ಮಹೇಶ್‌ ಕುಮಟಳ್ಳಿ, ಯತ್ನಾಳ್‌ ಬಳಿ ಟ್ರೈನಿಂಗ್‌ ತಗೋಬೇಕು: ರಮೇಶ್‌ ಜಾರಕಿಹೊಳಿ ಸಲಹೆ

By Sathish Kumar KH  |  First Published Apr 26, 2023, 3:01 PM IST

ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಬಳಿ ಒಂದು ವಾರಗಳ ಕಾಲ ಮಹೇಶ್ ಕುಮಟಳ್ಳಿ ಟ್ರೈನಿಂಗ್ ತಗೋಬೇಕು ಎಂದು ಮಾಜಿ ಸಚಿವ ರಮೇಶ್‌ ಜಾರಕೊಹೊಳಿ ಸಲಹೆ ನೀಡಿದ್ದಾರೆ.


ಬೆಳಗಾವಿ (ಏ.26): ಮುಂದಿನ ದಿನಗಳಲ್ಲಿ ಮಹೇಶ್ ಕುಮಟಳ್ಳಿ ಸಾಪ್ಟ್ ಆಗಿ ಮಾತಾಡೋದು ಬಿಡಬೇಕು. ಪಂಚಮಸಾಲಿ ಸಮುದಾಯದಲ್ಲಿ ಹುಟ್ಟಿ ಅವರ ರಕ್ತದಂತೆ ಮುಂದುವರೆಯಬೇಕು. ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಬಳಿ ಒಂದು ವಾರಗಳ ಕಾಲ ಮಹೇಶ್ ಕುಮಟಳ್ಳಿ ಟ್ರೈನಿಂಗ್ ತಗೋಬೇಕು ಎಂದು ಮಾಜಿ ಸಚಿವ ರಮೇಶ್‌ ಜಾರಕೊಹೊಳಿ ಸಲಹೆ ನೀಡಿದ್ದಾರೆ.

ಅಥಣಿಯ ಸಿದ್ದೇಶ್ವರ ದೇವಸ್ಥಾನದ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದರು. ಪಂಚಮಸಾಲಿ ಮಸುದಾಯದಲ್ಲಿ ಜನಿಸಿದ ಮಹೇಶ್ ಕುಮಟಳ್ಳಿ ಸಾಪ್ಟ್ ಆಗಿ ಮಾತನಾಡದೇ ಖಡಕ್‌ ಮಾತಗಳನ್ನಾಡಬೇಕು. ಮಾತಾಡೋದು ಬಸವನಗೌಡ ಪಾಟೀಲ್‌ ಯತ್ನಾಳ್‌ ಬಳಿ ಖಡಕ್‌ ಮಾತಗಳನ್ನಾಡುವ ಬಗ್ಗೆ ತರಬೇತಿ ಪಡೆದುಕೊಂಡು, ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ ಲಕ್ಷ್ಮಣ ಸವದಿಗೆ ಬುದ್ದಿ ಕಲಿಸಬೇಕು. ಈ ಹಿಂದೆ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿಯೇ ಅವರನ್ನು ಸೋಲಿಸಿ ಬುದ್ಧಿ ಕಲಿಸಬೇಕೆಂದುಕೊಂಡಿದ್ದೆವು. ಆದರೆ, ಬಿ.ಎಸ್. ಯಡಿಯೂರಪ್ಪ ಹಾಗೂ ಕಟೀಲು ಹೇಳಿದ ಕಾರಣ ನಾವು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಿಂದೆ ಸರಿದೆವು ಎಂದು ಹೇಳಿದರು.

Tap to resize

Latest Videos

ರಾಜ್ಯದಲ್ಲೂ ಡಬ್ಬಲ್ ಇಂಜಿನ್ ಸರ್ಕಾರ ಬರಲಿ: ಯೋಗಿ ಆಡಳಿತ ಕೊಂಡಾಡಿದ ಸುಮಲತಾ

ಬೋಗಸ್‌ ಬಿಲ್‌ ಮಾಡಿದ್ದನ್ನು ಆಡಿಟ್‌ ಮಾಡ್ಸಿ ಜೈಲಿಗೆ ಕಳಿಸ್ತೀವಿ: ಅಪೆಕ್ಸ್ ಬ್ಯಾಂಕ್‌ಗೂ ಸವದಿ ಅವರನ್ನ ಕಳಿಸಿದ್ದೆವು. ಅವನೇನು ದೊಡ್ಡ ಗಂಡಸು ಅಂತಾ ಅಂದು ಗೆದ್ದು ಬಂದಿಲ್ಲ. ಚುನಾವಣೆ ಮುಗಿದ ಮಾರನೇ ದಿನ ನಾವೆಲ್ಲರೂ ಡಿಸಿಸಿ ಬ್ಯಾಂಕ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ. ಕೃಷಿ ಪತ್ತಿನ ಸಂಘದ ಜನರಿಗೆ ಯಾರು ಹೆದರಬೇಡಿ. ಸೊಸೈಟಿಯವರು ಬೋಗಸ್ ಬಿಲ್ ತೆಗೆದಿದ್ದು, ಅವುಗಳನ್ನ ಅಡಿಟ್ ಮಾಡಿ ಜೈಲಿಗೆ ಹಾಕುವ ಕೆಲಸ ಮಾಡ್ತೀವಿ. ಈ ಚುನಾವಣೆ ಧರ್ಮ ಯುದ್ದ ಇದ್ದಹಾಗೆ. ಯಡಿಯೂರಪ್ಪ ಹಾಗೂ ಮಹೇಶ್ ಕುಮಟಳ್ಳಿ ಬೆನ್ನಿಗೆ ಸವದಿ ಚೂರಿ ಹಾಕಿದ್ದಾರೆ ಎಂದು ಕಿಡಿಕಾರಿದರು.

