ಹಣದಿಂದ ಚುನಾವಣೆ ಗೆಲ್ಲೋಕೆ ಆಗೊಲ್ಲ, ಸಂಘಟನಾ ಮಂತ್ರ ಪಠಿಸಿದ ಸಂಸದ ಡಿವಿ ಸದಾನಂದಗೌಡ

By Sathish Kumar KHFirst Published Feb 3, 2024, 12:15 PM IST
Highlights

ರಾಜ್ಯದಲ್ಲಿ ಕೇವಲ ಹಣದಿಂದ ಚುನಾವಣೆ ಗೆಲ್ಲುವುದಕ್ಕೆ ಆಗೋದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಾವು ನಮ್ಮ ಸ್ವಯಂಕೃತ ಅಪರಾಧದಿಂದ ಸೋತಿದ್ದೇವೆ.

ಬೆಂಗಳೂರು (ಫೆ.03): ರಾಜ್ಯದಲ್ಲಿ ಕೇವಲ ಹಣದಿಂದ ಚುನಾವಣೆ ಗೆಲ್ಲುವುದಕ್ಕೆ ಆಗೋದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಾವು ನಮ್ಮ ಸ್ವಯಂಕೃತ ಅಪರಾಧದಿಂದ ಸೋತಿದ್ದೇವೆ. ಪಕ್ಷದಲ್ಲಿ ಒಡಕು ಇದ್ರೆ ಚುನಾವಣೆ ಗೆಲ್ಲೋದಕ್ಕೆ ಆಗೋದಿಲ್ಲ. ಹೀಗಾಗಿ, ಸಂಘಟನೆ ಮೂಲಕವೇ ಚುನಾವಣೆಗೆ ಹೋಗಬೇಕು ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.

ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯಿಂದ ಕೇವಲ ಬಿ.ಎಸ್. ಯಡಿಯೂರಪ್ಪ ಒಬ್ಬರೇ ಶಾಸಕರಿದ್ದರು. ಅವರ ನಿರಂತರ ಹೋರಾಟದಿಂದ ಪಕ್ಷ ಸಂಘಟಿತವಾಗಿದೆ. ಕರ್ನಾಟಕವನ್ನು ಯಾವಾಗ ಏನು ಬೇಕಾದರೂ ಅಲ್ಲಾಡಿಸುವ ಪಕ್ಷ ನಮ್ಮ ದಾಗಿದೆ. ಸಿಎಂ ಸಿದ್ದರಾಮಯ್ಯ ತಾವು ನುಡಿದಂತೆ ನಡೆದಿದ್ದೇವೆ ಅಂತಾ ಹೇಳಿಕೊಳ್ಳುತ್ತಾರೆ. ಆದರೆ, ನೈಜವಾಗಿ ನುಡಿದಂತೆ ನಡೆದುಕೊಂಡಿರುವ ವ್ಯಕ್ತಿಯೆಂದರೆ ಅದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಎಂದು ಹೇಳಿದರು.

