ಬರ ಪರಿಹಾರ ಕುರಿತ ನಿಲುವಳಿ ಸೂಚನೆ ಮೇಲಿನ ಚರ್ಚೆಯ ವೇಳೆ ವಿಪಕ್ಷ ನಾಯಕ ಅಶೋಕ್ ಅವರು, ಸಿದ್ದರಾಮಯ್ಯ ಅವರು ತಮ್ಮ ಮೊದಲ ಸರ್ಕಾರದಲ್ಲಿ ಇದ್ದಂತೆ ಇಲ್ಲ. ಗರ ಬಡಿದಂತೆ, ಗಾಳಿ ಹೊಡೆದಂತೆ ಆಗಿದ್ದೀರಿ. ಈ ರೀತಿಯ ಸಿದ್ದರಾಮಯ್ಯ ಅವರನ್ನು ನಾವು ನೋಡಿಲ್ಲ. ಜೆಡಿಎಸ್ ನಾಯಕ ರೇವಣ್ಣ ಅವರ ಜೊತೆ ಹೋಗಿ ನಿಮಗೆ ಹಿಡಿದಿರುವ ಗರ ಅಥವಾ ಹೊಡೆದಿರುವ ಗಾಳಿ ದೂರವಾಗಲಿದೆ ಎಂದು ಛೇಡಿಸಿದರು.
ವಿಧಾನಸಭೆ (ಡಿ.6) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಟ ಮಂತ್ರ ಮಾಡುವ ಕುರಿತು ಮಂಗಳವಾರ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.
ಬರ ಪರಿಹಾರ ಕುರಿತ ನಿಲುವಳಿ ಸೂಚನೆ ಮೇಲಿನ ಚರ್ಚೆಯ ವೇಳೆ ವಿಪಕ್ಷ ನಾಯಕ ಅಶೋಕ್ ಅವರು, ಸಿದ್ದರಾಮಯ್ಯ ಅವರು ತಮ್ಮ ಮೊದಲ ಸರ್ಕಾರದಲ್ಲಿ ಇದ್ದಂತೆ ಇಲ್ಲ. ಗರ ಬಡಿದಂತೆ, ಗಾಳಿ ಹೊಡೆದಂತೆ ಆಗಿದ್ದೀರಿ. ಈ ರೀತಿಯ ಸಿದ್ದರಾಮಯ್ಯ ಅವರನ್ನು ನಾವು ನೋಡಿಲ್ಲ. ಜೆಡಿಎಸ್ ನಾಯಕ ರೇವಣ್ಣ ಅವರ ಜೊತೆ ಹೋಗಿ ನಿಮಗೆ ಹಿಡಿದಿರುವ ಗರ ಅಥವಾ ಹೊಡೆದಿರುವ ಗಾಳಿ ದೂರವಾಗಲಿದೆ ಎಂದು ಛೇಡಿಸಿದರು.
ಹೀಗೆ ಬಿಟ್ಟರೆ ವಿಶ್ವದ ಸಂಪತ್ತನ್ನೂ ಮುಸ್ಲಿಮರಿಗೆ ಹಂಚಲು ಸಿದ್ದು ರೆಡಿ: ಅಶೋಕ್
ಇದಕ್ಕೆ ರೇವಣ್ಣ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರಿಗೆ ಯಾರೂ ಏನೇ ಮಾಟ, ಮಂತ್ರ ಮಾಡಿದರೂ ಏನೂ ಆಗಲ್ಲ. ಅದು ಮಾಡಿದವರಿಗೇ ವಾಪಸ್ ತಟ್ಟುತ್ತದೆ ಎಂದು ಹೇಳಿದರು. ಇದಕ್ಕೆ ಅಶೋಕ್, ಇದು ನನ್ನ ಮಾತಲ್ಲ. ಮಾಜಿ ಸಚಿವ ಎಚ್.ಆಂಜನೇಯ ಅವರೇ 2025-16ರಲ್ಲಿ ಇದ್ದ ಸಿದ್ದರಾಮಯ್ಯ ಅವರೇ ಬೇರೆ, ಈಗಿನ ಸಿದ್ದರಾಮಯ್ಯ ಅವರೇ ಬೇರೆ ಎಂದು ಹೇಳಿದ್ದಾರೆ. ಅದನ್ನು ನಾನು ಪ್ರಸ್ತಾಪಿಸಿದೆ ಎಂದರು.
ದೇಶದ ಸಂಪತ್ತು ಮುಸ್ಲಿಮರಿಗೆ ಹಂಚುವ ಮಾತು; ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ಕಿಡಿ
ಅಶೋಕ್ ನೆರವಿಗೆ ಯತ್ನಾಳ್
ಸದನದ ಮೊದಲ ದಿನ ವಿಪಕ್ಷ ನಾಯಕ ಅಶೋಕ್ ಅವರನ್ನು ಅಭಿನಂದಿಸಿ ಮಾತನಾಡಲು ನಿರಾಕರಿಸಿದ್ದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ಅಶೋಕ್ ಅವರ ನೆರವಿಗೆ ಬಂದ ಘಟನೆ ಗಮನ ಸೆಳೆಯಿತು. ಅಶೋಕ್ ಅವರು ತಮ್ಮ ಮಾತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗರ ಬಡಿದಂತಿದ್ದೀರಿ ಎಂದು ಹೇಳಿದ್ದು ಯಾವ ಅರ್ಥದಲ್ಲಿ ಎಂದರೆ, ಮೊದಲಿನ ಸಿದ್ದರಾಮಯ್ಯ ಆಗಿದ್ದರೆ ಬರ ನಿರ್ವಹಣೆ ಸರಿಯಾಗಿ ಆಗುತ್ತಿತ್ತು ಎಂದು. ನೀವು ಯಾವುದಕ್ಕೂ ಅಂಜಬೇಡಿ. ದೇವರಿದ್ದಾನೆ. ಮೊದಲಿನ ಸಿದ್ದರಾಮಯ್ಯ ಆಗಿಯೇ ಇರಿ. 5 ವರ್ಷ ನೀವೇ ಮುಖ್ಯಮಂತ್ರಿ ಯಾಗಿ ಉಳಿಯಲಿ ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ ಎಂದು ಯತ್ನಾಳ ಹೇಳಿದರು