ್ತು ಏನಾಗಿದೆ ಎಂಬುದರ ವಾಸ್ತವ ಚಿತ್ರಣ ಸಿಕ್ಕಿದೆ. ಬಿಜೆಪಿಗೆ ಮೈತ್ರಿಕೂಟದಿಂದ ಉತ್ತಮ ಸ್ಥಾನಗಳು ಬಂದಿವೆಯೇ ಹೊರತು ಸ್ವಂತ ಬಲದಿಂದಲ್ಲ. ರಾಜ್ಯದ ಮತದಾರರು ಈ ಫಲಿತಾಂಶದ ಮೂಲಕ ಒಂದು ಸಂದೇಶವನ್ನೂ ಕೂಡ ನೀಡಿದ್ದಾರೆ, ಸದ್ಯದಲ್ಲೇ ಸಭೆ ನಡೆಸಿ ಅದನ್ನು ಪರಾಮರ್ಶೆ ನಡೆಸುತ್ತೇವೆ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಡಿಕೆ ಬ್ರದರ್ಸ್ ಟಾರ್ಗೆಟ್ ಸಕ್ಸಸ್ ಆಗಿರಬಹುದು. ಡಾ. ಮಂಜುನಾಥ್ ಒಳ್ಳೆಯ ಅಭ್ಯರ್ಥಿ, ಅವರನ್ನು ಹಾಕಿದ್ರು ಆ ಮೂಲಕ ಅವರು ಸಕ್ಸಸ್ ಆಗಿರಬಹುದು. ಕರ್ನಾಟಕದಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಎಲ್ಲೆಲ್ಲಿಹೆಚ್ಚು ಕಮ್ಮಿ ಆಗಿದೆ ಚರ್ಚೆ ಮಾಡ್ತೀವಿ. ಸೀಟ್ ಬೈ ಸೀಟ್ ಪರಿಶೀಲನೆ ಮಾಡ್ತೀವಿ. ಮೋದಿಯವರ ಜನಪ್ರಿಯತೆ ಕುಗ್ಗಿರೋದು ಅರ್ಥವಾಗ್ತಿದೆ. ಹಳೆ ಮೈಸೂರು ಭಾಗದಲ್ಲಿ ನಮಗೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಡಿಮೆ ಮತ ಬರುತ್ತದೆ. ಈ ಬಾರಿಯೂ ನಮಗೆ ಅಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಈ ಚುನಾವಣೆಯಿಂದ ಪಾಠ ಕಲಿಯುತ್ತೇವೆ. ಮನ್ಸೂರ್ ಅಲಿ ಖಾನ್ ಲಾಸ್ಟ್ ಮೂಮೆಂಟ್ ಅಲ್ಲಿ ಸೋತಿದ್ದಾರೆ. ಎಲ್ಲವನ್ನು ನಾವು ಸ್ವೀಕರಿಸಿ ಕೆಲಸ ಮಾಡ್ತೇವೆ. ಮುಂದಿನ ಚುನಾವಣೆಯಲ್ಲಿ ನಾವು ಮತ್ತೆ ಪುಟಿದೇಳ್ತೇವೆ ಎಂದು ಹೇಳಿದರು.
ಮಂಡ್ಯದಲ್ಲಿ ಭರ್ಜರಿ ಗೆಲವು: ಪ್ರಮಾಣಪತ್ರ ಸ್ವೀಕರಿಸುವ ಮುನ್ನ ಜ್ಯೋತಿಷ್ಯದ ಮೊರೆ ಹೋದ ಎಚ್‌ಡಿಕೆ!
ಕಾಂಗ್ರೆಸ್ ಮುಕ್ತ ಭಾರತ ಸಾಧ್ಯವಿಲ್ಲ ಎಂಬುದು ಮನವರಿಕೆ ಆಗಿದೆ: ನಾವು ಎಲ್ಲಿ ಸೋತಿದ್ದೆವೇ ಅದನ್ನ ಆತ್ಮಾವಲೋಕನ ಮಾಡ್ತೇವೆ. ಗ್ಯಾರಂಟಿ ಯೋಜನೆಯಿಂದ ಹೆಚ್ಚಿನ ಸೀಟ್ ನಿರೀಕ್ಷೆ ಮಾಡಿದ್ದೆವು. ಮೋದಿ ವರ್ಚಸ್ಸು ಕಡಿಮೆ ಯಾಗಿದೆ ಎನ್ನೋದು ಈ ಚುನಾವಣೆ ಗೋತ್ತಾಗಿದೆ. ಅಯ್ಯೋದ್ಯೆಯ ಕ್ಷೇತ್ರದಲ್ಲಿಯೇ ಬಿಜೆಪಿಗೆ ಮುಖಂಭಂಗವಾಗಿದೆ. ಬಿಜೆಪಿಗೆ ಏಕಾಂಗಿಯಾಗಿ ಮೆಜಾರಿಟಿ ಇಲ್ಲ. 10 ವರ್ಷದ ನಂತರ ಕಾಂಗ್ರೆಸ್ ಗೆ ಹೆಚ್ಚಿನ ಸೀಟ್ ಬಂದಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡ್ತೇವೆ ಎಂದಿದ್ದರು. ಅದು ಸಾದ್ಯವಿಲ್ಲಎನ್ನೊದು ಈ ಚುನಾವಣೆಯಲ್ಲಿ ಗೊತ್ತಾಗಿದೆ. ಭಾರತ್ ಜೋಡೊ ಯಾತ್ರೆಯೀಂದ ನಮಗೆ ಅನುಕೂಲವಾಗಿದೆ ಎಂದು ಹೇಳಿದರು.