ತಂದೆ ಇಲ್ಲದ ನೋವಲ್ಲೂ ಕಣಕ್ಕಿಳಿದು ಸುರಪುರದ ಪಟ್ಟ ಗೆದ್ದ ಕಾಂಗ್ರೆಸ್‌ನ ರಾಜಾ ವೇಣುಗೋಪಾಲ ನಾಯಕ

By Gowthami K  |  First Published Jun 4, 2024, 5:23 PM IST

ಸುರಪುರ ಬೈ ಎಲೆಕ್ಷನ್ ನಲ್ಲಿ  ಕಾಂಗ್ರೆಸ್ ಗೆದ್ದು‌ ಬೀಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಭರ್ಜರಿ ಗೆಲುವು ಕಂಡಿದ್ದಾರೆ.


ಯಾದಗಿರಿ (ಜೂ.4): ಸುರಪುರ ಬೈ ಎಲೆಕ್ಷನ್ ನಲ್ಲಿ  ಕಾಂಗ್ರೆಸ್ ಗೆದ್ದು‌ ಬೀಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಭರ್ಜರಿ ಗೆಲುವು ಕಂಡಿದ್ದಾರೆ. ಸುಮಾರು 18 ಸಾವಿರ ಮತಗಳಿಂದ ರಾಜಾ ವೇಣುಗೋಪಾಲ‌ ನಾಯಕ ಜಯಭೇರಿಯಾಗಿದ್ದಾರೆ. ಈ ಮೂಲಕ ತಂದೆಯ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.

ಸುರಪುರ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ್ (ಕಾಂಗ್ರೆಸ್‌) ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ವಿಧಾನಸಭೆ ಕ್ಷೇತ್ರಕ್ಕೆ ಮೇ 7 ರಂದು, ಲೋಕಸಭೆ ಚುನಾವಣೆ ಜೊತೆ ಜೊತೆಗೇ ಉಪ ಚುನಾವಣೆಯ ಮತದಾನ ನಡೆದಿತ್ತು.

Tap to resize

Latest Videos

undefined

Bengaluru Rural Results: ಕನಕಪುರ ಬಂಡೆಗೆ ಸರ್ಜರಿ ಮಾಡಿದ ಡಾ. ಮಂಜುನಾಥ್, ಡಿಕೆ ಸುರೇಶ್‌ಗೆ ಸೋಲು

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಸುಮಾರು 25 ಸಾವಿರ ಮತಗಳ ಅಂತರದಿಂದ ಬಿಜೆಪಿಯ ನರಸಿಂಹ ನಾಯಕ (ರಾಜೂಗೌಡ) ವಿರುದ್ಧ ಗೆಲುವು ಸಾಧಿಸಿ, ಆಯ್ಕೆಯಾಗಿದ್ದರು. ಫೆ.15ರಂದು ತೀವ್ರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದರು.

ಬೆಂ.ಗ್ರಾಮಾಂತರದ ಪೊಲಿಟಿಕ್ಸ್ ಫೈಟ್ ಚನ್ನಪಟ್ಟಣಕ್ಕೆ ಶಿಫ್ಟ್, ಡಿಕೆ ಸುರೇಶ್ ಬಗ್ಗೆ ಹೊಸ ಅಪ್ಡೇಟ್‌!

ಹೀಗಾಗಿ, ಲೋಕಸಭೆ ಚುನಾವಣೆ -2024ರ ಹೊತ್ತನಲ್ಲಿ ಸುರಪುರ ವಿಧಾನಸಭೆಯ ಉಪ ಚುನಾವಣೆಯೂ ಘೋಷಣೆಗೊಂಡು, ಮೇ 7 ರಂದು ಮತದಾನ ನಡೆದಿತ್ತು. ಕಾಂಗ್ರೆಸ್‌ ಪಕ್ಷದಿಂದ ದಿ. ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಸ್ಪರ್ಧಿಸಿದ್ದರೆ, ಭಾರತೀಯ ಜನತಾ ಪಕ್ಷದಿಂದ ನರಸಿಂಹ ನಾಯಕ (ರಾಜೂಗೌಡ) ಅವರೇ ಮತ್ತೆ ಕಣಕ್ಕಿಳಿದಿದ್ದರು. ಈ ಬಾರಿ ಕೂಡ ಅವರಿಗೆ ಸೋಲಾಗಿದೆ. ಸುರಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಒಟ್ಟು 2,83,083 ಮತದಾರರ ಪೈಕಿ 2,15,268 ಮತಗಳು ಚಲಾವಣೆಯಾಗಿದ್ದು, ಶೇ.76.04ರಷ್ಟು ಮತದಾನವಾಗಿತ್ತು.

click me!