ಕೊಪ್ಪಳ ಲೋಕಸಭಾ ಕ್ಷೇತ್ರ ಫಲಿತಾಂಶ: ಸತತ ಮೂರು ಸೋಲಿನ ಸೇಡು ತೀರಿಸಿಕೊಂಡ‌ ಕಾಂಗ್ರೆಸ್, ಫಲ ನೀಡದ ಬಿಜೆಪಿ ತಂತ್ರ!

By Govindaraj SFirst Published Jun 4, 2024, 7:57 PM IST
Highlights

ಕೊಪ್ಪಳ‌ ಲೋಕಸಭಾ ಕ್ಷೇತ್ರದ ಮತ ಎಣಿಕೆ ಮುಕ್ತಾಯವಾಗಿದ್ದು, ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಬಿಜೆಪಿಯ ಡಾ ಬಸವರಾಜರನ್ನ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ವರದಿ: ದೊಡ್ಡೇಶ್ ಯಲಿಗಾರ್, ಏಶಿಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ‌

ಕೊಪ್ಪಳ‌ (ಜೂ.04): ಕೊಪ್ಪಳ‌ ಲೋಕಸಭಾ ಕ್ಷೇತ್ರದ ಮತ ಎಣಿಕೆ ಮುಕ್ತಾಯವಾಗಿದ್ದು, ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಬಿಜೆಪಿಯ ಡಾ ಬಸವರಾಜರನ್ನ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಈ ಗೆಲುವು ರಾಜಶೇಖರ ಹಿಟ್ನಾಳ್ ಗಾಗಲಿ ಅಥವಾ ಕಾಂಗ್ರೆಸ್ ಪಕ್ಷಕ್ಕಾಗಲಿ ಸಲಿಸಾಗಿ ದಕ್ಕಿದ್ದಲ್ಲ ಬದಲಾಗಿ ಇದರ ಹಿಂದಿ‌ನ ಶ್ರಮ ಮಾತ್ರ ಸಾಕಷ್ಟು. ಇನ್ನು ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಸತತವಾಗಿ ಬಿಜೆಪಿ‌ ಗೆಲುವು ಸಾಧಿಸುತ್ತಾ ಬಂದಿತ್ತು.‌ಆದರೆ ಈ ಬಾರಿ ಮಾತ್ರ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲಬೇಕು ಎಂದು ಪಣತೊಟ್ಟು ಗೆದ್ದಿದೆ. ಕಳೆದ ಎರಡು ಚುನಾವಣೆಗಳಲ್ಲಿ ಹಿಟ್ನಾಳ್ ಕುಟುಂಬದವರೇ ಸ್ಪರ್ಧೆ ಮಾಡಿ ಸೋತಿದ್ದರು. ಈ ಬಾರಿಯೂ ಸಹ ಕಳೆದ ಬಾರಿ ಸೋತಿದ್ದ ರಾಜಶೇಖರ ಹಿಟ್ನಾಳ್ ಸ್ಪರ್ಧೆ ಮಾಡಿದ್ದರು.‌ಇವರ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು ವೈದ್ಯ ಬಸವರಾಜ ಕ್ಯಾವಟರ್. ‌

Latest Videos

ಕರಡಿ ಸಂಗಣ್ಣ ಗೆ ಕೈತಪ್ಪಿದ ಬಿಜೆಪಿ ಟಿಕೆಟ್- ಕೈ ಹಿಡಿದ ಲಕ್: ಇನ್ನು ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಯಿಂದ ಕರಡಿ ಸಂಗಣ್ಣ ಸಂಸದರಾಗಿದ್ದರು. ಆದರೆ ಈ ಬಾರಿ ಕರಡಿ ಸಂಗಣ್ಣ ಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ. ಇದರಿಂದಾಗಿ ಮುನಿಸಿಕೊಂಡ ಕರಡಿ ಸಂಗಣ್ಣ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕರಡಿ ಸಂಗಣ್ಣ ಬಿಜೆಪಿ ಸೇರ್ಪಡೆಯಾದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಅದೃಷ್ಟ ಖುಲಾಯಿಸಿತು ಎಂದು ಹೇಳಬಹುದು.‌ಒಂದೇಡೆ ಕಳೆದ ಚುನಾವಣೆಯಲ್ಲಿನ ಸೋಲಿನ ಅನುಕಂಪ ಮತ್ತೊಂದಡೆ ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಅವರ ಅನುಭವ ಹಾಗೂ ಶಕ್ತಿ ಧಾರೆ ಎಳೆದದ್ದು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯವಾಗಿದೆ.

ಸಿಎಂ, ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ: ಆರ್.ಅಶೋಕ್

ಹುಸಿಯಾದ ಬಿಜೆಪಿ ನೀರಿಕ್ಷೆ: ಇನ್ನು ಕಳೆದ 2009,2014 ಹಾಗೂ 2019 ರಲ್ಲಿ ಮೂರು ಚುನಾವಣೆಗಳಲ್ಲಿ ಬಿಜೆಪಿ ಕೊಪ್ಪಳ‌ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಇನ್ನು ಈ‌ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದು ಲಿಂಗಾಯತ ಪಂಚಮಸಾಲಿ ಅಭ್ಯರ್ಥಿಗಳೇ. ಹೀಗಾಗಿ ಈ ಬಾರಿ ಕರಡಿ ಸಂಗಣ್ಣ ಗೆ ಟಿಕೆಟ್ ಕೈತಪ್ಪಿಸಿ,ಅವರದೇ ಲಿಂಗಾಯತ ಪಂಚಮಸಾಲಿ ಸಮಾಜದ ಅಭ್ಯರ್ಥಿಯಾದ ವೈದ್ಯ ಬಸವರಾಜ ಕ್ಯಾವಟರ್ ಅವರನ್ನು ಬಿಜೆಪಿ ಕಣಕ್ಕಿಳಿಸಿತು.‌ ಹೇಗೂ ಕೊಪ್ಪಳ‌ ಲೋಕಸಭೆ ಕ್ಷೇತ್ರದಲ್ಲಿ ಕಳೆದ ಮೂರು ಬಾರಿಯೂ ಬಿಜೆಪಿ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತದೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಬಿಜೆಪಿ ಇತ್ತು. ಆದರೆ ಇದೀಗ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಗೆಲ್ಲುವ ಮೂಲಕ ಬಿಜೆಪಿಯ ನೀರಿಕ್ಷೆ ಹುಸಿಯಾಗಿದೆ.