Breaking: ಬಿಜೆಪಿಯ ಭೀಷ್ಮ ಎಲ್‌ ಕೆ ಅಡ್ವಾಣಿಗೆ ಭಾರತರತ್ನ ಘೋಷಣೆ

ನಮಗೆ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಆಗಿರುವುದು ಜಿನ. ಆದರೆ, ಜನರ ಸಂಘಟನೆಯಿಂದ ಚುನಾವಣೆ ಗೆಲ್ಲೋಕೆ ಸಾಧ್ಯವೇ ವಿನಹ, ಹಣದಿಂದ ಅಲ್ಲ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಧ್ಯಕ್ಷರಾದ ನಂತರ ವಿರೋಧ ಪಕ್ಷದ ನೇಮಕರಾದ ಬಳಿಕ ಜನರ ಆಶೀರ್ವಾದ ನಮ್ಮ ಮೇಲಿದೆ. ಅವರ ಆಶೀರ್ವಾದ ನೋಡಿದ್ರೆ ಮುಂದೆ ನಾವು ಅಧಿಕಾರಕ್ಕೆ ಬರೋದು ಖಚಿತವಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಎಲ್ಲಿಯಾದರೂ ಅತ್ಯಂತ ಭ್ರಷ್ಟ ಸರ್ಕಾರ ಇದೆ ಅಂದರೆ, ಅದು ನಮ್ಮ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ. ಆದರೆ, ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ದೇಶಕ್ಕೆ ನರೇಂದ್ರ ಮೋದಿ ಾವರೇ ಅಧಿಕಾರಕ್ಕೆ ಬರಬೇಕು ಅಂತಾ ಸ್ವತಃ ಕಾಂಗ್ರೆಸ್‌ ನಾಯಕರೇ ಹೇಳಿರೋದನ್ನು ನಾವು ನೋಡಿದ್ದೇವೆ. ಇನ್ನು ಈ ಹಿಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಹಿನ್ನಡೆಯಾದರೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಹಿನ್ನಡೆಯಾಗಿಲ್ಲ. ನಾವು ನಮ್ಮ ಸ್ವಯಂ ಅಪರಾಧದಿಂದ ಎರಡು ಕ್ಷೇತ್ರ ಗಳಲ್ಲಿ ಸೋತಿದ್ದೇವೆ ಅಷ್ಟೇ ಎಂದು ಸಂಸದ ಸದಾನಂದಗೌಡ ಹೇಳಿದರು. 

News Hour: ಸಂಸತ್ ಕಲಾಪದಲ್ಲೂ ಪ್ರತ್ಯೇಕ ರಾಷ್ಟ್ರದ ಕಿಚ್ಚು: ಡಿ.ಕೆ. ಸುರೇಶ್ ಕ್ಷಮೆ ಕೇಳುವಂತೆ ಬಿಜೆಪಿ ಪಟ್ಟು !

ಕಳೆದ ಚುನಾವಣೆಯಲ್ಲಿ ನಾವು ಕಳೆದುಕೊಂಡಿದ್ದೇವೆ. ಕಳೆದುಕೊಂಡಿರೋದನ್ನು ಈ ಚುನಾವಣೆಯಲ್ಲಿ ನಾವು ಪಡೆದುಕೊಳ್ಳಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಹೆಚ್ಚಿಸಿ, ಈ ಕ್ಷೇತ್ರ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ನಮ್ಮ ವ್ಯತ್ಯಾಸಗಳು ಏನಿದ್ದರೂ, ಅದನ್ನು ಹಿರಿಯರ ಜೊತೆ ಮಾತಾಡಿ ಬಗೆಹರಿಸಿಕೊಳ್ಳಬೇಕು. ಸಣ್ಣಪುಟ್ಟ ಮಾತಾಡೋದನ್ನು ಬಿಟ್ಟು ಬಿಡೋಣ. ಲೆಕ್ಕ ಕೊಡುವ ಜವಬ್ದಾರಿ ಬೇಡ, ಕೆಲಸ ಮಾಡುವ ಜವಬ್ದಾರಿ ಬೇಕು. ಪಕ್ಷದ ಆದೇಶದಂತೆ ಎಲ್ಲರೂ ಕೆಲಸ ಮಾಡಬೇಕು. ಬೆಂಗಳೂರು ಉತ್ತರದಲ್ಲಿ ಯಾವುದೇ ಒಂದು ಕಲ್ಲು ನಿಂತರೂ ಗೆಲ್ಲುವ ಕ್ಷೇತ್ರ ಆಗಿದೆ. ಇಡೀ ದೇಶದಲ್ಲಿ ನಂಬರ್ ಒನ್ ಆಗಿ ಜಯಗಳಿಸಲಿದೆ. ನಾವು ಮತ್ತೆ ಒಂದಾಗಿ ಒಟ್ಟಾಗಿ ಕೆಲಸ ಮಾಡೋಣ. ಹಾಲಿ ಅಥವಾ ಮಾಜಿ ಎಂಬ ಭೇದವನ್ನು ಮರೆತು ಎಲ್ಲರೂ ಒಮದಾಗಿ ಪಕ್ಷದ ಗೆಲುವಿಗೆ ಕೆಲಸ ಮಾಡೋಣ ಎಂದರು.

click me!