ಅಥಣಿ ವಿಧಾನಸಭಾ ಕ್ಷೇತ್ರಕ್ಕೆ 2,741 ಕೋಟಿ ರೂಪಾಯ ಅನುದಾನ ತಂದು ಅಭಿವೃದ್ದಿ ಮಾಡಿರುವ ಮಹೇಶಣ್ಣಾ, ನೀವು ಸ್ಟ್ರಾಂಗ್ ಆಗಬೇಕು. ಬರೀ ಕುಂಯ್ ಕುಂಯ್ ಕುಂಯ್ ಅನ್ಕೊಂತ ಕುಂತ್ರ ಆಗಲ್ಲ.
ಬೆಳಗಾವಿ (ಏ.26): ಅಥಣಿ ವಿಧಾನಸಭಾ ಕ್ಷೇತ್ರಕ್ಕೆ 2,741 ಕೋಟಿ ರೂಪಾಯ ಅನುದಾನ ತಂದು ಅಭಿವೃದ್ದಿ ಮಾಡಿರುವ ಮಹೇಶಣ್ಣಾ, ನೀವು ಸ್ಟ್ರಾಂಗ್ ಆಗಬೇಕು. ಬರೀ ಕುಂಯ್ ಕುಂಯ್ ಕುಂಯ್ ಅನ್ಕೊಂತ ಕುಂತ್ರ ಆಗಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಳಿದರು.
ಅಥಣಿಯಲ್ಲಿ ಬುಧವಾರ ಸಿದ್ದೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ಅಥಣಿ ಬಹಳ ಚರ್ಚೆಯ ವಸ್ತು ಆಗಿದೆ. ರಮೇಶ ಹಾಗೂ ಮಹೇಶ ನೇತೃತ್ವದಲ್ಲಿ 17 ಮಂದಿ ಬಂದಿದ್ರಿಂದ ಸರ್ಕಾರ ಆಯ್ತು. ಅವರು ಬಂದ ಮೇಲೆ ಮಂತ್ರಿಯಾದಿರಿ. ಯಡಿಯೂರಪ್ಪ ಸವದಿಯವರನ್ನ ಉಪಮುಖ್ಯಮಂತ್ರಿ ಮಾಡಿದರು. ಮಹೇಶ ಕುಮಟಳ್ಳಿಯವರು ಹಾಗೂ ನಾನು ಯಾವಾಗೋ ಮಂತ್ರಿ ಆಗಬೇಕಿತ್ತು. ರಾಜ್ಯದಲ್ಲಿ ನನಗೇನು ಸಿನಿಯಾರಿಟಿ ಕಮ್ಮಿ ಇದೆ. ಮೋಸ್ಟ್ ಸಿನಿಯರ್ ಮನುಷ್ಯ ನಾನು ಎಂದು ಹೇಳಿದರು.
ಮಹೇಶ್ ಕುಮಟಳ್ಳಿ, ಯತ್ನಾಳ್ ಬಳಿ ಟ್ರೈನಿಂಗ್ ತಗೋಬೇಕು: ರಮೇಶ್ ಜಾರಕಿಹೊಳಿ ಸಲಹೆ
ಸೀನಿಯಾರಿಟಿ ಇದ್ದರೂ ಮಂತ್ರಿ ಸ್ಥಾನ ತ್ಯಾಗ ಮಾಡೀವಿ: ಯಡಿಯೂರಪ್ಪನವರು ಆದರೆ, 17 ಜನ ಬರ್ತಿದ್ದಾರೆ, ಅವರನ್ನು ಮಂತ್ರಿ ಮಾಡಬೇಕಾಗಿದೆ. ನೀವು ಮಂತ್ರಿ ಸ್ಥಾನ ತ್ಯಾಗ ಮಾಡಬೇಕು ಅಂತ ಹೇಳಿದ್ದರಿಂದ ತ್ಯಾಗ ಮಾಡೀವಿ ಎಂದು ಹೇಳಿದರು. ಆದರೂ, ನಾನು ಶಾಸಕನಾಗಿಯೇ ವಿಜಯಪುರವನ್ನು ಸಿಂಗಪುರ ಮಾಡಿನಿ. ಇನ್ನು ಮಹೇಶ ಕುಮಟಹಳ್ಳಿ ಅವರು, 2,741 ಕೋಟಿ ರೂಪಾಯಿ ಅಥಣಿಗೆ ಅನುದಾನ ತಂದು ಅಭಿವೃದ್ದಿ ಮಾಡಿದ್ದಾರೆ. ಮಹೇಶಣ್ಣ ನೀವು ಸ್ಟ್ರಾಂಗ್ ಆಗಬೇಕು. ನೀವು ಸ್ಟ್ರಾಂಗ್ ಆಗಬೇಕು ಅಂದ್ರೆ ಸ್ಟ್ರಾಂಗ್ ಟೀ ಕುಡಿಬೇಕು. ಬರೀ ಕುಂಯ್ ಕುಂಯ್ ಕುಂಯ್ ಅನ್ಕೊಂತ ಕುಂತ್ರ ಆಗಲ್ಲ. ಜೊಳ್ಳ ಜೊಟ್ಟ ಹೊರಗೋತ್ತು ಗಟ್ಟಿಕಾಳು ಒಳಗುಳಿತು ಎಂದು ಸಲಹೆ ನೀಡಿದರು.
