ಬೆಳಗಾವಿ ಅಧಿವೇಶನ ಒಂದು ದಿನ ಮೊಟಕುಗೊಂಡಿದ್ದು, ಇದು ಪ್ರತಿಪಕ್ಷಗಳ ನಾಯಕರ ಒಪ್ಪಿಗೆ ಮೇರೆಗೆ ನಡೆದಿದೆ. ಆದರೆ ಈಗ ಕೆಲವರು ವಿರೋಧಿಸುತ್ತಿದ್ದಾರೆ ಎಂದರೆ ಅದು ಅವರ ಗುಂಪುಗಾರಿಕೆಯನ್ನು ತೋರಿಸುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಶಿವಮೊಗ್ಗ (ಡಿ.31): ಬೆಳಗಾವಿ ಅಧಿವೇಶನ ಒಂದು ದಿನ ಮೊಟಕುಗೊಂಡಿದ್ದು, ಇದು ಪ್ರತಿಪಕ್ಷಗಳ ನಾಯಕರ ಒಪ್ಪಿಗೆ ಮೇರೆಗೆ ನಡೆದಿದೆ. ಆದರೆ ಈಗ ಕೆಲವರು ವಿರೋಧಿಸುತ್ತಿದ್ದಾರೆ ಎಂದರೆ ಅದು ಅವರ ಗುಂಪುಗಾರಿಕೆಯನ್ನು ತೋರಿಸುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಕಾರಣಕ್ಕೂ ಒಬಿಸಿಗೆ ಅನ್ಯಾಯ ಮಾಡುವುದಿಲ್ಲ ಅನ್ನೋದು ಸರ್ಕಾರದ ನಿರ್ಣಯ. ಆ ನಿಟ್ಟಿನಲ್ಲಿ ಮೀಸಲಾತಿ ಹಂಚಿಕೆಯಾಗಿದೆ. ಪಂಚಮಸಾಲಿ ವರ್ಗದವರು ಇದನ್ನು ವಿರೋಧಿಸಿಲ್ಲ.
ಇನ್ನಷ್ಟು ಸ್ಷಷ್ಟತೆ ಬೇಕು ಅನ್ನೋದು ಶ್ರೀಗಳ ಹೇಳಿಕೆ. ಮೀಸಲಾತಿ ಪ್ರಮಾಣ ಹಂಚಿಕೆ ನಂತರ ಸ್ಪಷ್ಟತೆ ಸಿಗಲಿದೆ. ಮೀಸಲಾತಿ ಘೋಷಣೆ ಎಲ್ಲರೂ ಸ್ವಾಗತಿಸಿದ್ದಾರೆ ಎಂದು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಅಮಿತ್ ಶಾ ನಮ್ಮ ರಾಜ್ಯಕ್ಕೆ ಬರುತ್ತಿರುವುದು ಪುಣ್ಯ. ಅಮಿತ್ ಶಾ, ಮೋದಿ ಆಯಸ್ಕಾಂತದಂತೆ ಜನರನ್ನು ಸೆಳೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತವನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಮುಂದಿನ ಬಾರಿಯೂ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮುದಾಯವನ್ನು ಮಂಗ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ: ಎಚ್.ಡಿ.ಕುಮಾರಸ್ವಾಮಿ
ರಾಜಕೀಯಪ್ರೇರಿತ ದೂರು: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯಪ್ರೇರಿತ. ಪ್ರಜ್ಞಾಸಿಂಗ್ ಅವರು ಯಾರಿಗೂ ಚಾಕು ಹಾಕಿ ಅಂದಿಲ್ಲ. ಪ್ರಜ್ಞಾಸಿಂಗ್ ಹೇಳಿದ್ದನ್ನು ಇಡೀ ಪ್ರಪಂಚ ನೋಡಿದೆ. ಮನೆಯಲ್ಲಿ ಬಾಂಬ್ ಇಟ್ಟುಕೊಳ್ಳಿ ಅಂದಿಲ್ಲ. ನಿಮ್ಮ ರಕ್ಷಣೆಗೆ ಮನೆಯಲ್ಲಿ ಚಾಕು ಇಟ್ಟುಕೊಳ್ಳಿ ಅಂದಿದ್ದಾರೆ. ಆದರೆ ಕಾಂಗ್ರೆಸ್‌ನವರು ರಾಜಕಾರಣದ ಪ್ರಯತ್ನ ಮಾಡ್ತಿದ್ದಾರೆ, ಮಾಡಲಿ ಬಿಡಿ ಎಂದರು.
