ಬಸವರಾಜ ಬೊಮ್ಮಾಯಿ ರಾಜ್ಯದ ಭ್ರಷ್ಟಶೂರ ಸಿಎಂ: ಸುರ್ಜೇವಾಲಾ ವಾಗ್ದಾಳಿ

Published : Mar 04, 2023, 07:34 AM IST
ಬಸವರಾಜ ಬೊಮ್ಮಾಯಿ ರಾಜ್ಯದ ಭ್ರಷ್ಟಶೂರ ಸಿಎಂ: ಸುರ್ಜೇವಾಲಾ ವಾಗ್ದಾಳಿ

ಸಾರಾಂಶ

ಬಿಜೆಪಿ ಅಂದ್ರೆ, ಭ್ರಷ್ಟಜನತಾ ಪಾರ್ಟಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಭ್ರಷ್ಟಶೂರ ಬೊಮ್ಮಾಯಿ ಎಂದು ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಾಗ್ದಾಳಿ ನಡೆಸಿದರು.

ಚಿಕ್ಕಮಗಳೂರು (ಮಾ.4) : ಬಿಜೆಪಿ ಅಂದ್ರೆ, ಭ್ರಷ್ಟಜನತಾ ಪಾರ್ಟಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಭ್ರಷ್ಟಶೂರ ಬೊಮ್ಮಾಯಿ ಎಂದು ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಾಗ್ದಾಳಿ ನಡೆಸಿದರು.

ಶುಕ್ರವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌(Congress Guarantee Card) ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿರೋದು 40 ಪರ್ಸೆಂಟ್‌ ಸರ್ಕಾರ(40 percent Govt). ಇದು, ಇಡೀ ರಾಷ್ಟ್ರಕ್ಕೆ ಗೊತ್ತಿರುವ ವಿಷಯ. ಈ ರಾಜ್ಯದ ಸಿಎಂ ಬಸವರಾಜ್‌ ಬೊಮ್ಮಾಯಿ(CM Basavaraj Bommai) ಯಾವುದೇ ರಾಜ್ಯಕ್ಕೆ ಹೋಗಲಿ ಅಲ್ಲಿನ ಜನ ಅವರಿಗೆ 40 ಪರ್ಸೆಂಟ್‌ ಬೋರ್ಡ್‌ ಹಾಕಿ ಸ್ವಾಗತ ಕೋರುತ್ತಾರೆ. ಅವರಿಗೆ ಪೇ ಸಿಎಂ ಹೆಸರೂ ಇದೆ ಎಂದು ಗಂಭೀರ ಆರೋಪ ಮಾಡಿದರು.

 

‘ಆಪರೇಷನ್‌ ಮಾಡಾಳು’ ರಹಸ್ಯ ದಾಳಿ ಹೇಗಾಯ್ತು ಗೊತ್ತಾ?: ಐದಾರು ದಿನಗಳಿಂದ ದಾಳಿಗೆ ಸಿದ್ಧತೆ

ಗುತ್ತಿಗೆ ಬಿಲ್‌ ಪಡೆಯಲು ಸಚಿವರಿಗೆ, ಶಾಸಕರಿಗೆ 40 ಪರ್ಸೆಂಟ್‌ ಕಮಿಷನ್‌ ಕೊಡಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿದೆ ಎಂದು 50 ಸಾವಿರ ಸದಸ್ಯರನ್ನು ಹೊಂದಿದÜ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ(State President of Contractors Association Kempanna) ಪ್ರಧಾನಿ ಮೋದಿಯವರಿ(PM Narendra Modi)ಗೆ ಪತ್ರ ಬರೆದಿದ್ದರು. ಪ್ರಧಾನಿಯವರು ಕರ್ನಾಟಕಕ್ಕೆæ 8 ಬಾರಿ ಬಂದು ಹೋಗಿದ್ದರೂ ಭ್ರಷ್ಟಾಚಾರ ಆರೋಪದ ಬಗ್ಗೆ ಚಕಾರ ಎತ್ತಿಲ್ಲ ಎಂದು ಆಕ್ಷೇಪಿಸಿದರು.