ಟಿಕೆಟ್ ನಿರಾಕರಣೆ ಸೇಡು ತಿರಿಸಿಕೊಂಡ ಕರಡಿ ಸಂಗಣ್ಣ: ಇನ್ನು 2014 ಹಾಗೂ 2019 ರಲ್ಲಿ ಕರಡಿ ಸಂಗಣ್ಣ ಬಿಜೆಯಿಂದ ಸಂಸದರಾಗಿ ಆಯ್ಕೆಯಾದರು. ಆದರೆ 2018 ಹಾಗೂ 2023 ರ ವಿಧಾನಸಭೆ ಚುನಾವಣೆಗಳಲ್ಲಿ ವಿರೋಧದ ಮದ್ಯೆ ತಮ್ಮ ಮಗ ಹಾಗೂ ಸೊಸೆಗೆ ಟಿಕೆಟ್ ತೆಗೆದುಕೊಂಡು ಬಂದರು.ಆದರೆ ಎರಡೂ ಚುನಾವಣೆಗಳಲ್ಲಿ ಸೋತರು. ಹೀಗಾಗಿ ಈ ಕುರಿತು ಪಕ್ಷದ ನಾಯಕರಲ್ಲಿ ಕರಡಿ ಸಂಗಣ್ಣ ಅವರ ಬಗ್ಗೆ ಒಳ್ಳೇಯ ಅಭಿಪ್ರಾಯ ಇರದಾಯಿತು. ಹೀಗಾಗಿ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಹೀಗಾಗಿ ಕರಡಿ ಸಂಗಣ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಜೊತೆಗೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಪ್ರಚಾರ ಮಾಡಿ ಗೆಲುವು ಸಾಧಿಸಲು ಪ್ರಮುಖ ಕಾರಣಿಕರ್ತರಾದರು. ಈ‌ ಮೂಲಕ ಕರಡಿ ಸಂಗಣ್ಣ ತಮಗೆ ಬಿಜೆಪಿ ಟಿಕೆಟ್ ನೀರಾಕರಣೆ ಮಾಡಿದ್ದ ಸೇಡನ್ನು ತೀರಿಸಿಕೊಂಡರು.

ಡಿ.ಕೆ.ಸುರೇಶ್‌ ಸೋಲು ಅಘಾತ ತಂದಿದೆ: ಆಪರೇಶನ್ ಹಸ್ತದ ಮುನ್ಸೂಚನೆ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ

ಅಸಮಧಾನದ ಮದ್ಯೆ ಸಮಾಧನ ತಂದ ಫಲಿತಾಂಶ: ಲೋಕಸಭೆ ಚುನಾವಣೆಯಲ್ಲಿ ರಾಜಶೇಖರ ಹಿಟ್ನಾಳ್ ಗೆಲುವು ಸಾಧಿಸಿದ್ದಾರೆ.‌ಆದರೆ ಈ ಗೆಲುವು ರಾಜಶೇಖರ ಹಿಟ್ನಾಳ್ ಗೆ ಏನೂ ಹೂವಿನ ಹಾಸಿಗೆ ಆಗಿದ್ದಿಲ್ಲ.‌ಬದಲಾಗಿ ಮುಳ್ಳಿನ‌ ಹಾಸಿಗೆ ಆಗಿತ್ತು. ಇದಕ್ಕೆ ಪ್ರಮುಖವಾದ ಕಾರಣ ಮಾಜಿ ಸಚಿವ ಗಂಗಾವತಿ ಕ್ಷೇತ್ರದ  ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಅಸಮಧಾನ. ಹೌದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಟ್ನಾಳ್ ಕುಟುಂಬದವರು ನನ್ನ ಸೋಲಿಗೆ ಕಾರಣ ಎಂದು ಇಕ್ಬಾಲ್ ಅನ್ಸಾರಿ ಆರಂಭದಿಂದಲೂ ಪ್ರಚಾರ ಕಾರ್ಯದಿಂದ‌ ದೂರವೇ ಇದ್ದರು.‌ಅದಾದ ಬಳಿಕ ಸಿಎಂ ಸಿದ್ದರಾಮಯ್ಯ ಸಂಧಾನದ ಬಳಿಕ ಇಕ್ಬಾಲ್ ಅನ್ಸಾರಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಗೆಲುವು ಸಾಧಿಸಲು ಕಾರಣವಾದರು. ಒಟ್ಟಿನಲ್ಲಿ ಅನುಕಂಪದ ಅಲೆ,ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ, ಗ್ಯಾರಂಟಿ ಸ್ಕೀಂಗಳ ಎಫೆಕ್ಟ್ ನಡಿವೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ‌ 15 ವರ್ಷಗಳ ನಂತರ ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಜನರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.

click me!