ಅಮಿತ್ ಶಾ ಬ್ಯಾನರ್‌ನಲ್ಲಿ ಸುಮಲತಾ ಭಾವಚಿತ್ರ ಇರುವ ಕುರಿತು ಪ್ರತಿಕ್ರಿಸಿದ ಅವರು, ದೇಶದ ಗೃಹಮಂತ್ರಿ ಕ್ಷೇತ್ರಕ್ಕೆ ಬರುತ್ತಿರುವುದರಿಂದ ಸಂಸದೆ ಸುಮಲತಾ ಫೋಟೋ ಹಾಕಿದ್ದಾರೆ. ಸರ್ದಾರ್ ವಲ್ಲಭಭಾಯಿ ಬಿಟ್ಟರೆ ಅಮಿತ್ ಶಾ ಉಕ್ಕಿನ ಮನುಷ್ಯರಾಗಿ ಹೊರಹೊಮ್ಮಿದ್ದಾರೆ. ಅದು ತಪ್ಪಲ್ಲ, ಸುಮಲತಾ ಅವರು ಬಿಜೆಪಿಗೆ ಬರ್ತಾರೋ, ಬಿಡ್ತಾರೋ. ಅದು ಅವರಿಗೆ ಬಿಟ್ಟಿದ್ದು ಎಂದು ಪ್ರಶ್ನೆಯೊಂದಿಗೆ ಉತ್ತರಿಸಿದರು.
ಗಡಿ ರಕ್ಷಣೆಗೆ ಸರ್ವಪಕ್ಷಗಳು ಬದ್ಧ: ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸಲಹಾ ಸಮಿತಿಯವರು ಕರ್ನಾಟಕದವರ ಮೇಲೆ ಪ್ರಧಾನಿಗಳಿಗೆ ದೂರು ನೀಡಿದ್ದಾರೆ. ಅವರು ಪ್ರಧಾನಿಗಲ್ಲ, ವಿಶ್ವಕ್ಕೆ ದೂರು ಕೊಡಲಿ ನಾಡು, ನುಡಿ, ಗಡಿ ರಕ್ಷಣೆಗೆ ಎಲ್ಲರೂ ಬದ್ಧರಾಗಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ವಿಧಾನಸಭೆಯಲ್ಲಿ ಸರ್ವಪಕ್ಷಗಳು ತೀರ್ಮಾನ ತೆಗೆದುಕೊಂಡಿದೇವೆ. ವಿಧಾನಸಭಾ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ನಾನು ಬದ್ಧ. ಬರೀ ನಾನು ಮಾತ್ರವಲ್ಲ,
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲರೂ ಸೇರಿ ನಮ್ಮ ನಾಡಿನ ರಕ್ಷಣೆಗೆ ಬದ್ದರಾಗಿದ್ದೇವೆ ಎಂದು ತಿಳಿಸಿದರು. ಜನಾರ್ಧನ ರೆಡ್ಡಿ ಪಕ್ಷ ರಚನೆ ಮಾಡ್ತೋರೋ ಬಿಡ್ತಾರೋ ಗೊತ್ತಿಲ್ಲ, ಮದುವೆಗೆ ಹೆಣ್ಣು ಗುರುತಾಗಿಲ್ಲ, ಅವರು ಪಕ್ಷ ರಚನೆ ಮಾಡಲಿ ಅಮೇಲೆ ಆ ಬಗ್ಗೆ ಮಾತನಾಡುತ್ತೇನೆ. ಈಗಲೇ ಈ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಪ್ರಶ್ನೆಯೊದಕ್ಕೆ ಉತ್ತರಿಸಿದ ಅವರು, ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ವಿಚಾರ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ನನಗೆ ಮಂತ್ರಿಸ್ಥಾನ ಸಿಗತ್ತೊ, ಬಿಡತ್ತೊ ಅದೂ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಜೆಡಿಎಸ್‌ನಿಂದ ರೈತರ ಸಮಸ್ಯೆಗೆ ಪರಿಹಾರ: ಎಚ್.ಡಿ.ಕುಮಾರಸ್ವಾಮಿ
ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರು ಬಂದಿರುವುದು ಶಿವಮೊಗ್ಗ ನಗರದ ಪುಣ್ಯ. ಆರ್‌ಎಸ್‌ಎಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಅದು ಆರ್‌ಎಸ್‌ಎಸ್‌ನ ಎಂದಿನ ಕಾರ್ಯಕ್ರಮ
- ಕೆ.ಎಸ್.ಈಶ್ವರಪ್ಪ, ಶಾಸಕ