ಕುರುಬರನ್ನು ಎಸ್‌ಟಿಗೆ ಸೇರಿಸ್ತೀವಿ: ಎಲ್ಲರಿಗೂ ಮೀಸಲಾತಿ ಘೋ಼ಷಣೆ ಮಾಡಿದ್ದು ನಮ್ಮ ಸರ್ಕಾರ. ಮೀಸಲಾತಿಗೆ ವಿರೋಧ ಮಾಡಿದವರು ಇವತ್ತು ಹೊರಗೆ ಹೋಗಿದ್ದಾರೆ. ಕುರುಬ ಸಮಾಜವನ್ನು ನಾವು ಎಸ್ಟಿಗೆ ಸೇರಿಸಿಯೇ ಸೇರಿಸ್ತಿವಿ. ಡಿಕೆ ಶಿವಕುಮಾರ್ ಎನು ಹೇಳಿದ್ದಾರೆ ಗೊತ್ತಾ? ಎಲ್ಲರಿಗೂ ಕೊಟ್ಟ ಮೀಸಲಾತಿ ವಾಪಸ್ ಪಡೀತಿವಿ ಅಂತ ಹೇಳಿದ್ದಾರೆ. ಇದಕ್ಕೆ ನೀವು ಒಪ್ಪಿಗೆ ಕೊಡ್ತಿರಾ?. ಕಾಂಗ್ರೆಸ್‌ನವರ ಗ್ಯಾರಂಟಿ ಕಾರ್ಡ್ ಹೋಗಿ ತಿಪ್ಪೆಯಲ್ಲಿ ಬಿದ್ದಿದೆ. 10 ಕೆಜಿ ಅಕ್ಕಿ ಫ್ರೀಯಾಗಿ ಕೊಡ್ತಿವಿ ಅಂತಾರೆ. ನಾವೇನ್ ಬೀದಿಲಿ ಬಿದ್ದಿದಿವಾ ಎಂದು ಕಿಡಿ ಕಾರಿದರು.
ದೇಶದಲ್ಲಿ ಕಾಂಗ್ರೆಸ್ ದಿವಾಳಿ ಆಗಿದೆ: ಬಟಾಟಿಯಿಂದ ಬಂಗಾರ ಮಾಡುವ ವಿದ್ಯುತ್ ಅನ್ನ ಲೀಟರ್ ನಲ್ಲಿ ಅಳೆಯುವ ಲೀಡರ್ ಕಾಂಗ್ರೆಸ್ ನಾಯಕರಾಗಿದ್ದಾರೆ. ಕಾಂಗ್ರೇಸ್ ದೇಶದಲ್ಲಿ ದಿವಾಳಿ ಆಗಿದೆ. ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಿದ್ದರಿಂದ ದೇಶ ಸುರಕ್ಷವಾಗಿದೆ. ಜಗತ್ತಿನ ಒಂದು ಶಕ್ತಿಯಾಗಿ ಭಾರತ ಬೆಳೆಯುತ್ತದೆ. ಅರೆ ಹುಚ್ಚ ರಾಹುಲ್ ಗಾಂಧಿ ಪ್ರಧಾನಿ ಆಗಿದ್ದರೆ ನಮ್ಮ ಭವಿಷ್ಯ ಎನಾಗ್ತಿತ್ತು. ಗೋ ಹತ್ಯೆ ನಿಷೇಧ ಖಾಯ್ದೆ ಜಾರಿಗೆ ತಂದಿದ್ದೆವೆ. ಪಿ ಎಫ್ ಐ ಬ್ಯಾನ್ ಮಾಡಿದ್ದೆವೆ ಅದನ್ನ ವಾಪಸ್ ಪಡೀತಿರಾ ಎಂದು ಪ್ರಶ್ನೆ ಮಾಡಿದರು.
ಮಂಡ್ಯಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್, ಜೆಡಿಎಸ್ ಭದ್ರಕೋಟೆಯಲ್ಲಿ ಭರ್ಜರಿ ರೋಡ್ ಶೋ!
ಶೆಟ್ಟರ್‌ನ ನಾನು ಸೋಲಿಸ್ತೀನಿ, ಸವದಿನ ನೀವು ಸೋಲಿಸಿ: ನಂತರ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಹುಬ್ಬಳ್ಳೀಲಿ ಜಗದೀಶ ಶೆಟ್ಟರ ನಾ ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಸವದಿಯನ್ನ ಸೋಲಿಸುವ ಜವಾಬ್ದಾರಿ ನೀವು ತಗೊಳ್ಳಿ. 15 ರಿಂದ 30 ಸಾವಿರ ಅಂತರದಿಂದ ಮಹೇಶ ಗೆಲ್ತಾರೆ. ಇದನ್ನ ತಡಿಯೋಕೆ ಯಾರನ್ನು ತಡೆಯೋಕೆ ಆಗಲ್ಲ. ಕಾಂಗ್ರೇಸ್ ಮುಳುಗುತ್ತಿರುವ ಹಗಡು, ಉತ್ತರ ಪ್ರದೇಶದಲ್ಲಿ ಕೇವಲ 4 ರಿಂದ 5 ಸೀಟ್ ಗೆದ್ದಿದ್ದಾರೆ. ರಾಹುಲ್ ಗಾಂಧಿ, ಅಮೀತ್ ಷಾ ಮೋದಿ ಮುಂದೆ ಸಮ ಆಗಲು ಸಾಧ್ಯವೇ? ಮೋದಿ, ಅಮೀತ್ ಷಾ ಸೇರಿ. ಕರ್ನಾಟಕದಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿಸಲು ನಿರ್ಧಾರ ಮಾಡಿದ್ದಾರೆ ಎಂದರು.