ದಶಕದ ನಂತರ ಒಗ್ಗಟ್ಟು ಪ್ರದರ್ಶಿಸಿದ ರೆಡ್ಡಿ ಬ್ರದರ್ಸ್, ಸಾಕ್ಷಿಯಾದ ಸಿಎಂ ಬೊಮ್ಮಾಯಿ

By Suvarna News  |  First Published Apr 10, 2022, 8:02 PM IST

* ದಶಕದ ನಂತರ ಒಗ್ಗಟ್ಟು ಪ್ರದರ್ಶಿಸಿದ ರೆಡ್ಡಿ ಬ್ರದರ್ಸ್
* ಸಾಕ್ಷಿಯಾದ ಸಿಎಂ ಬೊಮ್ಮಾಯಿ
* ರಾಜ್ಯದಲ್ಲಿ ಮತ್ತೆ ರೆಡ್ಡಿ ಬದ್ರರ್ಸ್ ರಾಜಕೀಯ ಮುನ್ಸೂಚನೆ


ಹರಪನಹಳ್ಳಿ(ವಿಜಯನಗರ), (ಏ.10): ಒಂದು ದಶಕದ ನಂತರ ಬಳ್ಳಾರಿಯ ರೆಡ್ಡಿ ಸಹೋದರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾಸಕ ಜಿ. ಕರುಣಾಕರ ರೆಡ್ಡಿ ಜನ್ಮದಿನದ ನಿಮಿತ್ತ ಭಾನುವಾರ ಹರಪನಹಳ್ಳಿಯಲ್ಲಿ ಏರ್ಪಡಿಸಿದ್ದ ಸೀತಾರಾಮ ಕಲ್ಯಾಣೋತ್ಸವದಲ್ಲಿ ಮೂವರು ಸಹೋದರರು ವೇದಿಕೆ ಹಂಚಿಕೊಂಡರು.

ಹರಪನಹಳ್ಳಿ ಪಟ್ಟಣದ ಹೆಚ್ ಪಿ ಎಸ್  ಕಾಲೇಜ್  ಮೈದಾನದಲ್ಲಿ  ಸೀತಾರಾಮ ಕಲ್ಯಾಣ ಮಹೋತ್ಸವ ಹಾಗು ಕರುಣಾಕರೆಡ್ಡಿ ಯ ಷಟ್ಠ್ಯಬ್ಧ  ಕಾರ್ಯಕ್ರಮ ನಡೆಯಿತು. ಕರುಣಾಕರ ರೆಡ್ಡಿ ಜನ್ಮದಿನ ಹಿನ್ನಲೆ ಕಾರ್ಯಕ್ರಮ ಹಿನ್ನಲೆಯಲ್ಲಿ ಗಾಲಿ‌ ಜನಾರ್ಧನ ರೆಡ್ಡಿ ಸೋಮಶೇಖರ್ ರೆಡ್ಡಿ ಶ್ರೀರಾಮುಲು ಒಂದೇ ವೇದಿಕೆಯಲ್ಲಿ ಪಾಲ್ಗೊಂಡಿದ್ದರು.

Latest Videos

undefined

ಮತ್ತೆ ರಾಜ್ಯ ರಾಜಕೀಯಕ್ಕೆ ಜನಾರ್ಧನ ರೆಡ್ಡಿ ಎಂಟ್ರಿ, ಅಧಿಕೃತ ಘೋಷಣೆ

ಕಳೆದ 12  ವರ್ಷಗಳಿಂದ ಬೇರೆ ಬೇರೆ ಆಗಿದ್ದ ಕರುಣಾಕರ ರೆಡ್ಡಿ, ಶಾಸಕ ಸೋಮಶೇಖರ್‌ ರೆಡ್ಡಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ  ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು,  ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ತಮ್ಮ ಪ್ರಾಬಲ್ಯ ತೋರಿಸುವ ಮುನ್ಸೂಚನೆ ನೀಡಿದ್ದಾರೆ. 2023 ರ  ವಿಧಾನ ಸಭೆ ಹತ್ತಿರವಾಗುತ್ತಿದ್ದಂತೆ ಹಳೇ ವೈಷಮ್ಯಗಳನ್ನು ಮರೆತು  ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ‌.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2011ರಲ್ಲಿ ಜನಾರ್ದನ ರೆಡ್ಡಿ ಜೈಲು ಸೇರಿದ ನಂತರ ಮೂವರು ಸಹೋದರರು ಒಟ್ಟಿಗೆ ಸೇರಿರಲಿಲ್ಲ. ಅದರಲ್ಲೂ ಕರುಣಾಕರ ರೆಡ್ಡಿ ಅಂತರ ಕಾಯ್ದುಕೊಂಡಿದ್ದರು. ಆದರೆ, ಇಂದು (ಭಾನುವಾರ) ಒಂದೇ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡು, ಪರಸ್ಪರ ಮೆಚ್ಚುಗೆಯ ಮಾತುಗಳನ್ನು ಆಡುತ್ತ ಒಗ್ಗಟ್ಟು ಪ್ರದರ್ಶಿಸಿದರು.