40 ಪರ್ಸೆಂಟ್‌ ಕಮಿಷನ್‌ ಕೊಡದಿದ್ದರಿಂದ ಬಿಲ್‌ ಬಿಡುಗಡೆಯಾಗಿಲ್ಲ ಎಂದು ಬೆಳಗಾವಿ ಬಿಜೆಪಿ ಕಾರ್ಯಕರ್ತ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡರು, ಅವರ ಮನೆಗೆ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್‌(DK Shivakumar) ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದ್ದರು.ಅವರ ಕುಟುಂಬ ತುಂಬಾ ಕಷ್ಟದಲ್ಲಿದೆ. ಪ್ರಧಾನಿ ಬೆಳಗಾವಿಗೆ ಬಂದಾಗ ನೊಂದ ಕುಟುಂಬವನ್ನು ಭೇಟಿ ಮಾಡದೆ ಹೋಗಿದ್ದಾರೆ ಎಂದರು.

ತುಮಾಕೂರು,ಬೆಂಗಳೂರಿನಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಅವರಿಗೆ ದುಡ್ಡಿನ ದಾಹ ಇದ್ರೆ, ಕಾಂಗ್ರೆಸ್‌ ಪಕ್ಷ ಮನೆ ಮನೆಗಳಿಗೆ ತೆರಳಿ ಹಣ ಸಂಗ್ರಹ ಮಾಡಿ ಅವರಿಗೆ ಕೊಡಲು ಸಿದ್ಧವಿದೆ ಎಂದು ವಾಗ್ದಾಳಿ ನಡೆಸಿದರು.

ಪೊಲೀಸ್‌ ಸಬ್‌ ಇನ್ಸ್‌ಸ್ಪೆಕ್ಟರ್‌ ಪೋಸ್ಟಿಂಗ್‌ಗೆ ಲಂಚ, ಖಾಸಗಿ ಶಾಲೆಗಳ ಅನುದಾನ ಮಂಜೂರಿಗೆ ಕಮಿಷನ್‌, ಇಷ್ಟೆಅಲ್ಲದೆ, ಮಠಗಳ ಅನುದಾನ ಬಿಡುಗಡೆಗೆ ಶೇ.10 ರಿಂದ 30 ರಷ್ಟುಕಮಿಷನ್‌, ಸಹಾಯಕ ಉಪನ್ಯಾಸಕರ ನೇಮಕಾತಿ, ವಿವಿಧ ಇಲಾಖೆಗಳ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌,ಜ್ಯೂನಿಯರ್‌ ಎಂಜಿನಿಯರ್‌ ನೇಮಕಾತಿ, ಡಿಸಿಸಿ ಬ್ಯಾಂಕಿನ ಖಾಲಿ ಹುದ್ದೆಗಳ ಭರ್ತಿ, ಪೌರ ಕಾರ್ಮಿಕರು ಹೀಗೆ ಹುದ್ದೆಗಳಿಗೆ ಹಣ ಪಡೆದು ಭರ್ತಿ ಮಾಡಲಾಗಿದೆ. ರೈತ ಮಕ್ಕಳು ಜಮೀನು ಮಾರಿ ಲಂಚ ಕೊಟ್ಟು ಸರ್ಕಾರಿ ಕೆಲಸಕ್ಕೆ ಸೇರುವದ ಪರಿಸ್ಥಿತಿ ಬಿಜೆಪಿÜ ನಿರ್ಮಾಣ ಮಾಡಿದೆ ದೂರಿದರು.