ಸವದಿನ ಕೆಡವಿ ಫ್ಯಾಕ್ಟರಿ ಕಬ್ಬು ಕಡಿಯೋಕೆ ಕಳಿಸೋಣ:  ಬಿಜೆಪಿ ಹೈಕಮಾಂಡ್ ಕಿವಿಯಲ್ಲಿ ತುಂಬಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಸಿದ್ದೇ ಸವದಿ ಆಗಿದ್ದಾರೆ. ಯಡಿಯೂರಪ್ಪರ ಸ್ಥಾನ ತುಂಬುತ್ತಾರೆ ಅಂತಾ ಸವದಿಯನ್ನ ಡಿಸಿಎಂ ಮಾಡಿದ್ದರು. ಆದರೆ, ಸವದಿ ಯಾರಿಗೂ ಉಪಕಾರ ಮಾಡಿಲ್ಲ ಅವರ ಮನೆ ತುಂಬಿಕೊಂಡಿದ್ದಾನೆ. ಈ ಮಹಾನುಭಾವ 3 ಬಾರಿ ಶಾಸಕರಾದ್ರೂ ಕೆಲವು ಕಡೆ ಹನಿ ನೀರನ್ನು ಕೊಟ್ಟಿಲ್ಲ. ಇಂದು ಸ್ವಾಭಿಮಾನಕ್ಕೆ ಪೆಟ್ಟು ಬಿತ್ತು ಎಂದು ಹೇಳುತ್ತಾನೆ. ನಾವು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಾಗ ನಾನು ಮಂತ್ರಿಯಾಗುವುದಿಲ್ಲ ಅಂತಾ ಗಂಡಸನಾಗಿದ್ರೇ ಹೇಳಬೇಕಿತ್ತು. ಅವನ್ನ ಕೆಡವಿ ಎಲ್ಲಾ ಖಾಲಿ ಮಾಡಿ ಉಗಾರ್ ಫ್ಯಾಕ್ಟರಿ ಕಬ್ಬು ಕಡಿಯಲು ಕಳ್ಸೋಣ‌ ಎಂದರು.

ಬಿಜೆಪಿ ಪ್ರಚಾರಕ್ಕೆ ಅಮೆರಿಕ ಅಧ್ಯಕ್ಷರನ್ನೇ ಕರೆಸ್ಲಿ: ಕುಮಾರಸ್ವಾಮಿ ಲೇವಡಿ

ಸಿದ್ದರಾಮಯ್ಯನ್ನ ಮುಗಿಸಾಕೆ ಹೋಗ್ಯಾನ: ಈಗಾಗಲೇ ಮೊದಲು ಡಿಬಿ ಪವಾರ್‌ಗೆ, ಲೀಲಾವತಿಗೆ, ಯಡಿಯೂರಪ್ಪ, ಸಂತೋಷ್ ಅವರನ್ನು ಮುಗಿಸಿರುವ ಸವದಿ ಈಗ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಮುಗಿಸುತ್ತಾರೆ. ಸವದಿಯನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ದರಾಮಯ್ಯನವರಿಗೆ ಇಷ್ಟ ಇರಲಿಲ್ಲ. ಯಡಿಯೂರಪ್ಪ ಅವರ ಮುಂದೆ ರಮೇಶ್, ಮಹೇಶ್ ಕಾಂಗ್ರೆಸ್ ಹೋಗ್ತಾರೆ ಅಂತಾ ಚಾಡಿ ಹೇಳಿದ್ದರು. ಆದರೆ, ನಾವು ಪಕ್ಷ ಬಿಡುವುದಿಲ್ಲ ಇಲ್ಲೇ ಕೊನೆವರೆಗೂ ಇರುತ್ತೇವೆ. ಈಗಾಗಲೇ ಲಕ್ಷ್ಮಣ ಸವದಿ ಮುಕ್ತ ಬಿಜೆಪಿ ಆಗಿದೆ. ಇದೀಗ ಅಥಣಿ ಸವದಿ ಮುಕ್ತ ಆಗಲಿ ಎಂದು ಹೇಳಿದರು.

click me!