ಜನಾರ್ದನ ರೆಡ್ಡಿ ಮಾತನಾಡಿ, ಕರುಣಾಕರೆಡ್ಡಿ ಹುಟ್ಟುಹಬ್ಬದ ಸಂಭ್ರಮ ನಮ್ಮ‌ ಮನೆ ಹಬ್ಬವಿದ್ದಂತೆ ಕೋರ್ಟ್ ಕಟ್ಟಳಗಳಿದ್ದುದರಿಂದ  12 ವರ್ಷಗಳ ನಂತರ ಹರಪನಹಳ್ಳಿ ಗೆ ಬಂದಿದ್ದೇನೆ. ಅಣ್ಣ ಕರುಣಾಕರ ರೆಡ್ಡಿಯವರಿಗೆ 60ನೇ ಜನ್ಮ ದಿನದ ಸಂಭ್ರಮ ಈ ಜನ್ಮ ದಿನ ಪುನರ್ ಜನ್ಮವಿದ್ದಂತೆ , ಮರುಹುಟ್ಟ ಪಡೆದಂತೆ. ನಮ್ಮ ಕುಟುಂಬಕ್ಕೆ ಹರಪನಹಳ್ಳಿ ಜನರು ಪ್ರೀತಿ ಕೊಟ್ಟಿದ್ದಾರೆ.ಬಳ್ಳಾರಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು ಕಾಂಗ್ರೆಸ್ ನ ಭದ್ರಕೋಟೆ ಭೇದಿಸಲಾಯಿತು ಅದರಲ್ಲಿ ಹರಪನಹಳ್ಳಿ ಪಾತ್ರ ಮುಖ್ಯ. ಕರುಣಾಕರ ರೆಡ್ಡಿ ಸಾಮಾನ್ಯ ವ್ಯಕ್ತಿಯಲ್ಲ ಮೊದಲ ಬಿಜೆಪಿ ಎಂಪಿಯಾಗಿ ಗೆದ್ದು ಬಂದವರು. 12 ವರ್ಷಗಳ ನಂತರ ನಾನು ಹರಪನಹಳ್ಳಿಗೆ ಬಂದಿದ್ದೇನೆ, ಮತ್ತೆ ಶಕ್ತಿ ಬಂದಂತೆ ಆಗಿದೆ. ಯಾವುದೇ ರಾಜಕೀಯ ವಿಚಾರ ಸದ್ಯಕ್ಕೆ ಮಾತನಾಡಲ್ಲ ಎಂದರು.

ಶಾಸಕ, ಸಚಿವ, ಸಿ.ಎಂ. ಆಗಬೇಕೆಂಬ ಆಸೆ ನನಗಿಲ್ಲ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲಲು ನಾನು ಕೂಡ ಕೆಲಸ ಮಾಡಲು ಸಿದ್ಧ. ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ಸಿ.ಎಂ. ಮಾಡಲು ಶ್ರಮಿಸಿದ್ದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 150 ಸ್ಥಾನಗಳಲ್ಲಿ ಗೆಲ್ಲಲು ಶ್ರಮಿಸುತ್ತೇನೆ. ಬಿಜೆಪಿ ಖಂಡಿತವಾಗಿಯೂ 150 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ಜನಾರ್ದನ ರೆಡ್ಡಿ ಅವರ ಮಾತುಗಳನ್ನು ಕೇಳಿ ಸಂತೋಷವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ. ಅನೇಕ ವರ್ಷಗಳ ಕಾಲ ಬಳ್ಳಾರಿಯಲ್ಲಿ ಕೆಲವೇ ಮನೆತನದವರ ಪ್ರಭಾವ ಇತ್ತು. ಆದರೆ, ರೆಡ್ಡಿ ಸಹೋದರರು, ಶ್ರೀರಾಮುಲು ಅವರು ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ, ಜನರ ಪ್ರೀತಿ ವಿಶ್ವಾಸ ಗಳಿಸಿ ಬಿಜೆಪಿಯ ಬಾವುಟ ಹಾರಿಸಲು ಶ್ರಮಿಸಿದರು ಎಂದು ಕೊಂಡಾಡಿದರು.

click me!