ಪೊಲೀಸ್‌ ಸಬ್‌ಇನ್ಸ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮ ಸಂಬಂಧ ಓರ್ವ ಹಿರಿಯ ಪೊಲೀಸ್‌ ಅಧಿಕಾರಿ ಜೈಲು ಪಾಲಾಗಿದ್ದಾರೆ. ಈ ಪ್ರಕರಣ ನಡೆದ ಸಂದರ್ಭದಲ್ಲಿ ರಾಜ್ಯದಲ್ಲಿ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಕೆಎಸ್‌ಡಿಎಲ್‌ ಟೆಂಡರ್‌ ಪಡೆಯಲು ಬಿಜೆಪಿ ಶಾಸಕ ಮಾಡಲ್‌ ವಿರೂಪಾಕ್ಷಪ್ಪ ಅವರ ಪುತ್ರ 40 ಲಕ್ಷ ರು. ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ಅವರ ಮನೆ ತಪಾಸಣೆಯಲ್ಲಿ ಸುಮಾರು 6 ಕೋಟಿ ರು. ಸಿಕ್ಕಿದೆ. ಈ ಹಿಂದೆ ಪ್ರಧಾನಿ ಮೋದಿಯವರು ಮಾತನಾಡುವಾಗ ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದಿದ್ದರು, ಆದರೆ, ಅವರದೇ ಪಕ್ಷದ ಸಚಿವರು, ಶಾಸಕರು ಹಣ ತಿಂದು ಲೂಟಿ ಮಾಡುತ್ತಿದ್ದಾರೆ. ಇದು, ಭ್ರಷ್ಟಜನತಾ ಪಾರ್ಟಿ, ಭ್ರಷ್ಟಶೂರ ಬೊಮ್ಮಾಯಿ ಎಂದು ಆರೋಪಿಸಿದರು.

ಬಸವರಾಜ್‌ ಪಾಟೀಲ್‌ ಯತ್ನಾಳ್‌ ಅವರು ಮುಖ್ಯಮಂತ್ರಿ ಹುದ್ದೆಯ ವ್ಯಾಪಾರ ಮಾಡುತ್ತಿದ್ದಾರೆ ಎಂದು ತಮ್ಮದೆ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದರು, ಹಾಗಾದರೆ ಬಸವರಾಜ್‌ ಬೊಮ್ಮಾಯಿ ಎಷ್ಟುಹಣ ಕೊಟ್ಟು ಈ ಹುದ್ದೆಗೆ ಬಂದಿದ್ದಾರೆ..? ಬಹಿರಂಗವಾಗಿ ಹೇಳಿ, ಇಲ್ಲವಾದ್ರೆ ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳಿ ಎಂದರು.

ಲೋಕಾಯುಕ್ತ ಇಲ್ಲದ ಕಾರಣ ಕಾಂಗ್ರೆಸ್‌ ಆಳ್ವಿಕೆಯಲ್ಲಿ ಇಂತಹ ಹಲವು ಕೇಸ್‌ ಮುಚ್ಚಿಹೋಗಿವೆ: ಸಿಎಂ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ, ಕೇರಳದ ಶಾಸಕ ರೋಜಿಜಾನ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌, ಪಕ್ಷದ ಹಿರಿಯ ಮುಖಂಡರಾದ ಸಿ.ಆರ್‌. ಸಗೀರ್‌ ಆಹ್ಮದ್‌, ಡಾ.ಬಿ.ಎಲ್‌.ಶಂಕರ್‌, ಡಿ.ಕೆ. ತಾರಾದೇವಿ, ಶಾಸಕ ಟಿ.ಡಿ. ರಾಜೇಗೌಡ, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್‌, ಮಾಜಿ ಶಾಸಕರಾದ ಶ್ರೀನಿವಾಸ್‌, ಎಸ್‌.ಎಂ. ನಾಗರಾಜ್‌, ಡಾ. ಡಿ.ಎಲ್‌. ವಿಜಯಕುಮಾರ್‌, ಎಚ್‌.ಡಿ. ತಮ್ಮಯ್ಯ, ಬಿ.ಎಚ್‌. ಹರೀಶ್‌, ಮಂಜೇಗೌಡ, ರೇಖಾ ಹುಲಿಯಪ್ಪಗೌಡ, ಎಂ.ಸಿ. ಶಿವಾನಂದಸ್ವಾಮಿ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ
ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