ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಶೋಭಾ ಸೋಮನಾಚೆ ಅವರು ಮೇಯರ್ ಹಾಗೂ ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.
ಬೆಳಗಾವಿ (ಫೆ.06): ಬೆಳಗಾವಿ ಮಹಾನಗರ ಪಾಲಿಕೆ ರಚನೆಯಾದಂದಿನಿಂದ ಈವರೆಗೂ ಮೇಯರ್ ಸ್ಥಾನ ಬಿಜೆಪಿಗೆ ಒಲಿದಿರಲಿಲ್ಲ. ಪಾಲಿಕೆಯ ಆಡಳಿತದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಶೋಭಾ ಸೋಮನಾಚೆ ಅವರು ಮೇಯರ್ ಹಾಗೂ ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಗರಿಗೆದರಿದ್ದ ಬೆಳಗಾವಿ ನಗರಸಭೆ ಮೇಯರ್, ಉಪಮೇಯರ್ ಸ್ಥಾನದ ಪೈಪೋಟಿಯು ಬಿಜೆಪಿ ಸದಸ್ಯರು ಮೇಯರ್ ಮತ್ತು ಉಪಮೇಯರ್ ಆಗುವ ಮೂಲಕ ಅಂತ್ಯಗೊಂಡಿದೆ. ಬಿಜೆಪಿಯ ಶೋಭಾ ಸೋಮನಾಚೆ ಅವರು ಮೇಯರ್ ಆಗಿ ಹಾಗೂ ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆ ಆಗಿದ್ದಾರೆ. ಇನ್ನು ನಗರಸಭೆ ಇತಿಹಾಸಲ್ಲಿ ಮೊದಲ ಬಾರಿಗೆ ಆಡಳಿತವು ಬಿಜೆಪಿಗೆ ಒಲಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಬೆಳಗಾವಿ ವಿಭಾಗದ ಬಿಜೆಪಿ ಉಸ್ತುವಾರಿ ಆಗಿರುವ ನಿರ್ಮಲಕುಮಾರ್ ಸುರಾನಾ ಅಭಿನಂದನೆ ಸಲ್ಲಿಸಿದ್ದಾರೆ.
Belagavi: ವಿಷಾಹಾರ ಸೇವಿಸಿದ ರೇಣುಕಾ ಯಲ್ಲಮ್ಮ ದೇವಿ ಭಕ್ತರು: 35ಕ್ಕೂ ಅಧಿಕ ಮಂದಿ ಅಸ್ವಸ್ಥ
ಪಾಲಿಕೆ ಚುನಾವಣೆ ಬಗ್ಗೆ ಸಿಎಂ ಗಮನ: ಬೆಳಗಾವಿಯಲ್ಲಿ ನಿರ್ಮಲಕುಮಾರ್ ಸುರಾನಾ ಮಾತನಾಡಿ, ಶೋಭಾ ಸೋಮನಾಚೆ ಅವಿರೋಧವಾಗಿ ಮೇಯರ್ ಆಗಿ ಆಯ್ಕೆ ಆಗಿದ್ದಾರೆ. ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆ ಆಗಿದ್ದು ಅವರಿಗೆ ಅಭಿನಂದನೆ ಸಲ್ಲಿಸಿದದ್ದೇನೆ. ನಮ್ಮಲ್ಲಿ ಇದ್ದ 39 ಮತ ಹಾಗೂ ಪಕ್ಷೇತರ ಸದಸ್ಯರು ಸೇರಿ 42 ಮತ ಉಪಮೇಯರ್ ಗೆ ಬಂದಿವೆ. ಮುಂದಿನ ದಿನಗಳಲ್ಲಿ ಬೆಳಗಾವಿ ಅಭಿವೃದ್ಧಿಗೆ ಇದೊಂದು ಒಳ್ಳೆಯ ಅವಕಾಶ ಲಭ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನೇರವಾಗಿ ನಗರಸಭೆ ಚುನಾವಣೆ ಗಮನಿಸುತ್ತಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರು ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲಬೇಕು ಅಂತಾ ಕೆಲಸ ಮಾಡಲು ಸೂಚಿಸಿದ್ದರು. ಈಗ ಗೆಲುವು ಸಾಧಿಸುವ ಮೂಲಕ ಅವರ ಅಪೇಕ್ಷೆಯನ್ನು ಈಡೇರಿಸಿದಂತಾಗಿದೆ.
ಬೆಳಗಾವಿ ಶಾಸಕರು ಬೆಂಬಲ ಲಭ್ಯ: ಬೆಂಗಳೂರಿನ ಶಾಸಕ ಸತೀಶ್ ಸೈಲ್ ಸೇರಿ ನಮ್ಮ ಬೆಳಗಾವಿಯ ಶಾಸಕರು ಸಂಸದರು ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಹಿನ್ನೆಲೆಯಲ್ಲಿ ಶ್ರಮಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ 35 ಸೀಟ್ ಗೆದ್ದಾಗ ನಮಗೆ ಖುಷಿಯಾಯ್ತು. ಜನರು ನಮ್ಮ ಜೊತೆಯಲ್ಲಿರೋದು ಮುಂದಿನ ದಿನಗಳಲ್ಲಿ ಜನರ ಆಪೇಕ್ಷೆಯಂತೆ ಕೆಲಸ ಮಾಡುತ್ತೇವೆ. ಪಾಲಿಕೆ ಸದಸ್ಯರ ಜೊತೆ ಬೆಳಗಾವಿಯ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಇರುತ್ತಾರೆ. ಬೆಳಗಾವಿ ಅಭಿವೃದ್ಧಿಗೆ ಒಂದು ಹೊಸ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿ ಬಿಜೆಪಿ ಮೊದಲ ಮೇಯರ್ ಯಾರು?
ಪಟಾಕಿ ಸಿಡಿಸಿ ಸಂಭ್ರಮಾಚರಣೆ: ಬೆಳಗಾವಿ ನಗರಸಭೆ ನೂತನ ಮೇಯರ್ ಆಗಿ ಬಿಜೆಪಿಯ ಶೋಭಾ ಸೋಮನಾಚೆ, ಉಪಮೇಯರ್ ಆಗಿ ರೇಷ್ಮಾ ಪಾಟೀಲ್ ಆಯ್ಕೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಎದುರು ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮಾಡಿದ್ದಾರೆ. ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬಂದಿರುವುದು ಅತ್ಯಂತ ಖುಷಿಯಾಗಿದೆ ಎಂದು ಮೇಯರ್, ಉಪಮೇಯರ್ ಸಂತಸ ಹಂಚಿಕೊಂಡಿದ್ದಾರೆ.